ಕಾಸರಗೋಡು: ಅನಂತಪುರಂ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಅತಿ ದೊಡ್ಡ ವೈಶಿಷ್ಟ್ಯವಾದ ದೇವರ ಮೊಸಳೆ ʻಬಬಿಯಾʼ (75) ನಿನ್ನೆ ರಾತ್ರಿ ಮೃತಪಟ್ಟಿದೆ.
ಕೇರಳ ರಾಜ್ಯದ ಕಾಸರಗೋಡಿನಲ್ಲಿ ಅನಂತ ಪದ್ಮನಾಭಸ್ವಾಮಿ ದೇವಾಲಯದ ಕೆರೆ ಬಳಿಯ ಸಸ್ಯಹಾರಿ ಮೊಸಳೆ ಬಾಬಿಯಾ ಕೇವಲ ಸಸ್ಯಹಾರಿ ಮಾತ್ರವಾಗಿತ್ತು. ಹೌದು, ಶ್ರೀಅನಂತ ಪದ್ಮನಾಭ ಸ್ವಾಮಿ ದೇವಾಲಯದ ಪ್ರಸಾದವನ್ನು ಸೇವಿಸುವ ಮೂಲಕ 70 ವರ್ಷಗಳಿಗೂ ಹೆಚ್ಚು ಕಾಲ ದೇವಾಲಯದ ಸರೋವರದಲ್ಲಿ ವಾಸಿಸುತ್ತಿತ್ತು.
ಬಬಿಯಾ ಪ್ರತಿದಿನ ದೇವರ ಮಧ್ಯಾಹ್ನದ ಪೂಜೆಯ ನಂತರ ನೀಡಲಾಗುವ ದೇವಾಲಯದ ಪ್ರಸಾದದ ಮೇಲೆ ಮಾತ್ರ ವಾಸಿಸುತ್ತಿತ್ತು. ಬೇಯಿಸಿದಅನ್ನ ಹಾಗೂ ಬೆಲ್ಲವನ್ನು ಮೊಸಳೆಗೆ ತಿನ್ನಿಸಲಾಗುತ್ತಿತ್ತು ಎಂದು ಹೇಳುತ್ತಾರೆ ಸ್ಥಳೀಯರು.
ಕ್ಷೇತ್ರದಲ್ಲೊಂದು ಈ ಮೊಸಳೆ ಇರುವುದರಿಂದಲೇ ಅನಂತಪುರ ಕ್ಷೇತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆದಿತ್ತು. ಸ್ವಾತಂತ್ರ್ಯ ಪೂರ್ವದಲ್ಲೇ ಕ್ಷೇತ್ರದಲ್ಲಿ ಮೊಸಳೆ ಇತ್ತು. ಅದನ್ನ ಈ ಪ್ರದೇಶದಲ್ಲಿ ಮಿಲಿಟರಿ ಕ್ಯಾಂಪ್ ಹಾಕಿದ್ದ ಬ್ರಿಟೀಷರು ಗುಂಡಿಕ್ಕಿ ಕೊಂದಿದ್ದರಂತೆ. ತದನಂತರ ಮತ್ತೊಂದು ಮೊಸಳೆ ಮರಿ ತಾನಾಗಿಯೇ ಕೆರೆಯಲ್ಲಿ ಪ್ರತ್ಯಕ್ಷಗೊಂಡಿತ್ತು. ಅದಕ್ಕೆ ಬಬಿಯಾ ಎಂದು ಹೆಸರಿಸಲಾಗಿತ್ತು ಎಂದು ಹೇಳಲಾಗಿದೆ.
ಇನ್ನೂ, ದೇವಸ್ಥಾನಕ್ಕೆ ಬಂದ ಭಕ್ತರಿಗೆ ಬಬಿಯಾ ಮೊಸಳೆ ಯಾವತ್ತೂ ಕೂಡ ತೊಂದರೆ ನೀಡಿಲ್ಲ. 75 ವರ್ಷದ ಬಬಿಯಾ ಈ ಕೊಳದಲ್ಲಿ ವಾಸಿಸುತ್ತಿದೆ. ಈ ಮೊಸಳೆಯು ಕೊಳದಲ್ಲಿರುವ ಮೀನುಗಳನ್ನು ಸಹ ತಿನ್ನುತ್ತಿರಲಿಲ್ಲ. ಸಂಪೂರ್ಣ ಸಸ್ಯಾಹಾರಿಯಾಗಿರುವ ಬಬಿಯಾಗೆ ಅರ್ಚಕರು ದೇವರಿಗೆ ಅರ್ಪಿಸಿದ ನೈವೇದ್ಯ ನೀಡುತ್ತಾರೆ. ಬಬಿಯಾ ಅದನ್ನೇ ತಿಂದು ಜೀವಿಸುತ್ತಿತ್ತು. ಹೀಗಾಗಿ ಇದು ಸಸ್ಯಾಹಾರಿ ಮೊಸಳೆ ಎಂದೇ ಪ್ರಖ್ಯಾತ. ವರ್ಷದ ಎಲ್ಲಾ ದಿನವೂ ಶುದ್ಧ ನೀರಿನಿಂದ ತುಂಬಿರುವ ಈ ಕೆರೆಯೇ ಮೊಸಳೆಯ ವಾಸಸ್ಥಾನ. ದೇವರ ನೈವೇದ್ಯವೇ ಇದಕ್ಕೆ ನಿತ್ಯ ಆಹಾರ
ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಈ ಮೊಸಳೆಯ ದರ್ಶನ ಪಡೆದೇ ಹೋಗುತ್ತಿದ್ದರು. ಇದರ ದರ್ಶನವನ್ನು ಭಕ್ತರು ಮಂಗಳಕರವೆಂದು ಪರಿಗಣಿಸುತ್ತಾರೆ. ಕಾಲಕಾಲಕ್ಕೆ ಮೊಸಳೆಯು ಸರೋವರದ ಬಿಲದಿಂದ ದಡಕ್ಕೆ ಬಂದು ದೇಗುಲವನ್ನು ಪ್ರವೇಶಿಸುತ್ತಿತ್ತು. ಒಮ್ಮೆ ಬಬಿಯಾವನ್ನು ದೇಗುಲದ ಮುಂದೆ ‘ದರ್ಶನ’ ಮಾಡಿದ ದೇವಾಲಯದ ಅರ್ಚಕ ತನ್ನ ಮೊಬೈಲ್ ಫೋನ್ನಲ್ಲಿ ಅದನ್ನು ರೆಕಾರ್ಡ್ ಮಾಡಿದರು. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
BIGG NEWS : ಮಹಾರಾಷ್ಟ್ರದ ಕನ್ನೇರಿಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ 3 ಕೋಟಿ ಅನುದಾನ : ಸಿಎಂ ಬೊಮ್ಮಾಯಿ ಭರವಸೆ