ಶಿವಮೊಗ್ಗ: ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನನ್ನು ನೀನು ಬೆಳೆಯಬೇಕು. ರಾಜಕೀಯಕ್ಕೆ ಬರಬೇಕು ಎಂಬುದಾಗಿ ಕರೆದು, ಸ್ಪೂರ್ತಿ ತುಂಬಿ, ಶಾಸಕನನ್ನಾಗಿ ಮಾಡೇ ಬಿಟ್ಟಿದ್ದು ಎಸ್.ಬಂಗಾರಪ್ಪನವರು. ನಾನೊಬ್ಬ ಅವರ ಶಿಷ್ಯನೆಂಬ ಹೆಮ್ಮೆ ನನಗಿದೆ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಭಾವುಕರಾಗಿ ನುಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬಂಗಾರ ಧಾಮದಲ್ಲಿ ದಿವಂಗತ ಎಸ್.ಬಂಗಾರಪ್ಪ ಅವರ 93ನೇ ಹುಟ್ಟು ಹಬ್ಬದ ನಿಮಿತ್ತ ಆಯೋಜಿಸಿದ್ದಂತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಂಗಾರಪ್ಪ ಅವರಿಂದ ಸ್ವಾಗತ ಕಂಡು ಅವರಿಗೆ ಕೈಮುಗಿಯುವಂತೆ ಮನಸ್ಸಾಯಿತು. ಇಂದು 93ನೇ ವರ್ಷದ ದಿವಂಗತ ಎಸ್.ಬಂಗಾರಪ್ಪ ಅವರ ಹುಟ್ಟಿದ ಹಬ್ಬ ಆಚರಿಸಲಾಗುತ್ತಿದೆ. ಬಂಗಾರ ಧಾಮವನ್ನು ಪ್ರವಾಸಿ ತಾಣವಾಗಿ ಘೋಷಿಸಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಧನ್ಯವಾದ ತಿಳಿಸಿದರು.
1 ಕೋಟಿಗೂ ಹೆಚ್ಚು ಜನರಿಗೆ ಪಂಪ್ ಸೆಟ್ ಬಳಕೆ ಮಾಡಿ, ಬೆಳಕು, ಬದುಕು ಕಂಡಿದ್ದಾರೆ ಎಂದರೇ ಅದು ಬಂಗಾರಪ್ಪನವರ ಕೊಡುಗೆ. ಶಿಕ್ಷಕರು ಹಳ್ಳಿಗರು ಪಟ್ಟಣದ ವ್ಯತ್ಯಾಸ ಕಂಡಿದ್ದು ಬಂಗಾರಪ್ಪ ಅವರ ಚಿಂತನೆಯಾಗಿದೆ. ಆ ಕಾಲದಲ್ಲೇ ಗ್ರಾಮೀಣ ಕೃಪಾಂಕದಲ್ಲಿ ಲಕ್ಷಾಂತರ ಜನರು ಉದ್ಯೋಗ ಪಡೆದುಕೊಂಡಿದ್ದಾರೆ ಅಂದ್ರೆ ಅದಕ್ಕೆ ಕಾರಣ ಎಸ್.ಬಂಗಾರಪ್ಪ. ಈ ನಾಡಿಗೆ ಆಶ್ರಯ ಮನೆ, ಆರಾಧನ ಎಲ್ಲಾ ಕೊಟ್ಟು ಇಡೀ ರಾಜ್ಯದಲ್ಲಿ ಬಡವರ ಬಂಧು ಎನಿಸಿಕೊಂಡವರು ಅದು ಬಂಗಾರಪ್ಪನವರು ಮಾತ್ರವೇ ಎಂಬುದಾಗಿ ಹೇಳಿದರು.
ಎಸ್ ಬಂಗಾರಪ್ಪ ಅವರು ಯಾವತ್ತೂ ಸರಳ ವ್ಯಕ್ತಿಯಾಗಿದ್ದರು. ಮನೆಯಿಂದ ಗೇಟಿನವರೆಗೆ ಬಂದಂತ ಗಣ್ಯರನ್ನು ಕಳುಹಿಸಿಕೊಡೋದಕ್ಕೆ ಬರುತ್ತಿದ್ದರು. ಆ ಕಾಲದಲ್ಲಿ ಮಕ್ಕಳು ಶಾಲೆಗೆ ಬರಬೇಕು ಅಂತ 1 ರೂ ನೀಡಿ ಶಿಕ್ಷಣದ ಕ್ರಾಂತಿ ಮಾಡಿದ್ದು ಎಸ್ ಬಂಗಾರಪ್ಪ ಅವರ ಕೊಡುಗೆಯಾಗಿದೆ. ಇಂದು ಶಿಕ್ಷಣ ಸಚಿವರಾಗಿ ಮಧು ಬಂಗಾರಪ್ಪ ಅವರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ನಾನು ಸಾಮಾನ್ಯ ವ್ಯಕ್ತಿಯಾಗಿದ್ದಂತ ಸಂದರ್ಭದಲ್ಲಿ ಗೋಪಾಲಕೃಷ್ಣ ನೀನು ನಿಲ್ಲಬೇಕು. ರಾಜಕೀಯಕ್ಕೆ ಬರಬೇಕು ಎಂಬುದಾಗಿ ತಂದು ಈ ಮಟ್ಟಕ್ಕೆ ಬೆಳೆಸಿದ್ದು ಎಸ್ ಬಂಗಾರಪ್ಪ ಅವರು. ನನ್ನ ಒಬ್ಬನನ್ನು ಅಲ್ಲ ನನ್ನಂತ ಸಾವಿರಾರು ಜನರನ್ನು ಬಂಗಾರಪ್ಪನವರು ಬೆಳೆಸಿದ್ದಾರೆ. ಅವರ ಶಿಷ್ಟ ಇಂದು, ಎಂದು, ಮುಂದು ಎಂಬುದಾಗಿ ನೆನಪಿಸಿಕೊಂಡರು.
ಸಾಮಾನ್ಯರಲ್ಲಿ, ಬಡವರಲ್ಲಿ, ಎಲ್ಲಾ ವರ್ಗದವರಲ್ಲಿ ಜಾತಿಯನ್ನೇ ನೋಡದೇ ಅವರ ಕೆಲಸ ಮಾಡಿಕೊಟ್ಟಂತವರು ಎಸ್.ಬಂಗಾರಪ್ಪನವರು. ಆ ಕಾರಣಕ್ಕೇ ಅವರು ಇಂದಿಗೂ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ಅವರ ನೆನಪು 93 ವರ್ಷವಾದರೂ ನೆನಪು ಮಾಡಿಕೊಳ್ಳುತ್ತಿರುವುದರ ಹಿಂದೆ ಅವರ ಸೇವೆಯೇ ಕಾರಣ ಎಂದರು.
ನಾನೊಬ್ಬ ಅವರ ಶಿಷ್ಯ. ಅವರ ಅಭಿಮಾನಿಯಾಗಿ, ಅವರ ಶಿಷ್ಟನಾಗಿ ಅವರಂತೆ ಡ್ರೆಸ್ ಧರಿಸುತ್ತೇನೆ. ಆದರೇ ಅವರಿಗೆ ಅವರೇ ಸರಿಸಾಟಿ. ಅವರು ನಾನು ಆಗಲು ಸಾಧ್ಯವಿಲ್ಲ. ಅವರ ಶಿಷ್ಟ ನಾನು ಮಾತ್ರ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು
ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ, ಸಿಗುವ ವಿಶ್ವಾಸವಿದೆ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು
ಇಂದು ಬಂಗಾರಪ್ಪ ಜನ್ಮದಿನ ಹಿನ್ನಲೆ: ಸಾಗರದಲ್ಲಿ ರೋಗಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಹಣ್ಣು-ಹಂಪಲು ವಿತರಣೆ








