ಬೆಂಗಳೂರು: ತಿರುಮಲ ಗಿರಿ ನಿವಾಸ ತಿಮ್ಮಪ್ಪನ ಲಡ್ಡು ಪ್ರಸಾದ ವಿವಾದಕ್ಕೆ ಕಾರಣವಾದ ನಂತ್ರ, ಭಕ್ತರಿಗೆ ದೊರೆಯೋದು ಕಡಿಮೆಯಾಗಿದೆ. ಇದೇ ಹೊತ್ತಲ್ಲಿ ಬೆಂಗಳೂರಲ್ಲೂ ತಿಮ್ಮಪ್ಪನ ಭಕ್ತರಿಗೆ ಬ್ಯಾಡ್ ನ್ಯೂಸ್ ಎನ್ನುವಂತೆ ಇನ್ನೂ ಒಂದು ವಾರದ ಲಡ್ಡು ಪ್ರಸಾದ ದೊರೆಯೋದಿಲ್ಲ.
ಈ ಬಗ್ಗೆ ಬೆಂಗಳೂರಿನ ಟಿಟಿಡಿ ದೇವಸ್ಥಾನದ ಸೂಪರಿಟೆಂಡೆಂಟ್ ಜಯಂತಿ ಮಾಹಿತಿ ನೀಡಿದ್ದು, ಬೆಂಗಳೂರಲ್ಲಿ ತಿರುವತಿ ತಿಮ್ಮಪ್ಪನ ಲಡ್ಡು ಪ್ರಸಾದ ಇನ್ನೂ ಒಂದು ವಾರ ಲಭ್ಯವಿರೋದಿಲ್ಲ. ಅಕ್ಟೋಬರ್ 13ರವರೆಗೆ ಸಿಗುವುದಿಲ್ಲ ಎಂಬುದಾಗಿ ಹೇಳಿದ್ದಾರೆ.
ಅಂದಹಾಗೇ ಈಗಾಗಲೇ ಕಳೆದ ಶುಕ್ರವಾರದಿಂದಲೇ ಬೆಂಗಳೂರಿನ ಟಿಟಿಡಿಯಲ್ಲಿ ತಿರುಪತಿ ತಿಮ್ಮಪ್ಪನ ಪ್ರಸಾದವಾಗಿರುವಂತ ಲಡ್ಡು ಪ್ರಸಾದ ಸ್ಥಗಿತಗೊಂಡಿತ್ತು. ಯಾವಾಗ ವಿತರಣೆ ಆರಂಭವಾಗಲಿದೆ ಎಂಬುದಾಗಿ ಹಲವರು ಕೇಳುತ್ತಿದ್ದರು. ಈಗ ಇನ್ನೂ ಒಂದು ವಾರದ ಬೆಂಗಳೂರಲ್ಲಿ ಲಡ್ಡು ಪ್ರಸಾದ ಸಿಗುವುದಿಲ್ಲ ಎಂಬುದಾಗಿ ಟಿಟಿಡಿ ಸ್ಪಷ್ಟ ಪಡಿಸಿದೆ.
ಎಲ್ಲರ ಒಳಿತಿಗಾಗಿ ಅರುಣಾಚಲೇಶ್ವರನಲ್ಲಿ ಪ್ರಾರ್ಥನೆ: ಡಿಸಿಎಂ ಡಿ.ಕೆ ಶಿವಕುಮಾರ್
BREAKING : ಮಾಜಿ ಸಚಿವ ಬಿ. ಶ್ರೀರಾಮುಲು ಫೇಸ್ ಬುಕ್, ಇನ್ ಸ್ಟಾಗ್ರಾಂ’ ಖಾತೆ ಹ್ಯಾಕ್