ಬೆಂಗಳೂರು : ಸಿಲಿಕಾನ್ ಸಿಟಿಯ ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾಗುತ್ತಿರೋ ಹಿನ್ನೆಲೆ ಗೌರಿ – ಗಣೇಶ ಹಬ್ಬ ಆಚರಣೆಯಲ್ಲಿ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಈ ಬಗ್ಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಜತೆ ಮಾತಾಡ್ತೇವೆ. ಹಬ್ಬದ ವಿಚಾರ ಅವರ ಮುಂದಿಟ್ಟು ಸಲಹೆ ಪಡೆಯುತ್ತೇವೆ ಅವರು ಕೊಡುವ ಸಲಹೆಯಂತೆ ಮಾರ್ಗಸೂಚಿ ರಿಲೀಸ್ ಮಾಡಲಾಗುತ್ತದೆ. ಗಣೇಶ ಹಬ್ಬದ ಆಚರಣೆಗೆ ನಿರ್ಬಂಧ ಬೇಕಾಗುತ್ತವೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ ರಂದೀಪ್ ಹೇಳಿಕೆ ನೀಡಿದ್ದಾರೆ.