ಬೆಂಗಳೂರು: ರಾಜ್ಯದ ಸಬ್ ರಿಜಿಸ್ಟಾರ್ ಕಚೇರಿ ಒಳಗೆ ಸಾರ್ವಜನಿಕರ ಲ್ಯಾಪ್ ಟಾಪ್, ಟ್ಯಾಬ್ಲೆಟ್ ಗಳ ಬಳಕೆಯನ್ನು ನಿಷೇಧ ಮಾಡಿ, ರಾಜ್ಯ ಸರ್ಕಾರ ಆದೇಶಿಸಿದೆ.
ಈ ಸಂಬಂಧ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಅದರಲ್ಲಿ ಕಾವೇರಿ 2.0 ತಂತ್ರಾಂಶಕ್ಕೆ ಆಪ್ ಡೇಟ್ ಆದಮೇಲೆ ಆನ್ ಲೈನ್ ನಲ್ಲಿಯೇ ನೋಂದಣಿ ಇಲಾಖೆ ಸೇವೆಗಳು ಸಿಗುತ್ತಿವೆ. ಸಾರ್ವಜನಿಕರು ಕುಳಿತಲ್ಲೇ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಸಾಕಷ್ಟು ಸೇವೆ ಪಡೆಯಬಹುದು ಎಂದಿದೆ.
ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಾರದೇ ಕಾವೇರಿ 2.0ರಲ್ಲಿ ದಾಸ್ತಾವೇಜು ಅಪ್ ಲೋಡ್ ಮಾಡಿ, ನಂತ್ರ ಕಚೇರಿಗೆ ಬಂದು ನೋಂದಣಿ ಪ್ರಕ್ರಿಯೆ ಮುಗಿಸಬಹುದು ಎಂದು ಹೇಳಿದೆ.
ಕೆಲವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದು, ಅಲ್ಲಿಯೇ ಲ್ಯಾಪ್ ಟಾಪ್ ಮತ್ತು ಟ್ಯಾಬ್ ಗಳಲ್ಲಿ ದಾಸ್ತಾವೇಜು ಅಪ್ ಲೋಡ್ ಮಾಡಿ, ಅಂದೇ ನೋಂದಣಿಗೆ ಪ್ರಯತ್ನಿಸುತ್ತಿರೋದು ಕಂಡು ಬಂದಿದೆ ಎಂದು ಹೇಳಿದೆ.
ಇದಲ್ಲದೇ ಇಸಿ, ಸಿಸಿ ಪಡೆಯೋದಕ್ಕೆ ಅಲ್ಲಿಯೇ ಲ್ಯಾಪ್ ಟಾಪ್, ಟ್ಯಾಗ್ ಗಳ ಮೂಲಕ ಅರ್ಜಿ ಸಲ್ಲಿಸಲಾಗುತ್ತಿದೆ. ಇದರಿಂದ ಕಚೇರಿಗಳಲ್ಲಿ ಜನಜಂಗುಳಿ ಉಂಟಾಗುತ್ತಿದೆ ಎಂದು ತಿಳಿಸಿದೆ.
ಇನ್ನೂ ಸಾರ್ವಜನಿಕರು ಇಸಿ, ಸಿಸಿ ಪತ್ರ ಪಡೆಯಲು ನೇರವಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದಾಗ ಕೆಲವರು ಲ್ಯಾಪ್ ಟಾಪ್ ನಲ್ಲಿ ಅರ್ಜಿ ಸಲ್ಲಿಸಿ ಅಲ್ಲಿಯೇ ಕೊಡಿಸೋ ಪ್ರಕರಣಗಳು ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸಾರ್ವಜನಿಕರ ಲ್ಯಾಪ್ ಟಾಪ್, ಟ್ಯಾಬ್ ಬಳಕೆಯನ್ನು ನಿಷೇಧಿಸಲಾಗುತ್ತಿದೆ. ಜನರು ಸಹಕರಿಸುವಂತೆ ಮನವಿ ಮಾಡಿದೆ.
‘SSLC, ದ್ವಿತೀಯ PUC ವಿದ್ಯಾರ್ಥಿ’ಗಳಿಗೆ ಮಹತ್ವದ ಮಾಹಿತಿ: ಈ 20 ಅಂಶಗಳ ಕಾರ್ಯಕ್ರಮ ರೂಪಿಸಿದ ‘ಪರೀಕ್ಷಾ ಮಂಡಳಿ’
‘ಅಂಗನವಾಡಿ ಕಾರ್ಯಕರ್ತೆ’ಯರಿಗೆ ಗುಡ್ ನ್ಯೂಸ್: ಜೀವ ವಿಮೆ, 2 ಲಕ್ಷದವರೆಗೂ ‘ಅಪಘಾತ ವಿಮೆ’ ಜಾರಿ