ಬೆಂಗಳೂರು : ರಾಜ್ಯದಲ್ಲಿ ನೈರುತ್ಯ ಮುಂಗಾರು ಮಳೆಯಿಂದ ತೀವ್ರ ಹಾನಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಇದೀಗ ರಾಜ್ಯ ಸರ್ಕಾರ ನಿರ್ಧರಿಸಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಈ ವಿಚಾರವಾಗಿ ಮನವಿ ಸಲ್ಲಿಸಲು ಸಂಪುಟ ಸಭೆ ನಿರ್ಧರಿಸಿದೆ.
ಭಾರಿ ಮಳೆ ಹಾಗೂ ನದಿ ಪ್ರವಾಹದಿಂದ ಹಾನಿಗೊಳಗಾದಂತಹ ಪ್ರದೇಶಗಳು, ಮಳೆ ಹಾಗೂ ಪ್ರವಾಹದಿಂದ ಮೂಲಸೌಕರ್ಯಗಳ ಹಾನಿ, ರಸ್ತೆ, ಸೇತುವೆಗಳು ಸೇರಿ 5000 ಕೋಟಿ ರೂಪಾಯಿಗೂ ಮೌಲ್ಯದ ಸಾರ್ವಜನಿಕ ಆಸ್ತಿ ನಷ್ಟವನ್ನ ಸರ್ಕಾರ ಅಂದಾಜು ಮಾಡಿದೆ.
ಮೂಲಸೌಕರ್ಯ ಪುನರ್ ನಿರ್ಮಾಣಕ್ಕೆ ಕೇಂದ್ರದ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹಾಗಾಗಿ ಒಟ್ಟು 1,545.23 ಕೋಟಿ ಆರ್ಥಿಕ ಸಹಾಯ ಕೋರಲು ನಿರ್ಧರಿಸಿದೆ. ಈ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಚೇತರಿಕೆ ಪುನರ್ ನಿರ್ಮಾಣಕ್ಕೆ ಮನವಿ ಸಲ್ಲಿಸಲು ಕ್ಯಾಬಿನೆಟ್ ಮೀಟಿಂಗ್ ನಲ್ಲಿ ತೀರ್ಮಾನಿಸಲಾಯಿತು. ಕ್ಯಾಬಿನೆಟ್ ಅನುಮೋದನೆ ಹಿನ್ನೆಲೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಲಿದೆ.








