ಬೆಂಗಳೂರು : ಕಾಂಗ್ರೆಸ್ ನ ಇಡೀ ಪಾರ್ಟಿ ಬೇಲ್ ಮೇಲೆ ನಿಂತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ರಾಹುಲ್ ಗಾಂಧಿ ಇಬ್ಬರು ಬೇಲ್ ಮೇಲೆಯೇ ಹೊರಗಡೆ ಇದ್ದಾರೆ, 40 % ಕಮಿಷನ್ ಎನ್ನುವುದು ದುರುದ್ದೇಶದ ಕ್ಯಾಂಪೇನ್, ಏನಾದರೂ ನಡೆದಿದ್ದರೆ ಅದು ತನಿಖೆಯಿಂದಲೇ ಹೊರ ಬರುತ್ತದೆ ಎಂದು ಹೇಳಿದ್ದಾರೆ.
ನಮ್ಮ ಮೇಲೆ ಕಾಂಗ್ರೆಸ್ ಸುಖಾಸುಮ್ಮನೆ ಆರೋಪ ಮಾಡುತ್ತಿದೆ, ನಮ್ಮಸರ್ಕಾರದಲ್ಲಿ ಏನಾದರೂ ಹಗರಣಗಳು ನಡೆಸಿದ್ದರೆ ಕಾಂಗ್ರೆಸ್ ದಾಖಲೆ ಕೊಡಲಿ, ಏನಾದರೂ ನಡೆದಿದ್ದರೆ ಅದು ತನಿಖೆಯಿಂದಲೇ ಹೊರ ಬರುತ್ತದೆ ಎಂದು ಹೇಳಿದ್ದಾರೆ. ಚನ್ನಪಟ್ಟಣ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ ಅಲ್ಲಿ ಏನು ನಡೆಯಿತು ಎಂಬುದು ಸರಿಯಾಗಿ ಗೊತ್ತಿಲ್ಲ, ಈ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ ಎಂದು ಬೊಮ್ಮಾಯಿ ಹೇಳಿದರು.