Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾವಿಗೆ ಮುನ್ನ ಕೊನೆಯ ಕರೆ: ವಿಮಾನದಿಂದ ಅಜಿತ್ ಪವಾರ್ ಅವರ ಅಂತಿಮ ಮಾತು ಬಹಿರಂಗ

04/02/2026 12:59 PM

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

04/02/2026 12:54 PM

BREAKING: ಅನಿಲ್ ಅಂಬಾನಿ ಕಂಪನಿಗಳ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ವಿಳಂಬ: ಸಿಬಿಐ, ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂಕೋರ್ಟ್ ತರಾಟೆ

04/02/2026 12:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೀರ್ಘಾವಧಿ ಮುಖ್ಯಮಂತ್ರಿಯಾಗಿ ನಾಡಿಗೆ ಸೇವೆ: ಸಿದ್ದರಾಮಯ್ಯಗೆ ಬಸವರಾಜ ರಾಯರೆಡ್ಡಿ ಅಭಿನಂದಿಸಿ ಪತ್ರ
KARNATAKA

ದೀರ್ಘಾವಧಿ ಮುಖ್ಯಮಂತ್ರಿಯಾಗಿ ನಾಡಿಗೆ ಸೇವೆ: ಸಿದ್ದರಾಮಯ್ಯಗೆ ಬಸವರಾಜ ರಾಯರೆಡ್ಡಿ ಅಭಿನಂದಿಸಿ ಪತ್ರ

By kannadanewsnow0906/01/2026 8:29 PM

ಬಳ್ಳಾರಿ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿಯಾಗಿ ನಾಡಿಗೆ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಅವರ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರೆಡ್ಡಿ ಪತ್ರ ಬರೆದು, ಕರ್ನಾಟಕದ ಸಾಮಾಜಿಕ ನ್ಯಾಯ ಹಾಗೂ ಜನಪರ ಸರ್ವಾಂಗೀಣ ಅಭಿವೃದ್ಧಿ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸುತ್ತಿರುವ ದೂರದೃಷ್ಟಿಯ ನಾಯಕತ್ವಕ್ಕೆ ಅಭಿನಂದನೆಯನ್ನು ಮುಖ್ಯಮಂತ್ರಿಗಳ ಅರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಬಸವರಾಜ ರಾಯರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಬರೆದ ಪತ್ರದ ಸಾರಾಂಶ ಇಂತಿದೆ.

ಕರ್ನಾಟಕದ ರಾಜಕೀಯ ಇತಿಹಾಸವು ಜನಪರ ಆಡಳಿತ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಾತ್ಮಕ ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ನಾಯಕರ ದಿಟ್ಟ ಹೋರಾಟಗಳಿಂದ ರೂಪುಗೊಂಡ ಸುವರ್ಣ ಪರಂಪರೆ ಹೊಂದಿದೆ. ಶೋಷಿತರು, ಹಿಂದುಳಿದವರು ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಪರವಾಗಿ ಧೈರ್ಯವಾಗಿ ನಿಂತ ನಾಯಕರಿಂದಲೇ ಈ ನಾಡಿನ ಪ್ರಗತಿಪರ ರಾಜಕೀಯ ಸಂಸ್ಕೃತಿ ಬೆಳೆದಿದೆ.

ಆ ಪರಂಪರೆಯಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಮಹಾನ್ ನಾಯಕರಲ್ಲಿ ದಿವಂಗತ ದೇವರಾಜ ಅರಸು ಅವರು ಅಗ್ರ ಗಣ್ಯರು. ಅವರು 20-03-1972 ರಿಂದ 31-12-1977 ರವರೆಗೆ ಹಾಗೂ 28-02-1978 ರಿಂದ 07-01-1980 ರವರೆಗೆ ಒಟ್ಟಾರೆ 2,792 ದಿನಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ಭೂ ಸುಧಾರಣೆ, ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಉನ್ನತಿ ಮತ್ತು ಶೋಷಿತರ ಸಬಲೀಕರಣದ ಮೂಲಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅಮರ ಅಧ್ಯಾಯವೊಂದನ್ನು ರಚಿಸಿದರು.

ಅದಲ್ಲದೆ ಕರ್ನಾಟಕ ರಾಜ್ಯವನ್ನು ಪ್ರಗತಿಪರ ಚಿಂತನೆಯತ್ತ ತರುವುದರಲ್ಲಿ ಹಿಂದಿನ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಇವರುಗಳ ವಿಶಾಲ ದೃಷ್ಟಿಕೋನದ ವಿಚಾರಗಳು ಹಾಗೂ ಪ್ರಾಮಾಣಿಕ ಚಿಂತನೆಗಳು ನಮ್ಮ ಮುಂದೆ ಇಂದಿಗೂ ಜೀವಂತ ಇರುತ್ತವೆ.

ಅದೇ ಸಾಮಾಜಿಕ ನ್ಯಾಯ ತಾತ್ವಿಕ ಮತ್ತು ರಾಜಕೀಯ ಪರಂಪರೆ ಮತ್ತು ಸರ್ವಾಂಗೀಣ ಅಭಿವೃದ್ಧಿ ಚಿಂತನೆಗಳನ್ನು ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಮುಂದುವರೆಸಿಕೊAಡು, ಕರ್ನಾಟಕದ ಇತಿಹಾಸಕ್ಕೆ ಹೊಸ ಮೈಲಿಗಲ್ಲು ಸ್ಥಾಪಿಸಿ ನೀವು 13-05-2013 ರಿಂದ 15-05-2018 ರವರೆಗೆ ಹಾಗೂ 20-05-2023 ರಿಂದ 06-01-2026 ರವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು, ಸುದೀರ್ಘ ಮತ್ತು ಸಾರ್ಥಕ ಆಡಳಿತದ ಮೂಲಕ ಚಾರಿತ್ರಿಕ ದಾಖಲೆ ನಿರ್ಮಿಸುತ್ತಿರುವುದು ರಾಜ್ಯದ ಜನತೆಗೆ ಅಪಾರ ಹೆಮ್ಮೆಯ ವಿಷಯವಾಗಿದೆ. ಹಾಗೂ ಮುಂದಿನ ಎರಡುವರೆ ವರ್ಷಗಳ ಕಾಲ ಅಂದರೆ 28 ಮೇ 2028 ರವರೆಗೆ ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರಿ ಎಂದು ನನ್ನ ನಂಬಿಕೆಯಾಗಿದೆ.

ನಿಮ್ಮ ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತವು ಸ್ಪಷ್ಟವಾಗಿ ಜನಪರ, ಸಂವಿಧಾನಬದ್ಧ ಮತ್ತು ಸಾಮಾಜಿಕ ನ್ಯಾಯ ಕೇಂದ್ರಿತವಾಗಿದೆ. ರಾಜ್ಯದ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದ ಜನಾಂಗಕ್ಕೆ ಯಾವುದೇ ಧರ್ಮ ಜಾತಿ ಭೇದವಿಲ್ಲದೆ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್, ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಹಾಗೂ ರೈತ ಸಮುದಾಯಕ್ಕೆ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಬಡವರು, ಮಹಿಳೆಯರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಗೌರವವನ್ನು ಒದಗಿಸುವಲ್ಲಿ ನಿಮ್ಮ ಪ್ರಾಮಾಣಿಕ ವಿಚಾರಗಳು ಮಹತ್ವದ ಪಾತ್ರ ವಹಿಸಿದೆ.

ಈ ಯೋಜನೆಗಳು ಕರ್ನಾಟಕವನ್ನು ನಿಜಾರ್ಥದಲ್ಲಿ ಕಲ್ಯಾಣರಾಜ್ಯದ ಮಾದರಿಯಾಗಿ ರೂಪಿಸುವ ದಿಟ್ಟ ರಾಜಕೀಯ ಸಂಕಲ್ಪದ ಪ್ರತಿಬಿಂಬಗಳಾಗಿವೆ. ನಿಮ್ಮ ಆಡಳಿತದಲ್ಲಿ ಪಾರದರ್ಶಕತೆ, ಹಣಕಾಸು ಶಿಸ್ತು, ಸಂವಿಧಾನದ ಮೌಲ್ಯಗಳಿಗೆ ಅಚಲ ನಿಷ್ಠೆ ಹಾಗೂ ಜಾತಿ–ಧರ್ಮ–ಭಾಷೆಗಳ ಅತೀತವಾಗಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಸಮನ್ವಯದ ರಾಜಕಾರಣವು ನಿಮ್ಮ ನಾಯಕತ್ವದ ವಿಶಿಷ್ಟ ಗುರುತುಗಳಾಗಿವೆ.

ನಿಮ್ಮ ಸಮಾಜಮುಖಿ ಮತ್ತು ಪ್ರಗತಿಪರ ದೃಷ್ಟಿಕೋನಕ್ಕೆ ಸಮಕಾಲೀನ ರಾಜಕೀಯ ರೂಪ ನೀಡಿದ ನಾಯಕರೆಂದು ನಿಮ್ಮನ್ನು ಗೌರವದಿಂದ ಮುಂದಿನ ಇತಿಹಾಸ ಪುಟಗಳಲ್ಲಿ ಸ್ಮರಿಸುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಕೋಟ್ಯಂತರ ಜನತೆಯ ಪರವಾಗಿ, ನಿಮ್ಮ ದೂರದೃಷ್ಟಿಯ ನಾಯಕತ್ವಕ್ಕೆ, ಜನಪರ ನೀತಿಗಳಿಗೆ ಹಾಗೂ ರಾಜ್ಯವನ್ನು ಸಮಾನತೆ, ಸೌಹಾರ್ದ ಮತ್ತು ಸಾಮಾಜಿಕ ನ್ಯಾಯದ ದಾರಿಯಲ್ಲಿ ದಿಟ್ಟವಾಗಿ ಮುನ್ನಡೆಸುತ್ತಿರುವ ನಿಮ್ಮ ಅವಿರತ ಸೇವೆಗೆ ಗೌರವಪೂರ್ವಕ ಹಾಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮ ಆಡಳಿತವು ಮುಂದಿನ ಪೀಳಿಗೆಗಳಿಗೆ ದಾರಿದೀಪವಾಗಲಿ. ಕರ್ನಾಟಕವು ಸರ್ವಾಂಗೀಣ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸೌಹಾರ್ದದ ಮಾದರಿ ರಾಜ್ಯವಾಗಿ ರಾಷ್ಟ್ರಮಟ್ಟದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ದೃಢಪಡಿಸಲಿ ಎಂಬುದು ಸಿಎಂ ಸಿದ್ಧರಾಮಯ್ಯ ಅವರಿಗೆ ಶಾಸಕ ಬಸವರಾಜ ರಾಯರೆಡ್ಡಿ ಅವರು ಹಾರೈಸಿದ್ದಾರೆ.

ಚಿತ್ರದುರ್ಗದಲ್ಲಿ ಮರಕ್ಕೆ ಬೊಲೆರೋ ವಾಹನ ಡಿಕ್ಕಿಯಾಗಿ ಇಬ್ಬರು ಕಾರ್ಮಿಕರು ದುರ್ಮರಣ

‘KSRTC ಪ್ರಯಾಣಿಕ’ರಿಗೆ ಭರ್ಜರಿ ಸಿಹಿಸುದ್ದಿ: ಪ್ರತಿಷ್ಠಿತ ಸಾರಿಗೆ ಬಸ್ ‘ಟಿಕೆಟ್ ದರ’ದಲ್ಲಿ ರಿಯಾಯಿತಿ ಘೋಷಣೆ

Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

04/02/2026 12:54 PM4 Mins Read

ಗಮನಿಸಿ : ಈ ಹಿಟ್ಟಿನಿಂದ ಮಾಡಿದ ರೊಟ್ಟಿ 1 ತಿಂಗಳು ತಿಂದರೆ `ಕೊಬ್ಬು’ ಬೆಣ್ಣೆಯಂತೆ ಕರಗುತ್ತದೆ.!

04/02/2026 12:23 PM2 Mins Read

ಗಮನಿಸಿ : `M’ ಅಕ್ಷರದಿಂದ ಆರಂಭವಾಗುವ ಹೆಸರುಳ್ಳವರ ವ್ಯಕ್ತಿತ್ವ ಹೇಗಿರುತ್ತದೆ ಗೊತ್ತಾ?

04/02/2026 12:14 PM1 Min Read
Recent News

ಸಾವಿಗೆ ಮುನ್ನ ಕೊನೆಯ ಕರೆ: ವಿಮಾನದಿಂದ ಅಜಿತ್ ಪವಾರ್ ಅವರ ಅಂತಿಮ ಮಾತು ಬಹಿರಂಗ

04/02/2026 12:59 PM

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

04/02/2026 12:54 PM

BREAKING: ಅನಿಲ್ ಅಂಬಾನಿ ಕಂಪನಿಗಳ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ವಿಳಂಬ: ಸಿಬಿಐ, ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂಕೋರ್ಟ್ ತರಾಟೆ

04/02/2026 12:48 PM

ಪೋಷಕರೇ ಎಚ್ಚರ : ಆಟವಾಡುವಾಗ `ಹಲ್ಕ್ ಆಟಿಕೆ’ ನುಂಗಿದ ಬಾಲಕ : `ಎಕ್ಸ್ ರೇ’ ನೋಡಿದ ವೈದ್ಯರೇ ಶಾಕ್.!

04/02/2026 12:30 PM
State News
KARNATAKA

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

By kannadanewsnow5704/02/2026 12:54 PM KARNATAKA 4 Mins Read

ಬೆಂಗಳೂರು : ಜನಸಮುದಾಯಕ್ಕೆ ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಕ್ಷೇತ್ರದಲ್ಲಿ ದೇಶದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಸ್ವಾತಂತ್ರ್ಯದ ನಂತರ ಭಾರತ ಸರ್ಕಾರವು…

ಗಮನಿಸಿ : ಈ ಹಿಟ್ಟಿನಿಂದ ಮಾಡಿದ ರೊಟ್ಟಿ 1 ತಿಂಗಳು ತಿಂದರೆ `ಕೊಬ್ಬು’ ಬೆಣ್ಣೆಯಂತೆ ಕರಗುತ್ತದೆ.!

04/02/2026 12:23 PM

ಗಮನಿಸಿ : `M’ ಅಕ್ಷರದಿಂದ ಆರಂಭವಾಗುವ ಹೆಸರುಳ್ಳವರ ವ್ಯಕ್ತಿತ್ವ ಹೇಗಿರುತ್ತದೆ ಗೊತ್ತಾ?

04/02/2026 12:14 PM

SHOCKING : ರಾಜ್ಯದಲ್ಲಿ `ಬೆಚ್ಚಿ ಬೀಳಿಸೋ ಕೃತ್ಯ’ : ಒಂಟಿ ವೃದ್ಧೆಯನ್ನು ಕೊಲೆಗೈದು 73 ಗ್ರಾಂ ಚಿನ್ನಾಭರಣ ದರೋಡೆ.!

04/02/2026 11:54 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.