ಬಳ್ಳಾರಿ : ಮುಸ್ಲಿಂ ಯುವಕರಿಂದ ಹಿಂದೂ ಯುವತಿಯರನ್ನು ರಕ್ಷಣೆ ಮಾಡಲು ಇಂದು ಶ್ರೀರಾಮ ಸೇನೆ ಸಹಾಯವಾಣಿಯನ್ನು ಇಂದು ಆರಂಭಿಸಿದೆ. ಇದರ ಬೆನ್ನಲ್ಲೇ ಇದೀಗ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣ ವ್ಯಾಪ್ತಿಯಲ್ಲಿ ಪರಸ್ಪರ ಪ್ರೀತಿಸಿ ಹಿಂದೂ ಯುವಕನ ಜೊತೆ ಮುಸ್ಲಿಂ ಯುವತಿ ಓಡಿಹೋದ ಘಟನೆ ಬೆಳಕಿಗೆ ಬಂದಿದೆ.
ಹೌದು ಅಪ್ರಾಪ್ತ ಹಿಂದೂ ಯುವಕ, ಮುಸ್ಲಿಂ ಯುವತಿ ಪ್ರೀತಿಸಿ ಓಡಿಹೋದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ. ಇಬ್ಬರು ಅಪ್ರಾಪ್ತರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇಬ್ಬರ ಪ್ರೀತಿ ವಿಷಯ ಇಬ್ಬರು ಮನೆಯಲ್ಲಿ ಗೊತ್ತಾಗುತ್ತಿದಂತೆ 16 ವರ್ಷದ ಮುಸ್ಲಿಂ ಯುವತಿ ಮತ್ತು 20 ವರ್ಷದ ಹಿಂದೂ ಯುವಕ ಹದಿನೈದು ದಿನಗಳ ಹಿಂದೆಯೇ ಮನೆಯಿಂದ ಎಸ್ಕೇಪ್ ಆಗಿದ್ದಾರೆ.
ಹಿಂದೂ ಯುವಕ ಪರಮೇಶ ಹಾಗೂ ಮುಸ್ಲಿಂ ಯುವತಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿ ವಿಚಾರ ಮನೆಯಲ್ಲಿ ಗೊತ್ತಾಗುತ್ತಿದಂತೆ ನಾಪತ್ತೆ ಆಗಿದ್ದಾರೆ. ಈ ಕುರಿತು ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಯುವಕ ಪರಮೇಶ ವಿರುದ್ಧ ಯುವತಿ ಕಡೆಯವರು ಪ್ರಕರಣ ದಾಖಲಿಸಿದ್ದು, ಯುವತಿಯನ್ನ ಹುಡುಕಿಕೊಡುವಂತೆ ಪೋಷಕರ ಒತ್ತಾಯ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.