ನವದೆಹಲಿ: ಜಮ್ಮು & ಕಾಶ್ಮೀರ ಮತ್ತು ರಾಜಸ್ಥಾನದ ಗಡಿ ಪ್ರದೇಶಗಳಲ್ಲಿ ‘ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್’ ಅನ್ನು ಮುದ್ರಿಸಿದ ಬಲೂನ್ಗಳು ಪತ್ತೆಯಾಗಿದ್ದು, ಅವುಗಳನ್ನು ಮಂಗಳವಾರ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ನಡ್ನ ಸಾಂಬಾ ಪ್ರದೇಶದಲ್ಲಿ BHN ಮತ್ತು ಎಮಿರೇಟ್ಸ್ ಎಂದು ಮುದ್ರಿತವಾಗಿರುವ ಹಸಿರು ಮತ್ತು ಬಿಳಿ ಬಣ್ಣದಲ್ಲಿ ವಿಮಾನದ ಆಕಾರದಲ್ಲಿ ಬಲೂನ್ ಪತ್ತೆಯಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
A balloon in the shape of an aeroplane in green and white colour with BHN and emirates written on it has been recovered in the Nadd area of Samba. Further investigations underway: Jammu and Kashmir Police
— ANI (@ANI) November 1, 2022
ಸಾಂಬಾದಲ್ಲಿ ಪತ್ತೆಯಾದಂತೆಯೇ, ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ನ ಹೆಸರನ್ನು ಮುದ್ರಿಸಿರುವ ವಿಮಾನದ ಆಕಾರದ ಬಲೂನ್ ಮಂಗಳವಾರ ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಬಿಳಿ ಮತ್ತು ಹಸಿರು ಬಣ್ಣದ ಬಲೂನ್ ದಂಟೌರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಅದರಲ್ಲಿ ಪಾಕಿಸ್ತಾನ್ ಇಂಟರ್ನ್ಯಾಶನಲ್ ಏರ್ಲೈನ್ಸ್ ಎಂದು ಮುದ್ರಿಸಲಾಗಿದೆ ಎಂದು ಖಜುವಾಲಾ ವೃತ್ತದ ಅಧಿಕಾರಿ ವಿನೋದ್ ಕುಮಾರ್ ಹೇಳಿದ್ದಾರೆ.
ಪತ್ತೆಯಾದ ಎರಡೂ ಬಲೂನ್ಗಳು ಹಸಿರು ಬಣ್ಣದಲ್ಲಿದ್ದು, ಏರೋಪ್ಲೇನ್ನ ಆಕಾರದಲ್ಲಿವೆ ಮತ್ತು ಅವುಗಳ ಮೇಲೆ “ಪಾಕಿಸ್ತಾನ್ ಇಂಟರ್ನ್ಯಾಶನಲ್ ಏರ್ಲೈನ್ಸ್” ಎಂಬ ಹೆಸರನ್ನು ಮುದ್ರಿಸಲಾಗಿದೆ.
ಈ ವರ್ಷ ಇಲ್ಲಿಯವರೆಗೆ, ಗಡಿ ಭದ್ರತಾ ಪಡೆ (ಬಿಎಸ್ಎಫ್) ಪಂಜಾಬ್ನಲ್ಲಿ ಪಾಕಿಸ್ತಾನದೊಂದಿಗಿನ ಅಂತರರಾಷ್ಟ್ರೀಯ ಗಡಿಯಲ್ಲಿ 186 ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಪತ್ತೆ ಮಾಡಿದೆ.
ಚಲಿಸುವ ರೈಲಿನಿಂದ ಬಿದ್ದ ಮಹಿಳೆ, ಮಗುವಿನ ಪ್ರಾಣ ರಕ್ಷಿಸಿದ RPF ಸಿಬ್ಬಂದಿ… ಇಲ್ಲಿದೆ ಮೈ ನಡುಕ ಹುಟ್ಟಿಸುವ ವಿಡಿಯೋ
ಚಲಿಸುವ ರೈಲಿನಿಂದ ಬಿದ್ದ ಮಹಿಳೆ, ಮಗುವಿನ ಪ್ರಾಣ ರಕ್ಷಿಸಿದ RPF ಸಿಬ್ಬಂದಿ… ಇಲ್ಲಿದೆ ಮೈ ನಡುಕ ಹುಟ್ಟಿಸುವ ವಿಡಿಯೋ