ಬಾಗಲಕೋಟೆ : ಕರ್ತವಲೋಪ ಆರೋಪದ ಅಡಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಠಾಣೆಯ ಸಿಪಿಐ ಎಚ್ಆರ್ ಪಾಟೀಲ್ ರನ್ನು ಸಸ್ಪೆಟ್ ಮಾಡಲಾಗಿದೆ.
ಬೆಳಗಾವಿ ಉತ್ತರ ವಲಯ ಐಜಿಪಿ ಡಾ.ಚೇತನ ಸಿಂಗ್ ರಾಥೋಡ್ ಆದೇಶ ಹೊರಡಿಸಿದ್ದು ಯಾವುದೇ ಕಾರಣ ಉಲ್ಲೇಖಿಸದೆ ಬನಹಟ್ಟಿ ಠಾಣೆ ಸಿಪಿಐ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಬಳಿಕ ಕರ್ತವಲೋಪ ಆರೋಪದ ಅಡಿ ಅಮಾನತುಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬನಹಟ್ಟಿ ವೃತ್ತದ ಸಿಪಿಐ ಪ್ರಭಾರ ಹುದ್ದೆಯನ್ನ ಮುಧೋಳ ಸಿಪಿಐಗೆ ವಹಿಸಿ ಆದೇಶಿಸಿದ್ದಾರೆ.








