ಬಳ್ಳಾರಿ : ಚಾಕಲೇಟ್ ಮಿಶ್ರಿತ ಗಾಂಜಾ ವನ್ನು ಮಾರಾಟ ಮಾಡುತ್ತಿದ್ದ ಪುಟ್ಟ ಗೂಡಂಗಡಿಯ ಮೇಲೆ ಅಬಕಾರಿ ಸಿಬ್ಬಂದಿಗಳು ದಾಳಿ ನಡೆಸಿದ್ದು, ಈ ವೇಳೆ 2600 ರೂಪಾಯಿ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿಯನ್ನು ಬಂಧಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಸಿಂಧನೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಹೌದು ಬಿಹಾರ್ ಮೂಲದ ಆರೋಪಿ ಕಪಾಲ್ ಪಾಸ್ವಾನಿ (38) ಎನ್ನುವ ಆರೋಪಿಯನ್ನು ಬಂಧಿಸಲಾಗಿದೆ. ಗೂಡಂಗಡಿಯಲ್ಲಿ ಆರೋಪಿ ಕಪಾಲ್ ಗಾಂಜಾ ಮಿಶ್ರಿತ ಚಾಕೋಲೇಟನ್ನು ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿಯನ್ನು ಪಡೆದ ಅಬಕಾರಿ ಸಿಬ್ಬಂದಿಗಳು ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ 2600 ಮೌಲ್ಯದ ಗಾಂಜಾ ಮಿಶ್ರಿತ ಚಾಕಲೇಟನ್ನು ಅಬಕಾರಿ ಸಿಬ್ಬಂದಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಘಟನೆ ಕುರಿತಂತೆ ಸಿರುಗುಪ್ಪ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.