ಬೆಂಗಳೂರು : ವಾಹನ ಸವಾರರ ಗಮನಕ್ಕೆ…ಬೆಂಗಳೂರಿನಿಂದ ಇತರ ಪ್ರದೇಶಗಳಲ್ಲಿ ತೆರಳಲು ಮುಖ್ಯ ಮಾರ್ಗವಾಗಿರುವ ಹೆಬ್ಬಾಳ ರಸ್ತೆ ಜಂಕ್ಷನ್ ನಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಹಿನ್ನೆಲೆ ಬೆಂಗಳೂರು ಟ್ರಾಫಿಕ್ ಪೊಲೀಸರು ಮಹತ್ವದ ನಿಯಮ ಜಾರಿಗೆ ತಂದಿದ್ದಾರೆ.
ವಿಮಾನ ನಿಲ್ದಾಣ ಹಾಗೂ ನಗರದ ನಡುವಿನ ಪ್ರಯಾಣವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಸಾದಹಳ್ಳಿ ಜಂಕ್ಷನ್ ನಿಂದ ಹೆಬ್ಬಾಳ್ ಫ್ಲೈ ಓವರ್ ವರೆಗೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಈ ಕುರಿತು ಬೆಂಗಳೂರು ಟ್ರಾಫಿಲ್ ಪೊಲೀಸ್ ಆಯುಕ್ತ ಡಾ.ಎಂ.ಎ ಸಲೀಂ ಸುತ್ತೋಲೆ ಹೊರಡಿಸಿದ್ದು, ಪ್ರತಿದಿನ ಬೆಳಗ್ಗೆ 8.30 ರಿಂದ ಬೆಳಗ್ಗೆ 10.30ರ ವರೆಗೆ (ಎರಡು ಗಂಟೆ) ಭಾರೀ (ಸರಕು ಸಾರಿಗೆ) ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ನಿಯಮ 18/11/2022ರಿಂದ ಒಂದು ತಿಂಗಳ ವರೆಗೆ ಜಾರಿಯಲ್ಲಿರುತ್ತದೆ ಎಂದು ಆದೇಶ ಹೊರಡಿಸಿದ್ದಾರೆ.
"All types of goods vehicles are prohibited between 8.30 am to 10.30 am towards Hebbal from 18.11.2022 @blrcitytraffic @BlrCityPolice pic.twitter.com/trNOkx0CQB
— HEBBALA TRAFFIC PS (@hebbaltrafficps) November 18, 2022
BIGG NEWS: ಗೃಹ ಸಚಿವರ ಮನೆಯ ಸುತ್ತಮುತ್ತಲೇ ಉಗ್ರರು ಅಡಗಿದ್ದಾರೆ: ಮುತಾಲಿಕ್