ಬೆಂಗಳೂರು: ನಗರದಲ್ಲಿ 7.11 ಕೋಟಿಯ ಹಣವನ್ನು ದರೋಡೆ ಮಾಡಲಾಗಿತ್ತು. ಈಗಾಗಲೇ ಬಹುತೇಕ ಆರೋಪಿಗಳನ್ನು ಬಂಧಿಸಲಾಗಿದೆ. ಹೀಗೆ ಬಂದಿತ ಇಬ್ಬರು ಆರೋಪಿಗಳು ಮಾತ್ರ ತಮ್ಮ ಗರ್ಭಿಣಿ ಪತ್ನಿಯರ ಆರೋಗ್ಯ ವಿಚಾರಿಸಲು ಹೋಗಿ ಪೊಲೀಸರಿಗೆ ಲಾಕ್ ಆಗಿದ್ದಾರೆ.
ಹೌದು.. ಬೆಂಗಳೂರಲ್ಲಿ ನಡೆದಿದ್ದಂತ 7.11 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿದ್ದಂತ ರವಿ ಹಾಗೂ ರಾಕೇಶ್ ಪತ್ನಿಯರು ಗರ್ಭಿಣಿಯರಾಗಿದ್ದರು. ಮನೆಯಲ್ಲಿ ಒಬ್ಬರೆ ಇದ್ದರು. ಹೀಗಾಗಿ ಆರೋಪಿಗಳು ಅವರ ಆರೋಗ್ಯ ವಿಚಾರಿಸೋದಕ್ಕೆ ಸಿಮ್ ಕಾರ್ಡ್ ಬಿಟ್ಟು 10 ಮೊಬೈಲ್ ಖರೀದಿಸಿದ್ದರು.
ಸಿಮ್ ಕಾರ್ಡ್ ಖರೀದಿ ಮಾಡಿ, ಅದರಿಂದ ಕಾಲ್ ಮಾಡಿದರೇ ಸಿಕ್ಕಿ ಬೀಳುತ್ತೇವೆ ಎಂದು ಅರಿತಿದ್ದಂತ ಆರೋಪಿಗಳು, ದರೋಡೆಯ ಬಳಿಕ ಹೈದರಾಬಾದ್ ಗೆ ಕ್ಯಾಬ್ ಬುಕ್ ಮಾಡಿಕೊಂಡು ಹೋಗುತ್ತಿದ್ದರು. ಈ ವೇಳೆಯಲ್ಲಿ ಕ್ಯಾಬ್ ಚಾಲಕನ ಮೊಬೈಲ್ ಪಡೆದು ಆರೋಪಿಗಳು ತಮ್ಮ ಗರ್ಭಿಣಿ ಹೆಂಡತಿಯರಿಗೆ ಪೋನ್ ಮಾಡಿ, ಆರೋಗ್ಯದ ಕಡೆ ಗಮನ ಕೊಡು, ಹುಷಾರು ಅಂತ ಹೇಳಿದ್ದಾರೆ.
ಆದರೇ ಪೊಲೀಸರು ಈ ವೇಳೆಗಾಗಲೇ ರವಿ ಮತ್ತು ರಾಕೇಶ್ ಪತ್ನಿಯರನ್ನು ವಶಕ್ಕೆ ಪಡೆದಿದ್ದರು. ಪತ್ನಿಯರಿಗೆ ಪೋನ್ ಮಾಡಿದ ವಿಷಯ ತಿಳಿದಂತ ಪೊಲೀಸರು, ಆ ನಂಬರ್ ಟ್ರೇಸ್ ಮಾಡಿ, ಹೈದರಾಬಾದ್ ಗೆ ತೆರಳಿ, ಕೊನೆಗೂ ರೈಲ್ವೆ ನಿಲ್ದಾಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
BIG NEWS: ‘ಲಿಂಗನಮಕ್ಕಿ ಪವರ್ ಚಾನಲ್’ಗೆ ಅಳವಡಿಸಿದ್ದ ಹೆಚ್ಚುವರಿ ಕಾಂಕ್ರೀಟ್ ತಡೆಗೋಡೆ ಕುಸಿತ, ಹೆಚ್ಚಿದ ಆತಂಕ
BIG NEWS : ರಾಜ್ಯದಲ್ಲಿ ಅವಕಾಶ ಸಿಕ್ಕರೆ ದಲಿತರನ್ನು ‘CM’ ಮಾಡುತ್ತೇವೆ : ಸಚಿವ ಕೆಜೆ ಜಾರ್ಜ್ ಹೇಳಿಕೆ








