ಬೆಂಗಳೂರು : ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಈಗಾಗಲೇ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ಇಂದು ಸಹ ಕೊಲೆಗೆ ಸುಪಾರಿ ಪಡೆದಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೀಗ ಬೆಂಗಳೂರಿನ 29ನೇ ಎಸಿಎಂಎಂ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ವಿಚಾರಣೆ ನಡೆಯಿತು.
ವಿಚಾರಣೆ ವೇಳೆ ಪೊಲೀಸರ ಮೇಲೆ ಆರೋಪಿ ಕಿರಣ್ ಪರ ವಕೀಲರು ಆರೋಪ ಮಾಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ವರದಿಯ ಬಗ್ಗೆ ಆರೋಪಿಯ ಪರ ವಕೀಲರು ಅನುಮಾನ ವ್ಯಕ್ತಪಡಿಸಿದ್ದಾರೆ. ವೈದ್ಯರು ಯಾವುದೇ ಗಾಯ ಇಲ್ಲ ಎಂದು ಬರೆದಿದ್ದಾರೆ. ಆದರೆ ಹೊಡೆದಿರುವುದಕ್ಕೆ ಕಾಲಿನಲ್ಲಿ ಒಳ ಪೆಟ್ಟಾಗಿದೆ. ನಮಗೆ ಮೆಡಿಕಲ್ ವರದಿ ಪ್ರತಿ ಕೊಡಿ ಅಂದರೂ ಕೊಡುತ್ತಿಲ್ಲ. ವಿಕ್ಟೋರಿಯಾ ವೈದ್ಯರು ಶಾಮೀಲಾಗಿ ವರದಿ ಕೊಟ್ಟಿದ್ದಾರೆ. ವರದಿಯ ಪ್ರತಿ ಸಹ ಕೊಡುತ್ತಿಲ್ಲ ಎಂದು ಕಿರಣ್ ಪರ ವಕೀಲರು ಪೊಲೀಸರ ಮೇಲೆ ಆರೋಪಿಸಿದರು.
ಯಾವ ಆಸ್ಪತ್ರೆ, ಯಾವ ಡಾಕ್ಟರ್ ಬೇಕೆಂದು ಮೆಮೋ ಹಾಕಿ. ನಿಮಗೆ ಬೇಕಾದ ಆಸ್ಪತ್ರೆಗೆ ನಾವು ರೆಫರ್ ಮಾಡುತ್ತೇವೆ. ತನಿಖೆತ ಕಲಿಕಾ ಸ್ಥಗಿತ ಮಾಡುವಂತೆ ಸೂಚಿಸುತ್ತೇನೆ ತನಿಖಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಮತ್ತೊಮ್ಮೆ ಆರೋಪಿ ಕಿರಣಗೆ ಮೆಡಿಕಲ್ ಟೆಸ್ಟ್ ಮಾಡುವುದಕ್ಕೆ ಇದೆ ವೇಳೆ ಕೋರ್ಟ್ ಅನುಮತಿ ನೀಡಿತು. ಕಮಾಂಡೋ ಆಸ್ಪತ್ರೆಗೆ ನ್ಯಾಯಾಧೀಶರು ಅನುಮತಿ ನೀಡಿದರು. ನಾಳೆ ಸಂಜೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.