ಬಾಗಲಕೋಟೆ : ಮಗಳ ಮೇಲೆ ಕಣ್ಣು ಹಾಕಬೇಡ ಎಂದಿದ್ದಕ್ಕೆ ಯುವತಿಯ ತಂದೆಯನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೇ ಬಾಗಲಕೋಟೆಯಲ್ಲಿ ನಡೆದಿದೆ.ಪ್ರವೀಣ್ ಎಂಬ ಪ್ರೇಮಿ ಸಂಗನಗೌಡನನ್ನು ಕೊಲೆಗೈದಿದ್ದಾನೆ.
BREAKING: ರಾಜ್ಯ ಸರ್ಕಾರದಿಂದ ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಿ ಆದೇಶ
ಅವನೊಬ್ಬ ಪಾಗಲ್ ಪ್ರೇಮಿ ಊರಿನ ಬಸ್ ನಿಲ್ದಾಣದಲ್ಲಿ ಬಳಿ ಟೀ ಅಂಗಡಿ ಇಟ್ಟುಕೊಂಡಿದ್ದ ಅದೇ ಬಸ್ ಸ್ಟಾಪ್ಗೆ ಬಸ್ ಹತ್ತಲು ಬರ್ತಿದ್ದ ಸಂಗನಗೌಡ ಮಗಳನ್ನ ಪ್ರೀತಿಸೋದಕ್ಕೆ ಶುರು ಮಾಡಿದ್ದ. ಆದರೆ ಆಕೆ ಮಾತ್ರ ಇವನ ಪ್ರೀತಿಗೆ ಯಾವತ್ತೂ ಸಹ ಓಕೆ ಅನ್ನಲಿಲ್ಲ. ಆದ್ರೂ ಅವಳ ಬೆನ್ನು ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ.
ಮುಂಜಾನೆ ಎದ್ದ ತಕ್ಷಣ ಈ ಚಿಕ್ಕ ಮಂತ್ರವನ್ನು ಹೇಳಿದರೆ ಎಲ್ಲ ದಿಕ್ಕುಗಳಿಂದ ಧನಸಂಪತ್ತು ಬರುವುದು ಖಚಿತ
ವರ್ಷದ ಹಿಂದೆ ಇದೇ ವಿಷಯವಾಗಿ ಸಂಗನಗೌಡ ಆತನನ್ನ ಮನೆಗೆ ಕರೆಸಿ ವಾರ್ನ್ ಮಾಡಿ ಕಳುಹಿಸಿದ್ದ. ಅದೇ ಕೋಪ ಇಟ್ಟುಕೊಂಡಿದ್ದ ಪ್ರವೀಣ ಆವತ್ತು ಎಳೆನೀರು ಕೊಚ್ಚುವ ಮಚ್ಚು ತಂದು ಸಂಗನಗೌಡನ ಕಥೆಯನ್ನ ಮುಗಿಸಿಯೇಬಿಟ್ಟ. ನಮ್ಮ ಮಗಳ ಸಹವಾಸಕ್ಕೆ ಬರಬೇಡ ಎಂದು ಬುದ್ದಿವಾದ ಹೇಳಿ ವಾರ್ನ್ ಮಾಡಿದ್ದಕ್ಕೆ, ಮನಸ್ಸಲ್ಲಿ ಸೇಡಿಟ್ಟುಕೊಂಡು, ಯುವತಿಯ ತಂದೆಯನ್ನ ಮಚ್ವಿನಿಂದ ಕೊಚ್ವಿ ಬರ್ಬರವಾಗಿ ಕೊಲೆಗೈದಿದ್ದಾನೆ.
ಮುಂಜಾನೆ ಎದ್ದ ತಕ್ಷಣ ಈ ಚಿಕ್ಕ ಮಂತ್ರವನ್ನು ಹೇಳಿದರೆ ಎಲ್ಲ ದಿಕ್ಕುಗಳಿಂದ ಧನಸಂಪತ್ತು ಬರುವುದು ಖಚಿತ