ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋರಮಂಗಲ ಕಣಿವೆ ವಿಭಾಗದ ಕಂಠೀರವ ಸ್ಟೇಡಿಯಂ ಹತ್ತಿರ ರಾಜಕಾಲುವೆಯ ವಾರ್ಷಿಕ ನಿರ್ವಹಣಾ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವ ಗುತ್ತಿಗೆದಾರರಾದ ವಿ.ವಾಸು ರವರಿಗೆ 50,000 ರೂ. ದಂಡ ವಿಧಿಸಲಾಗಿದೆ.
ಕಾರ್ಯಪಾಲಕ ಅಭಿಯಂತರರು, ಬೃಹತ್ ನೀರುಗಾಲುವೆ-ಕೋರಮಂಗಲ ಕಣಿವೆ ವಿಭಾಗ ರವರ ಅಡಿಯಲ್ಲಿ ಗುತ್ತಿಗೆದಾರರಾದ ವಿ.ವಾಸು ಎಂಬುವವರು ಕಂಠೀರವ ಸ್ಟೇಡಿಯಂ ಹತ್ತಿರ ರಾಜಕಾಲುವೆಯ ವಾರ್ಷಿಕ ನಿರ್ವಹಣಾ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿರುವುದಿಲ್ಲ.
ಮುಂದುವರಿದು, ಸಾರ್ವಜನಿಕರಿಗೆ ಅನಾನುಕೂಲ ಉಂಟು ಮಾಡಿರುವ ಹಿನ್ನಲೆಯಲ್ಲಿ ಗುತ್ತಿಗೆ ಕರಾರಿನಂತೆ ಪರಿಶೋಧ 41(1) ಮತ್ತು 41(2) ರಂತೆ ಮೊದಲ ಕಂತಾಗಿ ರೂ.50,000/-ಗಳ ದಂಡವನ್ನು ವಿಧಿಸಲಾಗಿರುತ್ತದೆ.
ಕೇರಳದ ಕನ್ನಡಿಗರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸದಾ ಸಿದ್ಧ: ಸಚಿವ ಚಲುವರಾಯಸ್ವಾಮಿ
BIG NEWS: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ರಚನೆ: ಗೃಹ ಸಚಿವ ಡಾ.ಜಿ ಪರಮೇಶ್ವರ್