ಬಾಗಲಕೋಟೆ : ಮೇಲಾಧಿಕಾರಿಗಳ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಕಂ ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ನಡೆದಿದೆ.
ಹೌದು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ತಮ್ಮ ಮನೆಯಲ್ಲಿ ತಡರಾತ್ರಿ ಚಾಲಕ ಕಂ ಕಂಡಕ್ಟರ್ ಶ್ರೀಶೈಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬೀಳಗಿ ಹನಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
2022 ರಲ್ಲಿ ಮೇಲಾಧಿಕಾರಿಗಳ ಕಿರುಕುಳದ ಬಗ್ಗೆ ಶ್ರೀಶೈಲ್ ಮಾತನಾಡಿದರು ಅಲ್ಲದೆ ಮೇಲಾಧಿಕಾರಿಗಳ ಕಿರುಕುಳದ ಕುರಿತು ಶ್ರೀಶೈಲ ವಿಡಿಯೋ ಕೂಡ ಮಾಡಿದ್ದ ಹಳೆ ವಿಡಿಯೋ ಕೂಡ ವೈರಲ್ ಆಗಿತ್ತು.