ಬಾಗಲಕೋಟೆ : ನಾಡಿನ ಶಕ್ತಿ ದೇವತೆ ಬಾದಾಮಿ ಬನಶಂಕರಿ ಜಾತ್ರಾ ಮಹೋತ್ಸವ ಇಂದಿನಿಂದ ನಿರಂತರ ಒಂದು ತಿಂಗಳು ಹಗಲು ರಾತ್ರಿ ನಡೆಯಲಿದ್ದು, ಈ ಜಾತ್ರೆ ಬನಶಂಕರಿ ಕ್ಷೇತ್ರದಲ್ಲಿ ಇಂದು ಮಹಾರಥೋತ್ಸವ ಜರುಗಲಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿ ದೇವಿ ಜಾತ್ರೆ ಇಂದಿನಿಂದ ಆರಂಭವಗಲಿದ್ದು, ನಾಡಿನ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.
ಉತ್ತರ ಕರ್ನಾಟಕ ಭಾಗದ ಪ್ರಸಿದ್ಧವಾದಂತಹ ಜಾತ್ರಾ ಮಹೋತ್ಸವ ವಾಗಿದ್ದು ನಾಡಿನ ವಿವಿಧ ಜಿಲ್ಲೆಗಳಿಂದ ಹಾಗೂ ಅಕ್ಕಪಕ್ಕದ ರಾಜ್ಯಗಳಿಂದಲೂ ಕೂಡ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದುಕೊಳ್ಳುತ್ತಾರೆ. ಈ ನೆಲೆಯಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಚಿಕ್ಕಲ್ಲೂರು ಜಾತ್ರಾ ಮಹೋತ್ಸವ
ಅದೇ ರೀತಿಯಾಗಿ ಹಿಂದಿನಿಂದ ಐದು ದಿನ ಪ್ರಸಿದ್ಧ ಚಿಕ್ಕಲ್ಲೂರು ಜಾತ್ರಾ ಮಹೋತ್ಸವ ಕೂಡ ಜರುಗಲಿದೆ ಸಿದ್ದಪ್ಪಾಜಿ ಮೂಲಸ್ಥಾನವಾಗಿರುವ ಚಿಕ್ಕಲ್ಲೂರು ಕ್ಷೇತ್ರ ಎಂದು ಹೇಳಲಾಗುತ್ತಿದ್ದು ಜನವರಿ 25 ರಿಂದ 30ರವರೆಗೆ ಪ್ರಾಣಿಬಲಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ದೇವಸ್ಥಾನದ ಆವರಣ ಗ್ರಾಮದ ಸುತ್ತಮುತ್ತ ಪ್ರಾಣಿ ಬಲಿ ನಿರ್ಬಂಧ ಹೇರಲಾಗಿದೆ.
ದೇವರ ಹೆಸರಿನಲ್ಲಿ ಯಾವುದೇ ಪ್ರಾಣಿ-ಪಕ್ಷಿ ಬಳಿ ನಡೆದಂತೆ ಆದೇಶ ಹೊರಡಿಸಲಾಗಿದ್ದು ಚಿಕ್ಕಲ್ಲೂರು ಜಾತ್ರೆಯಲ್ಲಿ ಚಂದ್ರಮಂಡಲ ಉತ್ಸವ ಹಾಗೂ ಪಂಕ್ತಿ ಸೇವೆ ಕಾರ್ಯಕ್ರಮಗಳು ಜರಗಳಿವೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಸಾಗರ ಈ ಜಾತ್ರೆಗೆ ಆಗಮಿಸಲಿದ್ದಾರೆ ಮುಂಜಾಗ್ರತಾ ಕ್ರಮವಾಗಿ ಈಗ ಚಿಕ್ಕಲ್ಲೂರು ನಲ್ಲಿ ಪೊಲೀಸ್ ಬಿಗಿ ಬಂದೋಬಸ್ ವ್ಯವಸ್ಥೆ ಮಾಡಲಾಗಿದೆ.