ಬಾಂಗ್ಲಾದೇಶ : ಬಾಂಗ್ಲಾದೇಶದಲ್ಲಿ ಧಾರ್ಮಿಕ ಯಾತ್ರಾರ್ಥಿಗಳನ್ನು ತುಂಬಿದ್ದ ದೋಣಿ ಮುಳುಗಿದ ದುರಂತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ ಏರಿಕೆಯಾಗುತ್ತಿದೆ. ದೋಣಿಯಿಂದ ನಾಪತ್ತೆಯಾಗಿದ್ದವರ ಪತ್ತೆ ಕಾರ್ಯಾಚರಣೆ ಮುಂದುವರೆದಿದ್ದು, ಇಂದು 10 ಮೃತದೇಹಗಳನ್ನು ರಕ್ಷಕರು ಮತ್ತು ನೌಕಾಪಡೆಯ ಡೈವರ್ಗಳು ಹೊರತೆಗೆದಿದ್ದು, ಈ ಮೂಲಕ ಮೃತರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.
ಮೃತಪಟ್ಟವರಲ್ಲಿ ಹದಿನೇಳು ಮಕ್ಕಳು ಹಾಗೂ ಕನಿಷ್ಠ 30 ಮಹಿಳೆಯರಿದ್ದಾರೆ. ಘಟನೆಯ ತನಿಖೆಗೆ ಸಮಿತಿ ರಚಿಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಅಬ್ದುರ್ ರಜಾಕ್ ಅತಿಳಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ, ನೌಕಾಪಡೆಯ ಡೈವರ್ಗಳು ಮತ್ತು ಗ್ರಾಮಸ್ಥರು ಸೇರಿದಂತೆ ರಕ್ಷಣಾ ಕಾರ್ಯಕರ್ತರು ದುರಂತ ಸಂಭವಿಸಿದ ಕರೋಟೋವಾ ನದಿಯಲ್ಲಿ ಮೈಲುಗಳಷ್ಟು ಕೆಳಗೆ ಹುಡುಕುತ್ತಿದ್ದಾರೆ ಎಂದು ಬೋಡಾ ಪೊಲೀಸ್ ಮುಖ್ಯಸ್ಥ ಸುಜಯ್ ಕುಮಾರ್ ರಾಯ್ ಹೇಳಿದ್ದಾರೆ.
ಉತ್ತರದ ಪಟ್ಟಣವಾದ ಬೋಡಾ ಬಳಿ ಭಾನುವಾರ ದೋಣಿ ಮುಳುಗಿತ್ತು. ಮೊದಲಿಗೆ 24 ಮಂದಿ ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಆದರೆ ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಸಾವಿನ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.
ದೋಣಿಯು ಸುಮಾರು 90 ಜನರನ್ನು ಹೊತ್ತೊಯ್ಯುತ್ತಿತ್ತು. ಅವರಲ್ಲಿ ಸುಮಾರು 50 ಜನರು ಶತಮಾನಗಳಷ್ಟು ಹಳೆಯದಾದ ಹಿಂದೂ ದೇವಾಲಯಕ್ಕೆ ಪ್ರಮುಖ ಹಬ್ಬಕ್ಕಾಗಿ ಹೋಗುತ್ತಿದ್ದ ಯಾತ್ರಾರ್ಥಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದರ ನಡುವೆ ಅನುಮತಿ ಪಡೆದ ಸಾಮರ್ಥ್ಯಕ್ಕಿಂತ ಮೂರು ಪಟ್ಟು ದೋಣಿಯನ್ನು ಹೊತ್ತೊಯ್ಯುತ್ತಿತ್ತು ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಿರಾಜುಲ್ ಹುದಾ ಸೋಮವಾರ ತಿಳಿಸಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ದಕ್ಷಿಣ ಬಾಂಗ್ಲಾದೇಶದಲ್ಲಿ ಮೂರು ಅಂತಸ್ತಿನ ದೋಣಿಗೆ ಬೆಂಕಿ ಹತ್ತಿದಾಗ ಸುಮಾರು 40 ಜನರು ಸಾವನ್ನಪ್ಪಿದ್ದರು.
ಜೂನ್ 2020 ರಲ್ಲಿ ಢಾಕಾದಲ್ಲಿ ದೋಣಿಯೊಂದು ಮತ್ತೊಂದು ಹಡಗಿನೊಂದಿಗೆ ಡಿಕ್ಕಿ ಹೊಡೆದು ಪರಿಣಾಮ 32 ಜನರು ಸಾವನ್ನಪ್ಪಿದ್ದರು. 2015 ರಲ್ಲಿ ರಾಜಧಾನಿಯ ಪಶ್ಚಿಮಕ್ಕೆ ನದಿಯಲ್ಲಿ ಕಿಕ್ಕಿರಿದ ಹಡಗು ಸರಕು ಹಡಗಿಗೆ ಡಿಕ್ಕಿ ಹೊಡೆದಾಗ ಕನಿಷ್ಠ 78 ಜನರು ಸಾವನ್ನಪ್ಪಿದರು.
ಪಿ.ಎಫ್.ಐ ಕಾರ್ಯಕರ್ತರ ಮೇಲೆ ದಾಳಿ ಪ್ರಕರಣ: ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ – ಸಿಎಂ ಬೊಮ್ಮಾಯಿ