ಬಾಗಲಕೋಟೆ : ರಾಜ್ಯಾದ್ಯಂತ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ರಾಜ್ಯದ ಎಲ್ಲಾ ಡ್ಯಾಮ್ ಗಳು ಭರ್ತಿಯಾಗಿವೆ ಈ ನೆಲೆಯಲ್ಲಿ ಹಲವು ಕಡೆ ಪ್ರವಾಹದ ಭೀತಿ ಕೂಡ ಎದುರಾಗಿದೆ. ಇದೀಗ ಬಾಗಲಕೋಟೆಯಲ್ಲಿ ಕೃಷ್ಣಾ ನದಿಯ ಹಿನ್ನೀರಿನಲ್ಲಿ ಐದು ವರ್ಷದ ಬಾಲಕಿ ಒಬ್ಬಳು ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಹೌದು ಕೃಷ್ಣಾ ನದಿಯ ಹಿನ್ನೀರಿನಲ್ಲಿ ಮುಳುಗಿ ಬಾಲಕಿ ದುರ್ಮರಣ ಹೊಂದಿದ್ದಾಳೆ.ಕಡಕೋಳ ಗ್ರಾಮದಲ್ಲಿ ಸಮೃದ್ಧಿ ತಿಮ್ಮಕ್ಕನವರ್ (5) ಸಾವನ್ನಪ್ಪಿದ್ದಾಳೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ತಾಯಿ ಜೊತೆಗೆ ಬಟ್ಟೆ ತೊಳೆಯಲು ತೆರಳಿದ್ದಳು. ಬಟ್ಟೆ ತೊಳೆದ ನಂತರ ಸಮೃದ್ಧಿ ತಾಯಿ ಜೊತೆ ವಾಪಸ್ ಮನೆಗೆ ಬಂದಿದ್ದಳು. ಆ ಬಳಿಕ ಕೃಷ್ಣಾ ನದಿ ಹಿನ್ನೀರು ಕಡೆಗೆ ಬಾಲಕಿ ಹೋಗಿದ್ದಾಗ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾಳೆ. ಘಟನಾ ಸ್ಥಳಕ್ಕೆ ಇದೀಗ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.