ಧಾರವಾಡ : ಕಲಘಟಗಿ ತಾಲೂಕು ಯಲಿವಾಳ ಗ್ರಾಮದ ರೈತ ಬಸಪ್ಪ ಚೆನ್ನಪ್ಪ ಕಾಮದೇನು ಎಂಬುವರು ತನ್ನ ಮಾವಿನ ಬೆಳೆಗೆ ಸಂಬಂಧಿಸಿದಂತೆ 2018-19ನೇ ಸಾಲಿನ ವಿಮಾ ಕಂತು ರೂ.3,399/-ನ್ನು ಇನ್ಸುರೆನ್ಸ್ ಕಂಪನಿಗೆ ಕಟ್ಟಿ ಇತರೇ ವಿವರಗಳನ್ನು ಕಳುಹಿಸದೇ ಕಲಘಟಗಿಯ ಬರೋಡಾ ಬ್ಯಾಂಕಿನವರು ನಿರ್ಲಕ್ಷ, ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ದೂರನ್ನು ಸಲ್ಲಿಸಿದ್ದರು.
ವಿದ್ಯಾರ್ಥಿಗಳೇ ಗಮನಿಸಿ : ಹಳೆಯ ಪಾಸ್, ರಸೀದಿ ತೋರಿಸಿ `KSRTC’ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿ
ಆ ದೂರಿನ ವಿಚಾರಣೆಯನ್ನು ನಡೆಸಿದ ಆಯೋಗ ಸದರಿ ಪ್ರಕರಣದಲ್ಲಿ ಬ್ಯಾಂಕ್ ಆಫ್ ಬರೋಡಾದವರು ವಿಮಾ ಕಂತನ್ನು ಇನ್ಸುರೆನ್ಸ್ ಕಂಪನಿಗೆ ಕಳುಹಿಸದೇ ಸೇವಾ ನ್ಯೂನ್ಯತೆ ಎಸದ್ದಾರೆಂದು ತೀರ್ಪು ನೀಡಿ ಸದರಿ ಬ್ಯಾಂಕ್ ಆಫ್ ಬರೋಡಾಗೆ ರೂ.40 ಸಾವಿರ ದಂಡ ರೂಪದ ಪರಿಹಾರ ಮತ್ತು ರೈತ ಪ್ರಕರಣ ನಡೆಸಿದ ಖರ್ಚಿಗೆ ರೂ.10 ಸಾವಿರ ಗಳನ್ನು ನೀಡುವಂತೆ ಆದೇಶಿಸಿ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ಮಹಿಳಾ ಸದಸ್ಯ ವಿ.ಅ. ಬೋಳಶೆಟ್ಟಿ ಮತ್ತು ಸದಸ್ಯ ಪಿ.ಸಿ.ಹಿರೇಮಠ ತೀರ್ಪು ನೀಡಿದ್ದಾರೆ.