ರಾಮನಗರ: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳ ಪೊಲೀಸ್ ಕಸ್ಟಡಿ ನಾಳೆ ಅಂತ್ಯಗೊಳ್ಳಲಿದೆ.
ನ.5 ಶನಿವಾರ ನಾಳೆ ಮತ್ತೆ ಮಾಗಡಿ ಕೋರ್ಟ್ಗೆ ಮೃತ್ಯುಂಜಯ ಸ್ವಾಮೀಜಿ, ನೀಲಾಂಬಿಕೆ ಹಾಗೂ ಮಹದೇವಯ್ಯರನ್ನು ಪೊಲೀಸರು ಹಾಜರು ಪಡಿಸಲಿದ್ದಾರೆ.
ಕಳೆದ ಅಕ್ಟೋಬರ್ 30 ರಂದು ಬಂಧನವಾಗಿದ್ದ ಮೂವರು ಆರೋಪಿಗಳನ್ನು ಸೋಮವಾರ ಕೋರ್ಟ್ಗೆ ಹಾಜರು ಪಡಿಸಲಾಗಿತ್ತು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಇದೀಗ ನಾಳೆಗೆ ಪೊಲೀಸ್ ಕಸ್ಟಡಿ ಅಂತ್ಯಗೊಳ್ಳಲಿದ್ದು ಈ ಬಗ್ಗೆ ಮತ್ತೆ ಮಾಗಡಿ JMFC ಕೋರ್ಟ್ ನಾಳೆ ವಿಚಾರಣೆ ನಡೆಸಲಿದೆ.ಪ್ರಕರಣ ಸಂಬಂಧ ಮತ್ತೆ ಆರೋಪಿಗಳನ್ನು ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಲಿದ್ಯಾ..? ಎನ್ನುವುದನ್ನು ಕಾದುನೋಡಬೇಕಿದೆ. ಈಗಾಗಲೇ ಪೊಲೀಸ್ ತನಿಖೆ ವೇಳೆ ಕಣ್ಣೂರು ಮಠ ಸ್ವಾಮೀಜಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ತನಿಖೆ ಮುಂದುವರೆದಿದೆ.
ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ಪೊಲೀಸರಿಂದ ತನಿಖೆ ಚುರುಕುಗೊಂಡಿದ್ದು, ನಿನ್ನೆ ಪೊಲೀಸರು ಬಂಡೇಮಠದದಲ್ಲಿ ಸ್ಥಳ ಮಹಜರು ಮಾಡಿದ್ದಾರೆ.ಬಂಡೇಮಠಕ್ಕೆ ಕಣ್ಣೂರಿನ ಮೃತ್ಯುಂಜಯ ಸ್ವಾಮೀಜಿಯನ್ನು ಕರೆತಂದು ಸ್ಥಳ ಮಹಜರು ಮಾಡಲಾಯಿತು. ಈ ವೇಳೆ ಮಠದ ನಕಲಿ ಸೀಲ್ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು 15 ನಿಮಿಷದೊಳಗೆ ಸ್ಥಳ ಮಹಜರು ನಡೆದಿದೆ. ಮಠಕ್ಕೆ ಕಣ್ಣೂರು ಶ್ರೀಗಳು ಬರುತ್ತಿದ್ದಂತೆ ಮಠದ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ, ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಮೃತ್ಯುಂಜಯಶ್ರೀ ವಿಡಿಯೋ ಮಾಡಿದ್ದು ತಪ್ಪಾಯ್ತು ಎಂದು ಒಪ್ಪಿಕೊಂಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಡಾ. ಮೃತ್ಯುಂಜಯಶ್ರೀ ತಪ್ಪೊಪ್ಪಿಕೊಂಡಿದ್ದಾರೆಕಣ್ಣೂರು ಮಠದ ಡಾ. ಮೃತ್ಯುಂಜಯಶ್ರೀ ಸ್ವಾಮೀಜಿಗಳು ತಪ್ಪೊಪ್ಪಿಕೊಂಡಿದ್ದಾರೆ. 3 ದಿನದಿಂದ ಮೃತ್ಯುಂಜಯಶ್ರೀ ವಿಚಾರಣೆಯನ್ನು ಮಾಗಡಿ ಪೊಲೀಸರು ಮಾಡುತ್ತಿದ್ದಾರೆ. ಮಾಗಡಿ ಪೊಲೀಸರ ವಿಚಾರಣೆ ವೇಳೆ ಸ್ವಾಮೀಜಿ ಮಾಡಿದ್ದ ತಪ್ಪೊಪ್ಪಿಕೊಂಡಿದ್ದಾರೆ. ಬೇರೆ ಸ್ವಾಮೀಜಿಗಳನ್ನು ಟಾರ್ಗೆಟ್ ಮಾಡಿಲ್ಲ ಎಂದು ಹೇಳಿದ್ದಾರೆ.
BIGG NEWS : ನ.13, 14 ರಂದು ದತ್ತಪೀಠಕ್ಕೆ ಪ್ರವಾಸಿಗರ ನಿರ್ಬಂಧ ; ಜಿಲ್ಲಾಡಳಿತ ಆದೇಶ |Datta Peeta
BREAKING NEWS : ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು