ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲಿ ಎಗ್ಗಿಲ್ಲದೆ ಒಸಿ ಮಟ್ಕಾ ದಂಧೆ ನಡೆಯುತ್ತಿದೆ. ಯಾವುದೇ ಪೊಲೀಸರ ಭಯ ಇಲ್ಲದೆ ಮಟ್ಕಾ ದಂಧೆ ನಡೆಸುತ್ತಿದ್ದಾರೆ. ಕಂಪ್ಲಿ ಪಟ್ಟಣ ಒಂದರಲ್ಲಿಯೇ ಐದು ಮಟ್ಕಾ ಪಾಯಿಂಟ್ ಗಳಲ್ಲಿ ಈ ಒಂದು ದಂಧೆ ನಡೆಸಲಾಗುತ್ತಿದೆ. ಅಷ್ಟೆ ಅಲ್ಲದೇ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿಯೇ ಮಟ್ಕಾ ದಂಧೆ ನಡೆಯುತ್ತಿದ್ದು, ಪೊಲೀಸರು ಇದಕ್ಕೆ ಸಾತ್ ನೀಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಇದನ್ನು ಬಯಲು ಮಾಡಲು ಸ್ಥಳೀಯ ನಿವಾಸಿ ನಾರಾಯಣ ಸ್ವಾಮಿ ತೆರಳಿದ್ದಾರೆ. ಈ ವೇಳೆ ಮೊಬೈಲ್ ನಲ್ಲಿ ದಂಧೆಯ ಚಿತ್ರೀಕರಣ ಮಾಡಿದ್ದಾರೆ. ಈ ವೇಳೆ ಮಟ್ಕಾ ದಂದೆಕೋರರು ನಾರಾಯಣಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಕಂಪ್ಲಿ ಸರ್ಕಾರಿ ಆಸ್ಪತ್ರೆಗೆ ಹಲ್ಲೆಗೆ ಒಳಗಾದಂತಹ ನಾರಾಯಣ ಸ್ವಾಮಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಟ್ಕಾ ದಂಧೆಯ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪ ಕೇಳಿ ಬಂದಿದೆ. ಮಟ್ಕಾ ದಂದೆ ಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.