ಬೆಂಗಳೂರು: ಏಪ್ರಿಲ್ 6ರ ಇಂದು ಶ್ರೀರಾಮ ನವಮಿ ಹಬ್ಬ”ದ ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶಿಸಿದೆ. ಈ ಮೂಲಕ ವಾರಾಂತ್ಯದ ಭಾನುವಾರದ ಇಂದು ಬೆಂಗಳೂರಲ್ಲಿ ನಾನ್ ವೆಜ್ ಸಿಗೋದಿಲ್ಲ.
ದಿನಾಂಕ: 06-04-2025 ಭಾನುವಾರದಂದು “ಶ್ರೀರಾಮ ನವಮಿ ಹಬ್ಬ”ದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರು ರವರು ತಿಳಿಸಿದ್ದಾರೆ.
ಹೀಗಾಗಿ ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾನುವಾರದ ಇಂದು ವೀಕೆಂಡ್ ನಲ್ಲಿ ನಾನ್ ವೆಜ್ ಪ್ರಿಯರಿಗೆ ಮಟನ್, ಚಿಕನ್ ಸಿಗೋದಿಲ್ಲ. ನಾಳೆಯಿಂದ ಬೆಂಗಳೂರಲ್ಲಿ ಮಾಂಸ ಮಾರಾಟ ಪುನರಾರಂಭವಾಗಲಿದೆ.