ಬೆಂಗಳೂರು: ನಗರದ ಬಸವನಗುಡಿ ಪೊಲೀಸರಿಂದ ಭರ್ಜರಿ ಕಾರ್ಯಚರಣೆ ನಡೆದಿದೆ. ಆನ್ ಲೈನ್ ಗ್ಯಾಂಬ್ಲಿಂಗ್ ಚಟಕ್ಕೆ ರಸ್ತೆ ರಸ್ತೆಯಲ್ಲಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಗಾಡಿಗೆ ಟಚ್ ಆಗಿದೆ ಎಂದು ಕಿರಿಕ್ ಮಾಡಿ ಸುಲಿಗೆ ಮಾಡುತಿದ್ದರು.
75ರ ಸಿದ್ದರಾಮಯ್ಯಗೆ ಸಿದ್ಧವಾಯ್ತು ಟಿಣಿಂಗ್ ಮಿಣಿಂಗ್ ಟಿಶ್ಯಾ ಗಾಯಕಿಯ ಹಾಡು…!
ಜಮೀಲ್ ಖಾನ್, ಜುನಾಯಿದ್ ಬಂಧಿತರು. ಅವರು ಮೂಲತಃ ಮೈಸೂರಿನವರು ಎಂದು ತಿಳಿದುಬಂದಿದೆ.
ಆರೋಪಿಗಳು ಹಣ ಬೇಕಾದಾಗ ಬೆಂಗಳೂರಿಗೆ ಬಂದು ಕೃತ್ಯ ಎಸಗುತಿದ್ದರು. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಯಲ್ಲಿ ಕೃತ್ಯ ಎಸಗಿದ್ದ ಗ್ಯಾಂಗ್. ಡೇ ಟೈಮ್ ನಲ್ಲೇ ಆ್ಯಕ್ಟೀವ್ ಆಗುತಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಬೈಕ್ ನಲ್ಲಿ ರಸ್ತೆಗೆ ಎಂಟ್ರಿ ಕೊಡುತಿದ್ದ ಇಬ್ಬರು,
ಸಾಫ್ಟ್ವೇರ್ ಮಂದಿಯನ್ನೇ ಟಾರ್ಗೆಟ್ ಮಾಡುತಿದ್ದರು. ಒತ್ತಡದಲ್ಲಿ ವಾಹನ ಚಾಲನೆ ಮಾಡುವವರ ಗಾಡಿ ಪಕ್ಕದಲ್ಲಿ ಬರುತ್ತಿದ್ದರು.ನಂತರ ಗಾಡಿ ಟಚ್ ಆದಂತೆ ಮಾಡಿ ಗಲಾಟೆ ಮಾಡುತಿದ್ದರು.ಗಾಡಿ ಪಕ್ಕಕ್ಕೆ ಹಾಕಿಸಿ ಗಲಾಟೆ ಮಾಡುತಿದ್ದರು.ಬಳಿಕ ಅವರಿಂದ ಸಾವಿರಾರು ರೂಪಾಯಿಗಳನ್ನು ಸುಲಿಗೆ ಮಾಡುತ್ತಿದ್ದರು. ಇನ್ನು ಇದೇ ಮಾದರಿ ಬಸವನಗುಡಿಯಲ್ಲೂ ಕೃತ್ಯ ನಡೆದಿದೆ.
75ರ ಸಿದ್ದರಾಮಯ್ಯಗೆ ಸಿದ್ಧವಾಯ್ತು ಟಿಣಿಂಗ್ ಮಿಣಿಂಗ್ ಟಿಶ್ಯಾ ಗಾಯಕಿಯ ಹಾಡು…!
ಗಾಡಿ ಟಚ್ ಅಂತ ಜಗಳ ಶುರು ಮಾಡಿದ್ದ ಆರೋಪಿಗಳು. ಬಳಿಕ 40 ಸಾವಿರ ಸುಲಿಗೆ ಮಾಡಿ ಕಳುಹಿಸಿದ್ದರು. ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಬಸವನಗುಡಿ ಪೊಲೀಸರಿಂದ ಬಂಧಿಸಿದ್ದಾರೆ. ಬೆಂಗಳೂರು, ಶ್ರೀರಂಗಪಟ್ಟಣ ಸೇರಿದಂತೆ ಹಲವು ಕಡೆ ಕೃತ್ಯವೆಸಗಿದ್ದಾರೆ. ಹಲವು ಬಾರಿ ಜೈಲುವಾಸ ಅನುಭವಿಸಿರೋ ಆರೋಪಿಗಳು. ಗ್ಯಾಂಬ್ಲಿಂಗ್ ಚಟದಿಂದ ಸಾಲು ಸಾಲು ಕೃತ್ಯ ಎಸಗಿದ್ದಾರೆ.