ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಪ್ರವಾಸಿ ತಾಣ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶ ವ್ಯಾಪ್ತಿಗೆ ಪ್ರವಾಹ ಕಡಿಮೆಯಾಗುವವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ತಾಲ್ಲೂಕು ಆಡಳಿತ ಆದೇಶಿಸಿದೆ.
ಈ ಕುರಿತಂತೆ ಮಂಡ್ಯ ಜಿಲ್ಲೆಯ ಮಳವಳ್ಳಿಯ ತಾಲ್ಲೂಕು ದಂಡಾಧಿಕಾರಿ ಕೆಎನ್ ಲೋಕೇಶ್ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಮಂಡ್ಯ ಜಿಲ್ಲೆ,ಮಳವಳ್ಳಿ ತಾಲ್ಲೂಕು ಹಲಗೂರು ಹೋಬಳಿ ಯಲ್ಲಿರುವ ಮುತ್ತತ್ತಿ ಗ್ರಾಮವು ಪುಸಿದ್ಧ ಯಾತ್ರಾ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದ್ದು, ಗ್ರಾಮದ ಪಕ್ಕದಲ್ಲಿ ಕಾವೇರಿ ನದಿ ಹರಿಯುತ್ತಿದ್ದು,ದೇವಸ್ಥಾನಕ್ಕೆ ಬರುವ ಪುವಾಸಿಗರು ನದಿಯೊಳಗೆ ಇಳಿದು ಈಜಾಡುವುದು, ಮೋಜು, ಮಸ್ತಿ ಮಾಡುವುದು ಮಾಡುತ್ತಿರುತ್ತಾರೆ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನೈಸರ್ಗಿಕವಾಗಿ ಹೆಚ್ಚು ಮಳೆಯಾಗಿರುವುದರಿಂದ ನದಿಯಲ್ಲಿ ಕಾವೇರಿ ನೀರಿನ ಪ್ರವಾಹ ಹೆಚ್ಚಾಗಿರುತ್ತದೆ. ಅದಲ್ಲದ ಕಾವೇರಿ ಜಲಾಶಯದಿಂದ ಹೆಚ್ಚುವರಿಯಾಗಿ 115000 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಿದ್ದು, ಮುತ್ತತ್ತಿಯಲ್ಲಿ ಕಾವೇರಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಈ ಸಮಯದಲ್ಲಿ ಸಾರ್ವಜನಿಕರು ನದಿಯೊಳಗೆ ಇಳಿಯುವುದರಿಂದ ನದಿ ನೀರಿನ ಪ್ರವಾಹಕ್ಕೆ ಸಿಲುಕಿ ಅಪಘಾತ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದ್ದಾರೆ.
ಆದ್ದರಿಂದ ಮುಂಜಾಗೃತ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮುತ್ತತ್ತಿ ಪುವಾಸಿ ತಾಣ ಭೀಮೇಶ್ವರಿ ಹಾಗೂ ಸುತ್ತ-ಮುತ್ತಲಿನ ಅರಣ್ಯ ಪ್ರದೇಶ ವ್ಯಾಪ್ತಿಗೆ ಪುವಾಹ ಕಡಿಮೆಯಾಗುವವರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲು ನಿಷೇದಾಜ್ಞೆ ಜಾರಿಗೊಳಿಸಬೇಕೆಂದು ಉಲ್ಲೇಖ (1) ಮತ್ತು (2) ರ ಪತ್ರಗಳಲ್ಲಿ ಆರಕ್ಷಕ ಉಪ ನಿರೀಕ್ಷಕರು,ಹಲಗೂರು ಪೊಲೀಸ್ ಠಾಣೆ, ಹಲಗೂರು ಹಾಗೂ ವಲಯ ಅರಣ್ಯಾಧಿಕಾರಿ, ವನ್ಯ ಜೀವಿ ವಲಯ ಹಲಗೂರು ರವರು ಕೋರಿರುತ್ತಾರೆ ಎಂದಿದ್ದಾರೆ.
ಸದರಿ ಕೋರಿಕೆಗಳನ್ನು ಪರಿಗಣಿಸಿ ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಮುತ್ತತ್ತಿ ಗ್ರಾಮ, ಭೀಮೇಶ್ವರಿ ಹಾಗೂ ಸುತ್ತ-ಮತ್ತಲಿನ ಅರಣ್ಯ ಪ್ರದೇಶಕ್ಕೆ ಸಾರ್ವಜನಿಕರ ಪುವೇಶವನ್ನು ಸಂಪೂರ್ಣವಾಗಿ ನಿರ್ಭಂಧಿಸಿ ನಿಷೇದಾಜ್ಞೆ ಜಾರಿಗೊಳಿಸುವುದು ನನಗೆ ಮನವರಿಕೆ ಆಗಿರುವುದರಿಂದ ಈ ಕೆಳಕಂಡಂತೆ ಆದೇಶ ಹೊರಡಿಸಿರುತ್ತೇನೆ ಎಂದು ತಿಳಿಸಿದ್ದಾರೆ.
ಕೆ.ಎನ್ ಲೋಕೇಶ್ ಕೆ.ಎ.ಎಸ್. ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿ ಮಳವಳ್ಳಿ ಆದ ನಾನು ಮೇಲ್ಕಾಣಿಸಿದಂತೆ ಪರಿಸ್ಥಿಯನ್ನು ಎಲ್ಲಾ ರೀತಿಯಿಂದ ಅವಲೋಕನ ಮಾಡಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಕಲಂ 163 ರನ್ವಯ ಪುದತ್ತವಾದ ಅಧಿಕಾರದ ಮೇರಗೆ ಮಳವಳ್ಳಿ ತಾಲ್ಲೂಕು ಹಲಗೂರು ಹೋಬಳಿ ಮತ್ತತ್ತಿ ಗ್ರಾಮ ಭೀಮೇಶ್ವರಿ ಹಾಗೂ ಸುತ್ತ ಮುತ್ತಲಿನ ಅರಣ್ಯ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ, ಕಾನೂನು ಪಾಲನೆ ಹಾಗೂ ಸಾರ್ವಜನಿಕರ ಸುರಕ್ಷತೆ, ಜಾನುವಾರಗಳ ರಕ್ಷಣೆ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ಸಂರಕ್ಷಣೆ ಹಿತದೃಷ್ಟಿಯಿಂದ ದಿನಾಂಕ: 26.07.2024ರ ಸಂಜೆ 06.00 ಗಂಟೆಯಿಂದ ಮುಂದಿನ ಆದೇಶದವರೆವಿಗೂ ಸಾರ್ವಜನಿಕರ ಪವೇಶವನ್ನು ಸಂಪೂರ್ಣವಾಗಿ ನಿಷೇಧಿಸಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ
KRS, ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಜು.29ರಂದು ಸಿಎಂ, ಡಿಸಿಎಂ ಬಾಗಿನ ಅರ್ಪಣೆ | KRS Dam
ಉತ್ತರ ಕ್ಯಾಲಿಫೋರ್ನಿಯಾದಲ್ಲಿ 1,78,000 ಎಕರೆ ಪ್ರದೇಶಕ್ಕೆ ಬೆಂಕಿ:134 ಕಟ್ಟಡಗಳು ನಾಶ