ಇಂಗ್ಲೆಂಡ್‌ : ಅಮ್ಮ ಸೇವಿಸಿದ ಆಹಾರದ ರುಚಿಯಿಂದ ಗರ್ಭದಲ್ಲಿರುವ ಭ್ರೂಣ(Womb)ಗಳು ಹೇಗೆ ರಿಯಾಕ್ಷನ್‌ ಮಾಡುತ್ತವೆ ಎಂಬುದನ್ನು ಹೊಸ ಅಧ್ಯಯನವು ಬಹಿರಂಗಪಡಿಸಿದೆ.

ಹೌದು, ಭ್ರೂಣಗಳು ತಮ್ಮ ತಾಯಿ ಸೇವಿಸುವ ಎಲೆಕೋಸಿನ ರುಚಿಗೆ ʻಅಳುʼವಂತೆ ಮುಖ ಮಾಡಿದರೆ, ಕ್ಯಾರೆಟ್‌ ತಿಂದಾಗ ʻನಗುʼತ್ತಾರೆ ಎಂದು ಈ ವಾರ ಬಿಡುಗಡೆಯಾದ ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಈ ಅಧ್ಯಯನದ ಸಂಶೋಧನೆಗಳು ʻಗರ್ಭದಲ್ಲಿರುವ ಭ್ರೂಣಗಳು ತಾಯಿ ತಿಂದ ವಿಭಿನ್ನ ಆಹಾರದ ರುಚಿಗಳನ್ನು ಹೇಗೆ ಗ್ರಹಿಸುತ್ತವೆʼ ಎಂದು ಅರ್ಥಮಾಡಿಕೊಳ್ಳಲು ಸಹಾಯಕವಾಗಿದೆ ಎಂದು ಸೇಜ್ ಜರ್ನಲ್ಸ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಸಂಶೋಧಕರು ಬರೆದಿದ್ದಾರೆ.

ಇಂಗ್ಲೆಂಡ್‌ನಲ್ಲಿ ಸುಮಾರು 100 ಮಹಿಳೆಯರ ಆರೋಗ್ಯಕರ ಭ್ರೂಣಗಳನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ. ಸಂಶೋಧಕರು ತಾಯಂದಿರಿಗೆ ಎರಡು ಆಹಾರಗಳ ರುಚಿ ಹೊಂದಿರುವ ಕ್ಯಾಪ್ಸುಲ್‌ಗಳನ್ನು ನೀಡಿದರು. 35 ಮಹಿಳೆಯರಿಗೆ ಎಲೆಕೋಸಿನ ಕ್ಯಾಪ್ಸುಲ್ ನೀಡಲಾಯಿತು. ಮತ್ತೆ 35 ಕ್ಯಾರೆಟ್ ಕ್ಯಾಪ್ಸುಲ್ ನೀಡಲಾಯಿತು. ಇನ್ನೂ, 30 ಮಂದಿ ಮಹಿಳೆಯರನ್ನು ಸುವಾಸನೆಗೆ ಒಡ್ಡಿಕೊಳ್ಳದ ನಿಯಂತ್ರಣ ಗುಂಪಿಗೆ ಸೇರಿಸಲಾಯಿತು.

ಸುಮಾರು 20 ನಿಮಿಷಗಳ ನಂತರ 4D ಅಲ್ಟ್ರಾಸೌಂಡ್ ಸ್ಕ್ಯಾನ್‌ಗಳಲ್ಲಿ ಮಕ್ಕಳ ಮುಖದ ರಿಯಾಕ್ಷನ್‌ ಹೇಗಿದೆ ಎಂದು ನೋಡಲಾಯಿತು. ಎಲೆಕೋಸಿನ ಕ್ಯಾಪ್ಸುಲ್ ತಿಂದ ತಾಯಿ ಗರ್ಭದಲ್ಲಿದ್ದ ಭ್ರೂಣಗಳು ʻಅಳುವಂತೆ ಮುಖʼ ಮಾಡಿರುವುದು ಕಂಡುಬಂದಿದೆ. ಇನ್ನೂ, ಕ್ಯಾರೆಟ್‌ ಕ್ಯಾಪ್ಸುಲ್ ತಿಂದ ತಾಯಿ ಗರ್ಭದಲ್ಲಿದ್ದ ಭ್ರೂಣಗಳುʻನಗುವಂತೆ ಮುಖ ಮಾಡಿರುವುದು ಕಂಡುಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

“ಭ್ರೂಣಗಳು ಪ್ರಬುದ್ಧವಾಗುತ್ತಿದ್ದಂತೆ ಸುವಾಸನೆಗಳಿಗೆ ಮುಖದ ಪ್ರತಿಕ್ರಿಯೆಗಳು ಬದಲಾಗುತ್ತವೆ ಎಂದು ನಾವು ಕಂಡುಕೊಂಡಿದ್ದೇವೆ” ಎಂದು ಸಂಶೋಧಕರು ತಿಳಿಸಿದ್ದಾರೆ.

BREAKING NEWS : PFI ಕಚೇರಿ ಮೇಲೆ NIA ದಾಳಿ ಖಂಡಿಸಿ, ಕೇರಳದಲ್ಲಿ ಬಂದ್‌ಗೆ ಕರೆ : KSRTC ಬಸ್‌ಗಳ ಗಾಜು ಪುಡಿಪುಡಿ

ಶಿವಮೊಗ್ಗ : ಇಂದು ಮತ್ತು ನಾಳೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ |POWER CUT

Karnataka Weather Report : ರಾಜ್ಯದಲ್ಲಿ ಇನ್ನೆರಡು ದಿನ ‘ಮಳೆ’ ಸಾಧ್ಯತೆ : ‘ಹವಾಮಾನ ಇಲಾಖೆ’ ಮುನ್ಸೂಚನೆ

Share.
Exit mobile version