ರಾಮನಗರ: ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವಲಿಂಗಶ್ರೀ ಡೆತ್ ನೋಟ್ ಉಲೇಖಿಸಿದ್ದ ಸ್ವಾಮೀಜಿ ಪರಾರಿಯಾಗಿದ್ದಾರೆ.
BIGG NEWS: ʼಕನ್ನಡ ಪಠ್ಯ ಪುಸ್ತಕದಲ್ಲಿ ಅಪ್ಪು ಪಾಠʼ..!; ಸಿಎಂ ಬೊಮ್ಮಾಯಿಗೆ ಪುನೀತ್ ಅಭಿಮಾನಿಗಳ ಮನವಿ
ಕಳೆದ 2 ದಿನಗಳಿಂದ ಮಠದಿಂದ ಸ್ವಾಮೀಜಿ ನಾಪತ್ತೆಯಾಗಿದ್ದಾರೆ. ಮತ್ತೊಂದೆಡೆಗೆ ನಿರೀಕ್ಷಣಾ ಜಾಮೀನಿಗೆ ಸ್ವಾಮೀಜಿ ಅರ್ಜಿ ಸಲ್ಲಿಸಿದ್ದಾರೆ. ಇಂದು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯ ಕಾರು ಚಾಲಕ ಜ್ಯೋತಿ ಹಾಗೂ ದೇವಸ್ಥಾನದ ಆರ್ಚಕ ಅಂಬರೀಷ್ ಅವರ ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರಿಬ್ಬರೂ ಸ್ವಾಮೀಜಿಗೆ ಹೆಚ್ಚು ಆಪ್ತರಾಗಿದ್ದವರು ಎಂದು ಹೇಳಲಾಗಿದೆ.
BIGG NEWS: ʼಕನ್ನಡ ಪಠ್ಯ ಪುಸ್ತಕದಲ್ಲಿ ಅಪ್ಪು ಪಾಠʼ..!; ಸಿಎಂ ಬೊಮ್ಮಾಯಿಗೆ ಪುನೀತ್ ಅಭಿಮಾನಿಗಳ ಮನವಿ
ಪ್ರಕರಣ ಸಂಬಂಧ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು, ವಿಡಿಯೊ ಕಾಲ್ ಮಾಡಿದ ಯುವತಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಬೆಂಗಳೂರಿನಲ್ಲೇ ಕುದೂರು ಠಾಣೆ ಪೊಲೀಸರು ಬೀಡುಬಿಟ್ಟಿದ್ದಾರೆ.