ಕೇರಳ: ಕೇರಳದಲ್ಲಿ ಕರ್ನಾಟಕದ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಕೇರಳ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಅಯ್ಯಪ್ಪ ಮಾಲಾಧಾರಿಗಳ ಮೇಲೆ ಕೇರಳ ಪೊಲೀಸರು ಲಾಠಿ ಚಾರ್ಜ್ ಮಾಡಿರೋ ಆರೋಪ ಕೇಳಿ ಬಂದಿದೆ.
ಇದಷ್ಟೇ ಅಲ್ಲದೇ ಕರ್ನಾಟಕ ನೋಂದಣಿ ವಾಹನಗಳಿಗೆ ಪ್ರವೇಶವನ್ನು ಪೊಲೀಸರು ನೀಡಿಲ್ಲ. ಎರಿಮಲೆಯಲ್ಲೇ ರಾಜ್ಯದ ವಾಹನಗಳನ್ನು ಕೇರಳ ಪೊಲೀಸರು ತಡೆದಿದ್ದಾರೆ ಎನ್ನಲಾಗಿದೆ. ಶಬರಿಮಲೆಯಿಂದ 60 ಕಿಲೋಮೀಟರ್ ದೂರದಲ್ಲೇ ಪೊಲೀಸರು ಕರ್ನಾಟಕದ ವಾಹನಗಳ್ನು ತಡೆದಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು, ಬಾಗಲಕೋಟೆ, ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಕೇರಳಕ್ಕೆ ತೆರಳಿದ್ದಂತ ಅಯ್ಯಪ್ಪ ಮಾಲಾಧಾರಿಗಳನ್ನು ಪೊಲೀಸರು ತಡೆದಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಶಬರಿಮಲೆಗೆ ತೆರಳಿರುವ ನೂರಾರು ಭಕ್ತರು ರಸ್ತೆಯಲ್ಲೇ ಅಡುಗೆ ಮಾಡಿ, ಊಟ ಮಾಡಿ, ಕೇರಳ ಪೊಲೀಸರ ನಡೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರೋದಾಗಿ ತಿಳಿದು ಬಂದಿದೆ.








