ಬೆಂಗಳೂರು: ಕಂದಾಯ ಇಲಾಖೆಯ ಒತ್ತಡದ ಕೆಲಸವನ್ನು ಕೂಡಲೇ ಕೆಲಸ ಮಾಡಿ. ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಮನವಿ ಮಾಡಿದ್ದಾರೆ.
ಈ ಕುರಿತಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವಂತ ಸಂಘ ಅಧ್ಯಕ್ಷ ಎ.ಅಮೃತ್ ರಾಜ್ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಂದಾಯ ಇಲಾಖೆ ಕುಂದು ಕೊರತೆಗಳ ಸಭೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಸಮೂಖದಲ್ಲಿ ದಿನಾಂಕ: 18.02.2025 ರಂದು ಸಂಜೆ 6:00 ಗಂಟೆಗೆ ಸಂಘದ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದು ಸದರಿ ಸಭೆಯಲ್ಲಿ ಕಂದಾಯ ಅಧಿಕಾರಿಗಳು / ಸಹ ಕಂದಾಯ ಅಧಿಕಾರಿಗಳು ಮಾತ್ರ ಭಾಗವಹಿಸಿ ಸಭೆಯಲ್ಲಿ ಚರ್ಚಿಸಿ/ತೀರ್ಮಾನವನ್ನು ತೆಗೆದುಕೊಂಡು ಈ ಕೆಳಕಂಡ ನ್ಯೂನ್ಯತೆಗಳ ಬಗ್ಗೆ ಕ್ರಮವಹಿಸಲು ಪಾಲಿಕೆಯ ಮುಖ್ಯಸ್ಥರಿಗೆ ನಮ್ಮ ಸಂಘದ ಪತ್ರದ ಮೂಲಕ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಲು ತೀರ್ಮಾನಿಸಲಾಗಿರುತ್ತದೆ.
1. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇ-ಆಸ್ತಿ ತಂತ್ರಾಂಶದಲ್ಲಿ ಖಾತಾ ಪ್ರಮಾಣ ಪತ್ರ ಪಡೆಯಲು ನೂರಾರು ಅರ್ಜಿಗಳು ಪ್ರತಿನಿತ್ಯ ಸ್ವೀಕರಿಸಲಾಗುತ್ತಿದ್ದು, ಸದರಿ ಅರ್ಜಿಗಳನ್ನು ಆ ದಿನವೇ ಕಾಲ ಕಾಲಕ್ಕೆ ವಿಲೇವಾರಿ ಮಾಡಲು ಮಾನ್ಯ ವಿಶೇಷ ಆಯುಕ್ತರು (ಕಂದಾಯ) ರವರು ಒತ್ತಡ ಹೇರುತ್ತಿರುವುದರಿಂದ ದಾಖಲಾತಿಗಳನ್ನು ಸರಿಯಾಗಿ ಪರಿಶೀಅಸಲು ಸಮಯಾವಕಾಶ ಸಾಲುತ್ತಿರುವುದಿಲ್ಲ. ಆದುದರಿಂದ ಸಲ್ಲಕೆಯಾಗುವ ಇ-ಆಸ್ತಿ ಅರ್ಜಿಗಳನ್ನು ಪರಿಶೀಲಿಸಿ ಅನುಮೋದಿಸಲು ಕನಿಷ್ಠ 7 ದಿನಗಳ ಸಮಯಾವಕಾಶ ನೀಡಲು ಕೋರಿದೆ.
2. ಇ-ಆಸ್ತಿ ತಂತ್ರಾಂಶದಲ್ಲಿ ಸಲ್ಲಿಕೆಯಾಗುವ ಮ್ಯುಟೇಷನ್ ಅರ್ಜಿ ಮತ್ತು ಹೊಸ ಖಾತಾ ಕೋರಿ ಸಲ್ಲಿಕೆಯಾಗುವ ಅರ್ಜಿಗಳ ದಾಖಲೆಗಳನ್ನು ಮತ್ತು ಸ್ಥಳ ಪರಿಶೀಲನೆ ಮಾಡಲು ಕಂದಾಯ ಪರಿವೀಕ್ಷಕರಿಗೆ ಅವಕಾಶ ಕಲ್ಪಿಸಿರುವುದಿಲ್ಲ.ಆದುದರಿಂದ ಸ್ವತ್ತುಗಳ ಕುರಿತಂತೆ ನ್ಯಾಯಾಲಯಗಳಲ್ಲಿರುವ ದಾವೆ/ ಭೌತಿಕ ಲಭ್ಯತೆ | ಪೌವತಿ ಖಾತೆ ಕುರಿತ ನೈಜ ವಾರಸುದಾರರ ಮಾಹಿತಿ/ ಸರ್ಕಾರಿ ಆಸ್ತಿ ಕುರಿತ ಮಾಹಿತಿಗಳ ಅಲಭ್ಯತೆಖಂದ ಪ್ರಮಾದಗಳಾಗುವ ಸಾಧ್ಯತೆಯಿರುತ್ತದೆ. ಇದರಿಂದ ಸಹಾಯಕ ಕಂದಾಯ ಅಧಿಕಾರಿಗಳು ನ್ಯಾಯಾಲಯಗಳಿಗೆ ಅಲೆಯುವ ಪರಿಸ್ಥಿತಿ ಉಂಟಾಗುತ್ತದೆ. ಆದುದರಿಂದ ಈ ಹಿಂದೆ ಇದ್ದ ಪ್ರಕ್ರಿಯೆಯಂತೆ ಇ-ಆಸ್ತಿ ತಂತ್ರಾಂಶದಲ್ಲಿ ಸಲ್ಲಿಕೆಯಾಗುವ ಮ್ಯುಟೇಷನ್ ಅರ್ಜಿಗಳನ್ನು ಕಡ್ಡಾಯವಾಗಿ ಸಂಬಂಧ ಪಟ್ಟ ಕಂದಾಯ ಪರಿವೀಕ್ಷಕರು ಸ್ಥಳ ಪರಿಶೀಲನೆ ಮಾಡಿ ವರದಿ ಮಂಡಿಸುವ ಅವಕಾಶವನ್ನು ನೀಡಲು ಹಾಗೂ ಸಕಾಲ ತಂತ್ರಾಂಶದಲ್ಲಿ ಇರುವ ಸಮಯಾವಕಾಶವಾದ 30 ಕೆಲಸದ ದಿನಗಳನ್ನು ನಿಗಧಿಪಡಿಸಲು ಕೋರಿದೆ.
3. ಪ್ರತಿನಿತ್ಯ ಕೆಲಸ ಅವಧಿಯ ಮುನ್ನ ಅಥವಾ ತದನಂತರ ಹಲವಾರು ಆನ್‌ಲೈನ್ ಸಭೆಗಳನ್ನು ಆಯೋಜಿಸುತ್ತಿದ್ದು, ಇದರಿಂದ ಅಧಿಕಾರಿ / ನೌಕರರ ಖಾಸಗಿ ಜೀವನಕ್ಕೆ ಧಕ್ಕೆ ಉಂಟಾಗುತ್ತಿದ್ದು. ಸಾಮಾಜಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಧಿಕಾರಿ / ನೌಕರರಿಗೆ ಅನಗತ್ಯ ಕಿರಿಕಿರಿ ಉಂಟಾಗಿ ದಿನ ನಿತ್ಯದ ಕೆಲಸಗಳಲ್ಲಿ ಗಮನಹರಿಸಲು ಕಷ್ಟಸಾಧ್ಯವಾಗುತ್ತಿದೆ. ಆದುದರಿಂದ ಸಭೆಗಳನ್ನು ಮತ್ತು ವಿ.ಸಿ ಗಳನ್ನು ಕಛೇರಿ ಸಮಯ ಅಂದರೆ 10:30 ರಿಂದ 3:30 ವರೆಗೂ ನಂತರ ಕಛೇರಿಯಲ್ಲಿ ಕಂದಾಯ ಇಲಾಖೆ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಲು ಕೋರಲಾಗಿದೆ.
4. ಪ್ರತಿನಿತ್ಯ ಒಂದು ಸುಸ್ಥಿದಾರರ ಸ್ವತ್ತನ್ನು ಸೀಲಿಂಗ್ ಮಾಡಲು ಸೂಚಿಸಿದ್ದು. ಇದಕ್ಕೆ ಅಗತ್ಯವಾದ ಭದ್ರತೆ ಹಾಗೂ ಸೀಲಿಂಗ್ ಸಾಮಾಗ್ರಿಗಳನ್ನು ಒದಗಿಸುತ್ತಿರುವುದಿಲ್ಲ, ಸೂಕ್ತ ಭದ್ರತೆಯಿಲ್ಲದೆ ಸೀಅಂಗ್ ಮಾಡಲು ತೆರಳದ ಸಮಯದಲ್ಲಿ ಹಲವಾರು ಅಹಿತಕರ ಘಟನೆಗಳು ನಡೆದಿರುತ್ತವೆ. ಆದುದರಿಂದ ಬ್ಯಾಂಕ್ ಗಳಲ್ಲಿ ಇರುವ ಮಾದರಿಯಂತೆ ವಸೂಲಾತಿ ವಾಹನ, ತರಬೇತಿ ಪಡೆದ ಪ್ರತ್ಯೇಕ ಸಿಬ್ಬಂದಿಯನ್ನು ಸೀಲಿಂಗ್ ಪ್ರಕ್ರಿಯೆಗೆ ನಿಯೋಜಿಸುವಂತೆ ಕೋರಿದೆ.
5. ಸಹಾಯಕ ಕಂದಾಯ ಅಧಿಕಾರಿ, ಉಪ ವಿಭಾಗವಾರು ಇ-ಟೆಂಡರ್ ಮೂಲಕ 50 ಸುಸ್ಥಿದಾರರ ಆಸ್ತಿಯನ್ನು ಹರಾಜು ಮಾಡಲು ಕ್ರಮವಹಿಸುವಂತೆ ಸೂಚಿಸುತ್ತಿದ್ದು, ಈ ಕುರಿತು ಕಂದಾಯ ಇಲಾಖೆಯ ಸಿಬ್ಬಂದಿಗೆ ಯಾವುದೇ ರೀತಿಯ ತರಬೇತಿ ಹಾಗೂ ಜ್ಞಾನ ಇರುವುದಿಲ್ಲ. ಆದುದರಿಂದ ಪ್ರಕ್ರಿಯೆ ಬಗ್ಗೆ ಸೂಕ್ತ ತರಬೇತಿ ನೀಡಿದ ನಂತರ ಹರಾಜು ಪ್ರಕ್ರಿಯೆ ಆರಂಭಿಸುವಂತೆ ಕೋರಿದೆ.
6. ಇ-ಆಸ್ತಿ ತಂತ್ರಾಂಶದಲ್ಲಿ ಹೊಸ ವಹಿಗಳಲ್ಲಿ ನಿರ್ವಹಿಸಲಾದ ಮ್ಯುಟೇಷನ್ ವಿವರಗಳನ್ನು Update ಮಾಡದೆ ಇರುವುದರಿಂದ ಈಗಾಗಲೇ ಖಾತಾ ವರ್ಗಾವಣೆ ಶುಲ್ಕ ಪಾವತಿಸಿರುವ ಪ್ರಕರಣಗಳಲ್ಲಿ ಮತ್ತೊಮ್ಮೆ ಶುಲ್ಕ ವಿಧಿಸಿರುವುದನ್ನು ತಿದ್ದುಪಡಿಮಾಡಲು ಸಹಾಯಕ ಕಂದಾಯ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಿಕೊಡುವಂತೆ ಕೋರಿದೆ. ತಪ್ಪಿದ್ದಲ್ಲಿ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಉಂಟಾಗುತ್ತದೆ. 7. ಇ-ಆಸ್ತಿ ತಂತ್ರಾಂಶದಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸುವಾಗ ಹಲವಾರು ತಪ್ಪುಗಳು ಆಗುತ್ತಿದ್ದು, ಇದನ್ನು ವಿಳಂಬವಾಗುತ್ತಿದ್ದು, ತಿದ್ದುಪಡಿ ಮಾಡಲು ಕಂದಾಯ ಅಧಿಕಾರಿಗಳಿಗೆ ಅವಕಾಶ ನೀಡಿರುವುದರಿಂದ ತಿದ್ದುಪಡಿಗೆ ಇದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿರುತ್ತಾರೆ. ಆದುದರಿಂದ ಸಾರ್ವಜನಿಕರು ತಿದ್ದುಪಡಿಗೆ ಸಲ್ಲಿಸುವ ಅರ್ಜಿಗಳನ್ನು ಸಹಾಯಕ ಕಂದಾಯ ಅಧಿಕಾರಿ ರವರ ಲಾಗಿನ್‌ನಲ್ಲಿ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲು ಕೋರಿದೆ.
8. ಪಾಲಿಕೆಯ ವೆಬ್‌ಸೈಟ್ ನಲ್ಲಿ ಸಹಾಯಕ ಕಂದಾಯ ಅಧಿಕಾರಿ ಹಾಗೂ ಕಂದಾಯ ಅಧಿಕಾರಿ ರವರ ದೂರವಾಣಿ ಸಂಖ್ಯೆಯನ್ನು ಪ್ರಚುರಪಡಿಸಿರುವುದರಿಂದ ಸಾರ್ವಜನಿಕರಿಗೆ ಹಲವಾರು ದೂರವಾಣಿ ಕರೆಗಳು ಬರುತ್ತಿರುವುದರಿಂದ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗುತ್ತಿರುತ್ತದೆ ಅಲ್ಲದೇ ರಾತ್ರಿ ವೇಳೆಯಲ್ಲಿ ಸಾರ್ವಜನಿಕರು ದೂರವಾಣಿ ಕರೆಗಳನ್ನು ಮಾಡುವುದರಿಂದ ವೈಯಕ್ತಿಕ ಜೀವನಕ್ಕೆ ತೊಂದರೆಯಾಗುತ್ತಿರುತ್ತದೆ ಆದುದರಿಂದ ಸಹಾಯಕ ಕಂದಾಯ ಅಧಿಕಾರಿ ಹಾಗೂ ಕಂದಾಯ ಅಧಿಕಾರಿ ರವರ ಕಛೇರಿಯ ದೂರವಾಣಿ ಸಂಖ್ಯೆಯನ್ನು ಪಾಲಿಕೆಯ ವೆಬ್‌ಸೈಟ್ ನಲ್ಲಿ ಪ್ರಚುರ ಪಡಿಸಲು ಕೋರಿದೆ.
9. ಕಂದಾಯ ಇಲಾಖೆಯಲ್ಲಿ ಎಲ್ಲಾ ಕಾರ್ಯಗಳು ತಂತ್ರಾಂಶದ ಮೂಲಕ ನಿರ್ವಹಿಸುತ್ತಿರುವುದರಿಂದ ಹಾಗೂ ಇ-ಆಸ್ತಿ ತಂತ್ರಾಂಶದಲ್ಲಿ ನೂರಾರು ಅರ್ಜಿಗಳನ್ನು ಸ್ವೀಕರಿಸುತ್ತಿರುವುದರಿಂದ ಮತ್ತು ಮುಂಬರುವ ದಿನಗಳಲ್ಲಿ ಸಾವಿರಾರು ಅರ್ಜಿಗಳು ಸ್ವೀಕೃತಗೊಳುವ ನಿರೀಕ್ಷೆಯಿರುವುದರಿಂದ ಪ್ರತಿ ವೃತ್ತ (ಸರ್ಕಲ್) ವಾರು ಒಬ್ಬರು ಗಣಕಯಂತ್ರ ನಿರ್ವಾಹಕರು ಹಾಗೂ ಸಹಾಯಕ ಕಂದಾಯ ಅಧಿಕಾರಿ ರವರ ಕಛೇರಿಗೆ ಮೂರು ಜನ ಗಣಕಯಂತ್ರ ನಿರ್ವಾಹಕರನ್ನು ಮತ್ತು ಕಂದಾಯ ಅಧಿಕಾರಿಗಳಗೆ ಇಬ್ಬರು ಗಣಕಯಂತ್ರ ನಿರ್ವಾಹಕರನ್ನು ಕೂಡಲೇ ನಿಯೋಜಿಸುವಂತೆ ಕೋರಿದೆ.
10. ಇ-ಆಸ್ತಿ ತಂತ್ರಾಂಶದಲ್ಲಿ ಅರ್ಜಿಗಳ ವಿಲೇವಾರಿ ಕುರಿತಂತೆ ಗಣಕಯಂತ್ರ ನಿರ್ವಾಹಕರು, ದ್ವಿತೀಯ ದರ್ಜೆ ಸಹಾಯಕರು, ವ್ಯವಸ್ಥಾಪಕರು. ವಿಷಯ ನಿರ್ವಾಹಕರು ಮತ್ತು ಕಂದಾಯ ಪರಿವೀಕ್ಷಕರು / ಕಂದಾಯ ವಸೂಅಗಾರರಿಗೆ ಸೂಕ್ತ ತರಬೇತಿ ನೀಡುವಂತೆ ಕೋರಿದೆ.
11. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹಲವಾರು ವೃಂದದ ಹುದ್ದೆಗಳು ಖಾಲಿ ಇರುತ್ತದೆ. ಇದರಲ್ಲಿಯೂ ಪ್ರಮುಖವಾಗಿ ಕಂದಾಯ ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇರುವುದರಿಂದ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆಯನ್ನು ಹೊದಗಿಸಲು ಸಾಧ್ಯವಾಗುತ್ತಿರುವುದಿಲಲ್ಲಾ ಆದರಿಂದ ಕೂಡಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಲಸ ಕಾರ್ಯಗಳ ಹಿತದೃಷ್ಠಿಯಿಂದ 198 ವಾರ್ಡ್‌ಗಳಿಂದ 225 ವಾರ್ಡ್‌ಗಳಿಗೆ ಹೆಚ್ಚುವರಿ ಮಾಡಿರುವಂತೆ ಅವಶ್ಯಕತೆ ಇರುವ ಸಿಬ್ಬಂಧಿಗಳನ್ನು ಕೂಡಲೇ ಭರ್ತಿ ಮಾಡಲು ಈ ಮೂಲಕ ಕೋರಲಾಗಿದೆ.
12. ಪಾಲಿಕೆಯ ಕೆಲವು ಉನ್ನತ ಅಧಿಕಾರಿಗಳು ಶುಲ್ಕದ ಕಾರಣಕ್ಕೆ ಅವಾಚ್ಯಕ ಶಬ್ಧಗಳನ್ನು ನಿಂಧಿಸುವುದು/ ತೇಜೋವಧೆ ಮಾಡುವುದು ಮಾನಸಿಕ ಹಿಂಸೆ/ಕಿರುಕುಳ ನೀಡಿ ಶುಲ್ಕದ ಕಾರಣಕ್ಕೆ 1 to 4 ಮಾಡುವುದಾಗಿ ಬೆದರಿಕೆ ಹಾಕಿ ಪಾಕೆಯ ಅಮೂಲ್ಯವಾದ ಸಮಯವನ್ನು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಮೀಸಅಡಲು ಅವಕಾಶ ಕಚ್ಚಿಸದೆ ಸಭೆಯನ್ನು ಕರೆಯುವ ಮೂಲಕ ಪಾಲಿಕೆ ಸಮಯವನ್ನು ವ್ಯಥೆ ಮಾಡುತ್ತಿರುವ ಕೆಲವು ಉನ್ನತ ಅಧಿಕಾರಿಗಳು ವಿನಃಕಾರಣ ತೊಂದರೆ ನೀಡುತ್ತಿರುವ ಬಗ್ಗೆ ಸಭೆಯಲ್ಲಿ ಕಂದಾಯ ಅಧಿಕಾರಿಗಳು / ಸಹ ಕಂದಾಯ ಅಧಿಕಾರಿಗಳು ಅಸಮಧಾನ ವ್ಯಕ್ತ ಪಡಿಸಿರುತ್ತಾರೆ. ಆದ್ದರಿಂದ ಸದರಿ ಕೆಲವು ಉನ್ನತ ಅಧಿಕಾರಿಗಳಗೆ ತಿಳುವಳಿಕೆ / ಬುದ್ದಿ ಹೇಳಲು ಈ ಮೂಲಕ ಕೋರಲಾಗಿದೆ.
13. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ಕಛೇರಿಗಳಲ್ಲಿ ಅವಶ್ಯಕತೆ ಇರುವ ಲೇಖನೆ ಸಾಮಾಗ್ರಿಗಳನ್ನು ಕೂಡಲೇ ಪಾಲಿಕೆ ವತಿಯಿಂದ ಸರಬರಾಜು ಮಾಡಲು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಲ್ಲಾ ಕಛೇರಿಯ ಶೌಚಾಲಯಗಳು ಪುರಾತನ ಕಾಲದಾಗಿದ್ದು, ಹಾಲಿ ದುರಸ್ಥಿಯಲ್ಲಿ ಇರುತ್ತದೆ, ಇದರಿಂದ ಪಾಲಿಕೆ ಅಧಿಕಾರಿ/ನೌಕರರಿಗೆ ಕಾಯಿಲೆಗಳು ಬರುವ ಸಾಧ್ಯತೆ ಇರುವುದರಿಂದ ಕೂಡಲೇ ಪುರಾತನ ಕಾಲದ ಶೌಚಾಲಯಗಳನ್ನು ಹೊಸದಾಗಿ ನಿರ್ಮಿಸಲು ಈ ಮೂಲಕ ಕೋರಲಾಗಿದೆ.
ಆದ್ದರಿಂದ ನಮ್ಮ ಸಂಘದ ವತಿಯಿಂದ ದಿನಾಂಕ: 18.02.2025 ರಂದು ಸಭೆಯನ್ನು ಹಮ್ಮಿಕೊಂಡಿದ್ದು ಸದರಿ ವಿಷಯವನ್ನು ತಮ್ಮ ಅವಗಾಹನೆಗೆ ಈ ಮೇಲ್ಕಂಡ ಅಂಶದ ಮುಖಾಂತರ ತರುತ್ತಾ ತ್ವರಿತ ರೀತಿಯಲ್ಲಿ ಬಹಳ ಗಂಭಿರವಾಗಿ ಪರಿಗಣಿಸಲು ತಮ್ಮಲ್ಲಿ ಕಂದಾಯ ಇಲಾಖೆ ಹಿತದೃಷ್ಠಿಯಿಂದ / ಸಾರ್ವಜನಿಕರ ಅವಶ್ಯಕತೆ ಸೇವೆ ಕಲ್ಪಿಸುವ ಹಿತದೃಷ್ಠಿಯಿಂದ ಸಮಸ್ಯೆಯನ್ನು ಬಗೆಹರಿಸಲು ಈ ಮೂಲಕ ಕೋರಲಾಗಿದೆ. ತಪ್ಪಿದ್ದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಚಿಕೆ ಎಲ್ಲಾ ಇಲಾಖೆಯ ಅಧಿಕಾರಿ/ನೌಕರರು ಸಮೂಹಿಕ ರಜೆ ಹಾಕುವ ಮೂಲಕ ನಮ್ಮ ಹಕ್ಕನ್ನು ಪಡೆಯುವ ಹಿತದೃಷ್ಠಿಯಿಂದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಇದ್ದಕ್ಕೂ ಮನ್ನಣೆ ಸಿಗದ್ದಿದ್ದಲ್ಲಿ ಬೃಹತ್ ಬೆಂಗಳುರು ಮಹಾನಗರ ಪಾಲಿಕೆ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಮಾಡಿ ನ್ಯಾಯಾಯುತ ಬೇಡಿಕೆಗಾಗಿ ಹೋರಾಟವನ್ನು ಯಾವುದೇ ಮನ್ಸೂಚನೆ ನೀಡದೆ ಹಮ್ಮಿಕೊಳ್ಳಲಾಗುವುದೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತಾ ಸದರಿ ಮನವಿ ಪತ್ರವನ್ನೇ ಸಂಘದ ತಿಳುವಳಿಕೆ ಪತ್ರವೆಂದು ಭಾವಿಸಲು ಹೇಳಿದ್ದಾರೆ.
ಅಲ್-ಅಮೀನ್ ಮೆಡಿಕಲ್ ಕಾಲೇಜಿನಲ್ಲಿ ರ್ಯಾಗಿಂಗ್ ಪ್ರಕರಣ: ಕ್ರಮಕ್ಕೆ ವಿಜಯಪುರ DC ಸೂಚನೆ
BREAKING NEWS : ‘ಅನ್ನಭಾಗ್ಯ’ ಫಲಾನುಭವಿಗಳಿಗೆ ಹಣದ ಬದಲು ಅಕ್ಕಿ ಕೊಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ