ರಾಮನಗರ: ಕಂಚುಗಲ್ ಬಂಡೇಮಠದ `ಬಸವಲಿಂಗ ಸ್ವಾಮೀಜಿ’ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆಯಾದ ಡೆತ್ ನೋಟ್ ಹತ್ತು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಂಚುಗಲ್ ಬಂಡೆಮಠ ಶ್ರೀಗಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಪ್ರಕರಣದ ಮೂರು ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ಡೆತ್ ನೋಟ್ ನಲ್ಲಿ ಹಲವು ವ್ಯಕ್ತಿಗಳ ಹೆಸರು ಉಲ್ಲೇಖವಾಗಿದ್ದು, ತನಿಖೆಯ ದೃಷ್ಟಿಯಿಂದಅವರ ಹೆಸರನ್ನು ಬಹಿರಂಗಪಡಿಸಿಲ್ಲ ಎಂದು ರಾಮನಗರ ಎಸ್ ಪಿ ಸಂತೋಷ್ ಬಾಬು ಹೇಳಿಕೆ ನೀಡಿದ್ದಾರೆ.
ಶ್ರೀಗಳಿಗೆ ಸಂಬಂಧಿಸಿದ 2 ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ಮೊಬೈಲ್ ಲಾಕ್ ಆಗಿದೆ. ಇನ್ನೂ ವೈರಲ್ ಆಗಿರುವ ಡೆತ್ ನೋಡ್ ಶ್ರೀಗಳಿಗೆ ಸಂಬಂಧಿಸಿದ್ದಲ್ಲ, ಡೆತ್ ನೋಟ್ ವೈರಲ್ ಆದ ಫೋಟೋಗೂ ವ್ಯತ್ಯಾಸವಿದೆ. ಡೆತ್ ನೋಟ್ ಸಿಕ್ಕರೂ ನಮ್ಮ ಗಮನಕ್ಕೆ ತರದೇ ಇದ್ದರೆ ಕೇಸ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದ ಕುರಿತು ನಮಗೆ ಮಠದ ಯಾರ ಬಗ್ಗೆಯೂ ಸಂಶಯವಿಲ್ಲ, ವಿವಿಧ ಆಯಾಮಗಳಲ್ಲಿ ತನಿಖೆ ನಡೆ ಸಲಿದ್ದೇವೆ. ವಿಡಿಯೋ ಇದೆ ಎಂದು ಹೇಳುತ್ತಿದ್ದಾರೆ, ಆದರೆ ಆ ವಿಡಿಯೋ ಸಿಕ್ಕಿಲ್ಲ, ಪೊಲೀಸರ ಮೇಲೆ ಯಾವುದೇ ಒತ್ತಡ ಇಲ್ಲ, ಇದೊಂದು ಗಂಭೀರ ಪ್ರಕರಣವಾಗಿದೆ. ತನಿಖೆ ನಡೆಸುತ್ತೇವೆ ಎಂದಿದ್ದಾರೆ. ಡೆತ್ ನೋಟ್ ಹಾಗೂ ಮೊಬೈಲ್ ಗಳನ್ನು ಎಫ್ ಎಸ್ ಎಲ್ ಗೆ ಕಳುಹಿಸಲಾಗುತ್ತಿದೆ. ಮಠದ ಒಳಗೆ ಏನು ನಡೆಯುತ್ತಿತ್ತು ಎಂಬ ಬಗ್ಗೆ ಗೊತ್ತಾಗಿಲ್ಲ. ತನಿಖೆ ನಡೆಸಲಿದ್ದೇವೆ ಎಂದು ಮಾಹಿತಿ ನೀಡಿದರು.
ಇದರ ನಡುವೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠದ ಬಸವಲಿಂಗಶ್ರೀಗಳು ಮಠದ ಆವರಣದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಖಂಡರೊಬ್ಬರ ಬೆದರಿಕೆಗೆ ಹೆದರಿ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ರಾ ಎನ್ನುವ ಶಂಕೆ ವ್ಯಕ್ತವಾಗಿತ್ತು. ಕಳೆದ 4 ದಿನಗಳಿಂದ ನಿರಂತವಾಗಿ ವಿಡಿಯೋ ತೋರಿಸಿ ಬಸವಲಿಂಗ ಸ್ವಾಮೀಜಿಗೆ ಬ್ಲಾಕ್ಮೇಲ್ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಗಳ ಆತ್ಮಹತ್ಯೆ ಹಿಂದೆ ಷಡ್ಯಂತ್ರ ನಡೆದಿದೆ ಎನ್ನಲಾಗುತ್ತಿದೆ. ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಡೆಮಠ ಸ್ವಾಮೀಜಿ ಸಾವಿನ ಹಿಂದೆ ಯುವತಿ ಇದ್ದರಾ..? ವಿಡಿಯೋ ಕಾಲ್ನಲ್ಲಿ ಬೆದರಿಕೆ ಹಾಕಿದವರು ಯಾರು ಎಂಬುದರ ಬಗ್ಗೆ ತನಿಖೆಯಿಂದ ಗೊತ್ತಾಗಬೇಕಿದೆ.
ಸೂರ್ಯ ಗ್ರಹಣದ ದಿನ ‘ಅಪ್ಪು’ ಸಮಾಧಿ ದರ್ಶನಕ್ಕೆ ಬಂದ ‘ಪುನೀತ್’ ಫ್ಯಾನ್ಸ್ |Puneeth Rajkumar
ರಾಮ ಭಕ್ತರಿಗೆ ಸಿಹಿ ಸುದ್ದಿ ; 2024ರ ಜನವರಿಯಲ್ಲಿ ಅಯೋಧ್ಯೆ ‘ರಾಮ ಮಂದಿರ’ ಉದ್ಘಾಟನೆ, ‘ರಾಮ ಲಲ್ಲಾ’ ದರ್ಶನ ಭಾಗ್ಯ