ಬೆಂಗಳೂರು : ಬೆಂಗಳೂರಿನಲ್ಲಿ ಪಟಾಕಿ ಅವಘಡಗಳು ಹೆಚ್ಚಾಗಿದ್ದು, ಪಟಾಕಿ ಸಿಡಿತದಿಂದ ಗಾಯಗೊಂಡವರ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ. ಗಾಯಗೊಂಡವರನ್ನು ಮಿಂಟೊ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೀಪಾವಳಿ ಹಬ್ಬದ ಆಚರನಣೆ ವೇಳೆ ಪಟಾಕಿ ಸಿಡಿತದಿಂದ ಉಂಟಾಗುವ ಕಣ್ಣಿನ ಹಾನಿ ಘಟನೆಗಳಲ್ಲಿ ತುರ್ತು ಚಿಕಿತ್ಸೆ ನೀಡಲು ಮಿಂಟೋ ಆಸ್ಪತ್ರೆ ಸಕಲ ಸಿದ್ದತೆ ನಡೆಸಿದೆ.
ಮಿಂಟೋ ಆಸ್ಪತ್ರೆಯಲ್ಲಿ 24/7 ತುರ್ತು ಚಿಕಿತ್ಸೆ ಲಭ್ಯವಿರಲಿದ್ದು, ಇದಕ್ಕಾಗಿ ಎರಡು ಸಹಾಯವಾಣಿಗಳನ್ನು ತೆರೆಯಲಾಗಿದೆ. ದೂರವಾಣಿ ಸಂಖ್ಯೆ 9481740137, 9480832430 ನಂಬರ್ ನ್ನು ಸಂಪರ್ಕಿಸಬಹುದಾಗಿದೆ.
ನಿನ್ನೆ ಒಂದೇ ದಿನ ಪಟಾಕಿ ಸಿಡಿತದಿಂದ 7 ಮಂದಿ ಗಾಯಗೊಂಡಿದ್ದು, ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಮರಾಜಪೇಟೆಯಲ್ಲಿ ಇಬ್ಬರಿಗೆ ಗಾಯ, ಮೈಸೂರು ರಸ್ತೆಯಲ್ಲಿ ಪಟಾಕಿಯಿಂದ ಇಬ್ಬರು ಗಾಯಗೊಂಡಿದ್ದಾರೆ.ಸರ್ಜಾಪುರ, ಅವೆನ್ಯು ರಸ್ತೆಯಲ್ಲಿ ತಲಾ ಒಬ್ಬರು ಗಾಯಗೊಂಡಿದ್ದರೆ. ಅನ್ನಪೂರ್ಣೇಶ್ವರಿ ನಗರದಲ್ಲಿ ಪಟಾಕಿ ಸಿಡಿತದಿಂದ ಮಹಿಳೆ ಗಾಯಗೊಂಡಿದ್ದಾರೆ.
ಪಟಾಕಿ ಸುಟ್ಟ ಗಾಯಕ್ಕೆ ಮನೆ ಮದ್ದು
ಬೆಳಕಿನ ಹಬ್ಬ ದೀಪಾವಳಿ ಬಂದಿದ್ದು, ರಾಜ್ಯದಲ್ಲಿ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ದೇಶದ ಹಲವು ಕಡೆ ಪಟಾಕಿ ಬ್ಯಾನ್ ಮಾಡಲಾಗಿದೆ. ಆದರೂ ಜನರು ಕದ್ದು ಮುಚ್ಚಿ ಪಟಾಕಿ ಹೊಡೆಯೋದು ಮಾತ್ರ ತಪ್ಪಿಲ್ಲ. ಪಟಾಕಿ ಸಿಡಿಸಲು ಹೋಗಿ ಏನಾದರೂ ಅಪಾಯ ತಂದುಕೊಳ್ಳುತ್ತಲೇ ಇರುತ್ತಾರೆ. ಆದ್ದರಿಂದ ಪಟಾಕಿ ಸಿಡಿಸುವುದಕ್ಕಿಂತ ಮುಂಚೆ ಪಟಾಕಿ ಸುಡುವಿಕೆಯಿಂದ ಉಂಟಾದ ಸುಟ್ಟಗಾಯಕ್ಕೆ ಹೇಗೆ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಗೊತ್ತಿದ್ದರೆ ಒಳ್ಳೆಯದು.
1) ಪಟಾಕಿಯಿಂದ ಸುಟ್ಟ ಗಾಯ ಉಂಟಾದರೆ ಆ ಭಾಗವನ್ನು ತಣ್ಣೀರಿಗೆ ಹಿಡಿಯಿರಿ. ಅಥವಾ ಆ ಪ್ರದೇಶಕ್ಕೆ ಕೋಲ್ಡ್ ಕಂಪ್ರೆಸ್ ಅನ್ನು ಆರಿಸಿಕೊಳ್ಳಿ. ಸುಟ್ಟ ಗಾಯವನ್ನು ತಂಪಾಗಿಸುವುದರಿಂದ ನೋವು, ಊತ ಕಡಿಮೆ ಮಾಡುತ್ತದೆ
2) ತೆಂಗಿನ ಎಣ್ಣೆಯು ಕೂಡ ಪಟಾಕಿ ಸುಟ್ಟ ಗಾಯಕ್ಕೆ ಉಪಶಮನಕಾರಿಯಾಗಿದೆ. ತೆಂಗಿನ ಎಣ್ಣೆಯು ವಿಟಮಿನ್ ಇ ಅನ್ನು ಹೊಂದಿರುತ್ತದೆ, ಇದು ಚರ್ಮದ ಮೇಲೆ ಸುಟ್ಟ ನಂತರದ ಗುರುತುಗಳನ್ನು ನಿಭಾಯಿಸಲು ಅತ್ಯುತ್ತಮವಾಗಿದೆ.
3) ಅಲೋವೆರಾ ಕೂಡ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಉತ್ತಮವಾಗಿದೆ. ಅಲೋವೆರಾದ ಆಂಟಿ-ಬ್ಯಾಕ್ಟೀರಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳು ಸುಟ್ಟಗಾಯಗಳ ಸುತ್ತ ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ
4) ಸುಟ್ಟ ಗಾಯಗಳಿಗೆ ಜೇನುತುಪ್ಪವನ್ನು ಕೂಡ ಬಳಸಬಹುದಾಗಿದೆ. ಇದು ಮೊದಲ ಹಂತದ ಸುಟ್ಟಗಾಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
BIG NEWS: ಮುಂದಿನ ವರ್ಷದಿಂದ ವಿಂಡೋಸ್ 7, 8.1 ಗಳಿಗೆ ʻChrome browserʼ ಸಪೋರ್ಟ್ ನಿಲ್ಲಸಲಿದೆ: ʻGoogleʼ ಘೋಷಣೆ