ಗದಗ: ಬಸವರಾಜ ಬೊಮ್ಮಾಯಿ ಅವರೇ ನೀವು ರಿಜೆಕ್ಟ್ ಪೀಸ್. ಲೋಕಸಭಾ ಚುನಾವಣೆಗೆ ನಿಂತಿರುವ ನಿಮಗೆ ಮೂರು ಪ್ರಶ್ನೆಗಳನ್ನು ಕೇಳುತ್ತೇನೆ. ನಿಮ್ಮ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಾಯಿತು. ನಿಮ್ಮ ಅಕ್ಕಪಕ್ಕದ ಕ್ಷೇತ್ರದ ಅಭ್ಯರ್ಥಿಗಳೇ ಗೆಲ್ಲಲಿಲ್ಲ. ರೈತರ ಆದಾಯ ಜಾಸ್ತಿ ಮಾಡುತ್ತೇವೆ, 15 ಲಕ್ಷ ತರುತ್ತೇವೆ ಎಂದರು. ಕೊಟ್ಟ ಮಾತು ಉಳಿಸಿಕೊಂಡಿದ್ದಾರೆಯೇ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ಗದಗದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದಂತ ಅವರು, ಶಿವಕುಮಾರ್ ಉದಾಸಿ ಅವರ ಮೇಲೆ ಒಂದೇ ಒಂದು ಆರೋಪವಿಲ್ಲ. ಆದರೂ ಅವರಿಗೆ ಏಕೆ ಬಿಜೆಪಿ ಟಿಕೆಟ್ ನೀಡಲಿಲ್ಲ. ಏಕೆಂದರೆ ಬಿಜೆಪಿ ಒಂದೇ ಒಂದು ಕೆಲಸ ಮಾಡಿಲ್ಲ. ನುಡಿದಂತೆ ನಡೆದಿಲ್ಲ ಅದಕ್ಕೆ ಉದಾಸಿ ಅವರೇ ಕೈ ಮುಗಿದು ನನಗೆ ಟಿಕೆಟ್ ಬೇಡ ಎಂದರು.
ಬೊಮ್ಮಾಯಿ ಅವರೇ ಹಾವೇರಿ ಜಿಲ್ಲೆಯಲ್ಲಿ ಐದು ಸ್ಥಾನಗಳನ್ನು ಗೆದ್ದಿದ್ದೇವೆ. ರಾಜ್ಯದಲ್ಲಿ 136 ಸ್ಥಾನಗಳನ್ನು ಗೆದ್ದಿದ್ದೇವೆ. ಈ ದಾನ ಧರ್ಮ ಮಾಡುವ ಕೈ ಅಧಿಕಾರಕ್ಕೆ ಬಂದ ಒಂದೇ ಗಂಟೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ ಎಂದರು.
ಬಿಜೆಪಿ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿ ಇದೆ ಒಂದೇ ಒಂದು ಡ್ಯಾಂ ಕಟ್ಟಿದೆಯೇ? ಗದಗದಲ್ಲಿ ಒಂದೇ ಕಟ್ಟಡ ಕಟ್ಟಿದೆಯೇ? ಜಿಲ್ಲಾಧಿಕಾರಿ ಕಚೇರಿ ಕಟ್ಟಿದ್ದಾರೆಯೇ? ಏನಾದರೂ ಅಭಿವೃದ್ದಿಯಾಗಿದ್ದರೇ ನಮ್ಮ ಕಾಂಗ್ರೆಸ್ ಪಕ್ಷದಿಂದ ಮಾತ್ರ. ಇಡೀ ದೇಶಕ್ಕೆ ಗದಗದ ಶುದ್ದ ಕುಡಿಯುವ ನೀರಿನ ಘಟಕ ಯೋಜನೆ ಮಾದರಿಯಾಗಿದೆ. ಇಲ್ಲಿನ ಯೋಜನೆ ನೋಡಿ ನನ್ನ ಕ್ಷೇತ್ರದಲ್ಲಿ 400 ಘಟಕಗಳನ್ನು ಸ್ಥಾಪನೆ ಮಾಡಿದ್ದೇನೆ.
ಬಿಜೆಪಿಯವರು ಮನೆ ಬಳಿ ಬಂದರೆ ಏನು ಕೊಟ್ಟಿದ್ದೀರಿ ಎಂದು ಕೇಳಬೇಕು. ಏನು ಕೊಟ್ಟಿದ್ದೀರಿ ಎಂದು ಪ್ರಶ್ನೆ ಮಾಡಬೇಕು. ಶಿವಕುಮಾರ್ ಉದಾಸಿ ಅವರಿಗೆ ಟಿಕೆಟ್ ಏಕೆ ನೀಡಿಲ್ಲ ಎಂದು ಕೇಳಬೇಕು. ಅವರು ಏಕೆ ಟಿಕೆಟ್ ಬೇಡ ಎಂದು ಕೇಳಬೇಕು. 14 ಜನ ಎಂಪಿಗಳಿಗೆ ಏಕೆ ಟಿಕೆಟ್ ಕೊಟ್ಟಿಲ್ಲ, ಸದಾನಂದ ಗೌಡರಿಗೆ ಏಕೆ ಕೊಡಲಿಲ್ಲ?
ಅತ್ಯುನ್ನತ ನಾಯಕರನ್ನು ಈ ರಾಜ್ಯಕ್ಕೆ ಕೊಟ್ಟ ಜಿಲ್ಲೆ ಗದಗ. ನನಗೆ ಮೊದಲು ಟಿಕೆಟ್ ಕೊಟ್ಟವರೇ ಕೆ.ಎಚ್.ಪಾಟೀಲರು. ಇದಾದ ನಂತರ 8 ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಜನರ ಸೇವೆಗೆ ಅನುವು ಮಾಡಿಕೊಟ್ಟಿದ್ದೀರಿ.
ಮರಕ್ಕೆ ಬೇರು ಎಷ್ಟು ಮಖ್ಯವೋ ಮನುಷ್ಯನಿಗೆ ನಂಬಿಕೆ ಮುಖ್ಯ. ನಾವು ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಹಾಗೂ ಆನಂದ ಗಡ್ಡದೇವರಮಠ ಅವರನ್ನು ಲೋಕಸಭೆಗೆ ಕಳುಹಿಸಿದರೆ ಮಹಾಲಕ್ಷ್ಮಿ ಯೋಜನೆ ಮೂಲಕ 1 ಲಕ್ಷ ಹಣ ಕೊಡುತ್ತೇವೆ. 25 ಲಕ್ಷ ಆರೋಗ್ಯ ವಿಮೆ ನೀಡುತ್ತೇವೆ. ಆನಂದ್ ಅವರು ಗೆದ್ದರೆ ಪಂಚಾಯಿತಿ ಸದಸ್ಯನಂತೆ ನಿಮ್ಮ ಊರಿಗೆ ಬಂದು ಕೆಲಸ ಮಾಡಲಿದ್ದಾರೆ.
ಗೂಗಲ್ ಪ್ಲೇ ಸ್ಟೋರ್’ನಲ್ಲಿ ‘ನಕಲಿ ಅಪ್ಲಿಕೇಶನ್’ ಗುರುತಿಸೋದು ಈಗ ಮತ್ತಷ್ಟು ಸುಲಭ