ರಾಮನಗರ : ಕಂಚುಗಲ್ ಬಂಡೇಮಠದ `ಬಸವಲಿಂಗ ಸ್ವಾಮೀಜಿ’ ಆತ್ಮಹತ್ಯೆ ಪ್ರಕರಣ ಹತ್ತು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಸ್ವಾಮೀಜಿ ಡೆತ್ ನೋಟ್ ನೋಡಿದ ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಪೋಲಿಸ್ ತನಿಖೆಯ ವರದಿಯ ಪ್ರಕಾರ ಸ್ವಾಮೀಜಿಗಳು ಮರ್ಯಾದೆಗೆ ಅಂಜಿ ಹೇಗೆ ಮಾಡಿಕೊಂಡಿದ್ದಾರೆ ಎಂಬುದಾಗಿ ಕೂಡ ಗಾಳಿ ಸುದ್ದಿ ಹರಿದಾಡುತ್ತಿದೆ. ಸ್ವಾಮೀಜಿಗಳು ಬರೆದಿರುವ ಪತ್ರದ ಮೂಲಕವೇ ಇದರ ಕುರಿತಂತೆ ಸುಳಿವು ಸಿಕ್ಕಂತಿದೆ. ಒಂದೆಡೆ ಹನಿಟ್ರ್ಯಾಪ್ ಶಂಕೆ ವ್ಯಕ್ತವಾಗುತ್ತಿದ್ದರೆ ಮತ್ತೊಂದೆಡೆ ಡೆತ್ನೋಟ್ನಲ್ಲಿ ಕೆಲವರ ಹೆಸರುಗಳನ್ನು ಉಲ್ಲೆಖ ಮಾಡಲಾಗಿದೆ.
ಇನ್ನೂ, ಮಠದ ನಿಯಂತ್ರಣವನ್ನು ತೆಗೆದುಕೊಳ್ಳಬೇಕು ಎನ್ನುವ ಸಲುವಾಗಿ ಆ ಸ್ವಾಮೀಜಿ ಈ ಮಠಕ್ಕೆ ಮಹಿಳೆಯೊಬ್ಬಳನ್ನು ಬಿಟ್ಟಿದ್ದರು. ಆಕೆಯ ಮೋಹಕ್ಕೆ ಮರುಳಾಗಿ ನಾನು ಮಾಡಬಾರದ ಕೆಲಸ ಮಾಡಿದೆ. . ಈ ಕೃತ್ಯವನ್ನು ವಿಡಿಯೋ ಮಾಡಿ ಪ್ರತಿದಿನ ನನಗೆ ಕಿರುಕುಳ ನೀಡುತ್ತಿದ್ದರು , ಇದಕ್ಕಾಗಿಯೇ ಕೊನೆಯ ದಾರಿ ಏನು ಇಲ್ಲದೆ ನಾನು ಹೀಗೆ ಮಾಡಿದೆ ಎಂಬುದಾಗಿ ಪತ್ರದಲ್ಲಿ ಬರೆದಿಟ್ಟಿದ್ದಾರೆ. ಈ ಪತ್ರ ಸಿಗುತ್ತಿದ್ದಂತೆ ಈಗಾಗಲೇ ಪತ್ರದಲ್ಲಿ ಉಲ್ಲೇಖಿಸಲಾಗಿರುವ ವಿಡಿಯೋಗೆ ಸಂಬಂಧಿತ ಮೊಬೈಲ್ ಅನ್ನು ಕೂಡ ಈಗಾಗಲೇ ಜಪ್ತಿ ಮಾಡಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠದ ಬಸವಲಿಂಗಶ್ರೀಗಳು ಮಠದ ಆವರಣದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆದರಿಕೆಗೆ ಹೆದರಿ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ರಾ ಎನ್ನುವ ಶಂಕೆ ವ್ಯಕ್ತವಾಗಿದೆ. ಕಳೆದ 4 ದಿನಗಳಿಂದ ನಿರಂತವಾಗಿ ವಿಡಿಯೋ ತೋರಿಸಿ ಬಸವಲಿಂಗ ಸ್ವಾಮೀಜಿಗೆ ಬ್ಲಾಕ್ಮೇಲ್ ಮಾಡಲಾಗಿದೆ ಎನ್ನಲಾಗುತ್ತಿದೆ.ವಿಡಿಯೋವನ್ನು ಇಟ್ಟುಕೊಂಡು ಯುವತಿ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಳು ಎಂಬ ಮಾತು ಕೇಳಿಬರುತ್ತಿದೆ. ಇದರ ಹಿಂದೆ ರಾಜಕೀಯ ಮುಖಂಡನೊಬ್ಬನ ಕೈವಾಡ ಇದೆ ಎಂಬ ಅನುಮಾನ ಕೂಡ ದಟ್ಟವಾಗಿದೆ.. ಸ್ವಾಮೀಜಿ ಬರೆದಿರೋ ಡೆತ್ ನೋಟ್ ವಶಕ್ಕೆ ಪಡೆದು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಡೆಮಠ ಸ್ವಾಮೀಜಿ ಸಾವಿನ ಹಿಂದೆ ಯುವತಿ ಇದ್ದರಾ..? ವಿಡಿಯೋ ಕಾಲ್ನಲ್ಲಿ ಬೆದರಿಕೆ ಹಾಕಿದವರು ಯಾರು ಎಂಬುದರ ಬಗ್ಗೆ ತನಿಖೆಯಿಂದ ಗೊತ್ತಾಗಬೇಕಿದೆ.
ಜೀವನ ಸಂಗಾತಿಯ ಆಯ್ಕೆ ಸ್ವಾತಂತ್ರ್ಯದಲ್ಲಿ ಧರ್ಮದ ಮಹತ್ವವಿಲ್ಲ: ಹೈಕೋರ್ಟ್ ಮಹತ್ವ ಅಭಿಪ್ರಾಯ