ರಾಮನಗರ :ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ಮಾಗಡಿ ಇನ್ಸ್ಪೆಕ್ಟರ್ ಗೆ ವರ್ಗಾವಣೆ ಮಾಡಲಾಗಿದೆ.
ಕುದೂರು ಠಾಣೆಯ ಇನ್ ಸ್ಪೆಕ್ಟರ್ ಎಪಿ ರವಿಕುಮಾರ್ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದರು, ಆದರೆ ಪ್ರಕರಣದಲ್ಲಿ ಅವರೇ ದೂರುದಾರರಾದ ಹಿನ್ನೆಲೆ ಪ್ರಕರಣದ ತನಿಖೆಯನ್ನು ಮಾಗಡಿ ಇನ್ಸ್ಪೆಕ್ಟರ್ ರವಿ ಅವರಿಗೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣದ ತನಿಖೆಯನ್ನು ಇನ್ ಸ್ಪೆಕ್ಟರ್ ರವಿ ನೇತೃತ್ವದ ತಂಡ ಮುಂದುವರೆಸಲಿದೆ.
ಸದ್ಯ, ಸ್ವಾಮೀಜಿಯ ಕಾರು ಚಾಲಕ ಜ್ಯೋತಿ ಹಾಗೂ ದೇವಸ್ಥಾನದ ಆರ್ಚಕ ಅಂಬರೀಷ್ ಅವರ ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರಿಬ್ಬರೂ ಸ್ವಾಮೀಜಿಗೆ ಹೆಚ್ಚು ಆಪ್ತರಾಗಿದ್ದವರು ಎಂದು ಹೇಳಲಾಗಿದೆ. ಪ್ರಕರಣ ಸಂಬಂಧ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು, ವಿಡಿಯೊ ಕಾಲ್ ಮಾಡಿದ ಯುವತಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ ಎಂದು ತಿಳಿದುಬಂದಿದೆ.
ಇನ್ನು ಪ್ರಕರಣ ಸಿಎಂ ಬಸವರಾಜ ಬೊಮ್ಮಾಯಿ ಕಚೇರಿಗೆ ತಲುಪಿದೆ. ವೀರಶೈವ ಮುಖಂಡರಿಂದ ಸಿಎಂ ಬವಸರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಇಂದು ಬೊಮ್ಮಾಯಿ ಅವರನ್ನು ಸಮಾಜದ ಮುಖಂಡ ಪರಮಶಿವಯ್ಯ ನೇತೃತ್ವದಲ್ಲಿ ಭೇಟಿ ಮಾಡಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಗೆ ಮುಖಂಡರು ಮೆಗಾ ಪ್ಲಾನ್ ಹಾಕಿಕೊಂಡಿದ್ದಾರೆ.ಪ್ರಕರಣದ ತನಿಖೆಯನ್ನು ಇನ್ ಸ್ಪೆಕ್ಟರ್ ರವಿ ನೇತೃತ್ವದ ತಂಡ ಮುಂದುವರೆಸಲಿದೆ.
Viral news : ಪವರ್ ಸ್ಟಾರ್ ‘ಪುನೀತ್’ಗಾಗಿ ಕನ್ನಡ ಹಾಡು ಅರ್ಪಿಸಿದ ಮಲಯಾಳಂ ನಟ ಜಯರಾಮ್ ವಿಡಿಯೋ ವೈರಲ್ | Watch
BREAKING NEWS : ಜೆಡಿಎಸ್ ‘ಪಂಚರತ್ನ’ ರಥ ಯಾತ್ರೆಗೆ ಬೆಂಗಳೂರಿನಲ್ಲಿ H.D ಕುಮಾರಸ್ವಾಮಿ ಚಾಲನೆ
ತಾ.27-10-2022ರ ಗುರುವಾರದ ನಿಮ್ಮ ಇಂದಿನ ರಾಶಿಭವಿಷ್ಯ ನೋಡಿ | Astrology