ವಿಜಯಪುರ : 2 ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ನಕಲಿ ಹೋರಾಟ ಮಾಡುತ್ತಿದೆ ಎಂಬ ನಟ ಚೇತನ್ ಹೇಳಿಕೆಗೆ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಯತ್ನಾಳ್ ನಟ ಚೇತನ್ ಹೇಳಿಕೆಗೆ ಕಿಡಿಕಾರಿದ್ದು, ಯತ್ನಾಳ್ ಚೇತನ್ ನಿಜವಾದ ಭಾರತೀಯ ಅಲ್ಲ ಎಂದು ಹೇಳಿದ್ದಾರೆ.
ಯಾವುದೇ ಸಿದ್ದಾಂತ ಇಲ್ಲದ ವ್ಯಕ್ತಿಗೆ ಬೆಲೆ ಕೊಡುವುದು ಬೇಡ, ತಮ್ಮ ಉಪಕಜೀವನಕ್ಕಾಗಿ ಅಂಬೇಡ್ಕರ್ ಹೆಸರು ಹಾಳು ಮಾಡುತ್ತಿದ್ದಾರೆ, ದಲಿತ ಮುಸ್ಲಿಂ ನಡುವೆ ಜಗಳ ಹಚ್ಚಿ ಹಾಕುತ್ತಿದ್ದಾರೆ. ಕೆಲವು ರೋಲ್ ಕಾಲ್ ನಾಯಕರು ಹೀಗೆ ಮಾಡುತ್ತಿದ್ದಾರೆ, ನಟ ಚೇತನ್ ಭಾರತದ ನಾಗರಿಕ ಅಲ್ಲ ಎಂದು ಕಿಡಿಕಾರಿದರು.