ದೆಹಲಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ(Sheikh Hasina) ಅವರು ಇಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅವರ ನಾಲ್ಕು ದಿನಗಳ ಭಾರತದ ಪ್ರವಾಸದಲ್ಲಿ ಪ್ರಧಾನಿ ಮೋದಿ(Prime Minister Modi) ಅವರನ್ನು ಭೇಟಿ ಮಾಡಲಿದ್ದು, ಮಾತುಕತೆ ನಡೆಸಲಿದ್ದಾರೆ.
ಹಸೀನಾ ಅವರ ಭೇಟಿಯು ಎರಡು ದೇಶಗಳ ನಡುವಿನ ಸಂಪರ್ಕ, ಇಂಧನ, ಆಹಾರ ಭದ್ರತೆ, ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳ ಮೇಲೆ ಕೇಂದ್ರೀಕರಿಸುತ್ತದೆ. ಇದೇ ವೇಳೆ ಕುಶಿಯಾರಾ ನದಿ ನೀರು ಹಂಚಿಕೆ ಸೇರಿ ಹಲವು ಒಪ್ಪಂದಗಳಿಗೆ ಎರಡೂ ದೇಶಗಳು ಸಹಿ ಹಾಕುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇನ್ನೂ, ಹಸೀನಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನೂ ಭೇಟಿಯಾಗಲಿದ್ದಾರೆ.
ಹಸೀನಾ ಅವರೊಂದಿಗೆ ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್, ವಾಣಿಜ್ಯ ಸಚಿವ ಟಿಪ್ಪು ಮುನ್ಶಿ, ರೈಲ್ವೆ ಸಚಿವ ಮಹಮ್ಮದ್ ನೂರುಲ್ ಇಸ್ಲಾಂ ಸುಜನ್ ಹಾಗೂ ಇತರ ಕೆಲವು ಸಚಿವರು ಕೂಡ ಭಾರತಕ್ಕೆ ಬರಲಿದ್ದಾರೆ.
ಹಸೀನಾ ಅವರು 2019ರ ಅಕ್ಟೋಬರ್ನಲ್ಲಿ ಕೊನೆಯ ಬಾರಿ ಭಾರತಕ್ಕೆ ಬಂದಿದ್ದರು.