ಢಾಕಾ: ಬಾಂಗ್ಲಾದೇಶ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 39 ಕ್ಕೆ ಏರಿಕೆಯಾಗಿದೆ.
ಬಾಂಗ್ಲಾದೇಶದಲ್ಲಿ ಪ್ರಯಾಣಿಕರಿಂದ ತುಂಬಿದ ದೋಣಿ ಮುಳುಗಿ ಬರೋಬ್ಬರಿ 39 ಜನರು ಸಾವನ್ನಪ್ಪಿದ್ದು, ಅನೇಕ ಜನರು ಕಾಣೆಯಾಗಿರುವ ಘಟನೆ ನಡೆದಿದೆ.
ಇಲ್ಲಿಯವರೆಗೆ ಪತ್ತೆಯಾದ ಶವಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ನಾಪತ್ತೆಯಾದವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ
ಬಾಂಗ್ಲಾದೇಶದಲ್ಲಿ ದೋಣಿ ಅಪಘಾತಗಳಲ್ಲಿ ಪ್ರತಿವರ್ಷ ನೂರಾರು ಜನರು ಸಾಯುತ್ತಾರೆ. ಇದು ತಗ್ಗು ಪ್ರದೇಶದ ವ್ಯಾಪಕವಾದ ಒಳನಾಡಿನ ಜಲಮಾರ್ಗಗಳನ್ನು ಹೊಂದಿದ್ದು, ಯಾವುದೇ ಸುರಕ್ಷತಾ ಮಾನದಂಡಗಳನ್ನು ಹೊಂದಿಲ್ಲ ಎನ್ನಲಾಗುತ್ತಿದೆ.