ಬೆಂಗಳೂರು: ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ವಿರೋಧವಿತ್ತು. ಆದರೇ ಅವರು ಹಿಂದೂ ಸಂಸ್ಕೃತಿಗೆ ಗೌರವ ಬರುವಂತೆ ನಡೆದುಕೊಂಡಿದ್ದಾರೆ. ಅವರನ್ನು ವಿರೋಧಿಸುವ ಪ್ರಶ್ನೆಯೇ ಇಲ್ಲ ಎಂಬುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ವಿರೋಧ ಇತ್ತು. ಆದರೇ ಇಂದು ಖುಷಿಯಾಗಿದೆ. ಹಿಂದೂ ಹೆಣ್ಣುಮಗಳ ರೀತಿ ದೇವಸ್ಥಾನಕ್ಕೆ ಬಂದು ಕೈಮುಗಿದಿದ್ದಾರೆ. ಆರತಿ ಬೆಳಗಿ ದೇವರ ಮುಂದೆ ನಿಂತು ಕೈಮುಗಿದಿದ್ದಾರೆ ಎಂದರು.
ಚಾಮುಂಡಿ ಆಶೀರ್ವಾದದಿಂದ ಬಾನು ಮುಷ್ತಾಕ್ ಉದ್ಘಾಟನೆ ಮಾಡಿದ್ದೇನೆ ಎಂದಿದ್ದಾರೆ. ಅವತ್ತೇ ಬಾನು ಮುಷ್ತಾಕ್ ಈ ಮಾತು ಹೇಳಿದ್ದರೇ ವಿರೋಧವೇ ಇರುತ್ತಿರಲಿಲ್ಲ. ಹಿಂದೂ ಸಂಸ್ಕೃತಿಗೆ ಗೌರವ ಬರುವ ರೀತಿ ನಡೆದುಕೊಂಡಿದ್ದಾರೆ. ಇನ್ನೂ ಬಾನು ಮುಷ್ತಾಕ್ ವಿರೋಧಿಸುವ ಪ್ರಶ್ನೆಯೇ ಇಲ್ಲ ಎಂಬುದಾಗಿ ತಿಳಿಸಿದರು.
ಸಿದ್ಧರಾಮಯ್ಯ ಅವರು ರಾಜಕೀಯ ಮಾಡಲು ಇದರಲ್ಲಿ ಹೊರಟಿದ್ದರು. ಹಿಂದೂಗಳ ಅನಿಸಿಕೆ ಪರವಾಗಿ ಬಾನು ಮುಷ್ತಾಕ್ ನಡೆದುಕೊಂಡಿದ್ದಾರೆ. ಬಾನು ಮುಷ್ತಾಕ್ ಬಗ್ಗೆ ಅಭಿಮಾನ ಹೆಚ್ಚಾಗಿದೆ ಎಂಬುದಾಗಿ ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ ಕೋಟಿ ವೆಚ್ಚ: ದಸರಾ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ








