ಬೆಂಗಳೂರು: ಬೆಂಗಳೂರು ಬನಶಂಕರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ನಿಷೇಧಿತ ಐದು ನೂರು ರೂಪಾಯಿ ಮುಖಬೆಲೆಯ ಹಳೇ ನೋಟುಗಳ ಚಲಾವಣೆಗೆ ಬಂದಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಯೋಗಾನಂದ, ವೆಂಕಟರಮಣ ಹಾಗೂ ಹರಿಪ್ರಸಾದ್ ಬಂಧಿತರು.ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಬೆಂಗಳೂರಿಗೆ ಬಂದಿದ್ದ ಆರೋಪಿಗಳು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬನಶಂಕರಿ ಠಾಣೆ ಪೊಲೀಸರು, ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದು 500 ಮುಖ ಬೆಲೆಯ 88 ಲಕ್ಷ ಹಳೇ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ ಕೃಷ್ಣಕಾಂತ್ ತಿಳಿಸಿದ್ದಾರೆ.