ಬೆಂಗಳೂರು : ತಾಯಿಯ ಬಳಿಯಿದ್ದ ಚಿನ್ನಾಭರಣ ಮತ್ತು 2 ಲಕ್ಷಕ್ಕೂ ಅಧಿಕ ಹಣವನ್ನು ತಂದು, ಸ್ವಂತ ಬ್ಯೂಟಿಷಿಯನ್ ಆರಂಭಿಸಲು ಬೆಂಗಳೂರಿಗೆ ಬಂದಂತಹ ಮಹಿಳೆಯ ಬಳಿಯಿದ್ದ ಹಣ ಚಿನ್ನಾಭರಣ ದರೋಡೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ, ನೆಲಮಂಗಲ ಗ್ರಾಮಾಂತರ ಠಾಣೆಯ ಕಾನ್ಸ್ಟೇಬಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹೌದು ಹಣ ಮತ್ತು ಚಿನ್ನಾಭರಣ ದರೋಡೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನೆಲಮಂಗಲ ಗ್ರಾಮಂತರ ಠಾಣೆ ಎಚ್ ಸಿ ಗಿರಿಜೇಶ್ ವಿರುದ್ಧ ಈ ಒಂದು ಆರೋಪ ಕೇಳಿ ಬಂದಿದೆ. ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಗೆ ಸಿಂಚನ ಎನ್ನುವವರು ನೀಡಿದ್ದಾರೆ. ಬೆಂಗಳೂರಿನಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡಿಕೊಂಡಿರುವ ಸಿಂಚನ ಮೂಲತಹ ಶಿವಮೊಗ್ಗ ನಿವಾಸಿಯಾಗಿದ್ದಾರೆ. ಸ್ವಂತ ಬ್ಯೂಟಿ ಪಾರ್ಲರ್ ಶಾಪ್ ಆರಂಭಿಸಲು ಸಿಂಚನ ನಿರ್ಧರಿಸಿದ್ದರು.
ಶಿವಮೊಗ್ಗದಲ್ಲಿ ತಾಯಿಯ ಬಳಿ ಚುನಾವಣೆ ಹಾಗೂ 2,50,000 ಪಡೆದು ಬೆಂಗಳೂರಿಗೆ ಬಂದಿದ್ದರು. 8ನೇ ಮೈಲಿಬಳಿ ಬಸ್ ಇಳಿದು ಹೋಗುತ್ತಿದ್ದ ವೇಳೆ, ಜಿಎಪ್ ನಲ್ಲಿ ಬಂದಿದ್ದೆ ಹೆಡ್ ಕಾನ್ಸ್ಟೇಬಲ್ ಗಿರಿಜೇಶ್ ಡ್ರಾಪ್ ನೀಡುವುದಾಗಿ ಮಹಿಳೆಯನ್ನು ಹತ್ತಿಸಿಕೊಂಡಿದ್ದಾನೆ. ಈ ವೇಳೆ ಮಹಿಳೆ ಬಳಿ ಇದ್ದ ಹಣ ಮತ್ತು ಚಿನ್ನಾಭರಣ ದರೋಡೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಭಂದ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.