ಶಿವಮೊಗ್ಗ : ವಿವಿಧ ವಿದ್ಯುತ್ ಕಾಮಗಾರಿ ನಡೆಯುತ್ತಿರೋ ಹಿನ್ನಲೆಯಲ್ಲಿ, ನಗರದ ವಿವಿಧೆಡೆ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ.

ಈ ಕುರಿತಂತೆ ಮೆಸ್ಕಾಂ ( MESCOM ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಮೆಗ್ಗಾನ್ ಆಸ್ಪತ್ರೆ, ಸಕ್ರ್ಯೂಟ್ ಹೌಸ್, ಎಸ್.ಪಿ.ಕಚೇರಿ, ಪೊಲೀಸ್ ಠಾಣೆ, ಸಾಗರ ಮುಖ್ಯರಸ್ತೆ, ಅಶೋಕ್ ನಗರ, ಎ.ಆರ್.ಬಿ.ಕಾಲೋನಿ, ನಾಗರಾಜಪುರ ಬಡಾವಣೆ, ಹೊಸಮನೆ, ಜ್ಯೋತಿ ಗಾರ್ಡನ್, ದುರ್ಗಿಗುಡಿ, ಸವರ್‍ಲೈನ್ ರಸ್ತೆ, ಎಲ್.ಐ.ಸಿ.ಕಚೇರಿ, ಮಿಷನ್ ಕಾಂಪೌಂಡ್, ಜೈಲ್ ಸರ್ಕಲ್, ವೀಣಾ ಶಾರದಾ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿನಾಂಕ 23.09.2022 ರಂದು ಬೆಳಗ್ಗೆ 9.30 ಘಂಟೆಯಿಂದ ಸಂಜೆ 6.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದಿದೆ.

ಇನ್ನೂ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ಇರುವುದರಿಂದ ಕುವೆಂಪು ರಸ್ತೆ, ಶರಾವತಿ ನಗರ ಬಿ ಬ್ಲಾಕ್, ಆದಿಚುಂಚನಗಿರಿ ಸಮುದಾಯ ಭವನ, ಬಿ.ಎಸ್.ಎನ್.ಎಲ್.ಕಚೇರಿ ಮತ್ತು ವಸತಿ ಗೃಹಗಳು, ಯುನಿಟಿ ಆಸ್ಪತ್ರೆ, ಹಂದಿಗೊಲ್ಲರ ಬೀದಿ, ಶಿವಶಂಕರ್ ಗ್ಯಾರೇಜ್, ದೈವಜ್ಞ ಕಲ್ಯಾಣ ಮಂದಿರ, ಹೊಸಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿನಾಂಕ 23.09.2022 ರಂದು ಬೆಳಗ್ಗೆ 10.00 ಘಂಟೆಯಿಂದ ಸಂಜೆ 6.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಗಾಜನೂರು ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಗಾಜನೂರು ಡ್ಯಾಂ ಮತ್ತು ಕ್ಯಾಂಪ್, ಸಕ್ಕರೆಬೈಲು, ನವೋದಯ ಶಾಲೆ, ಶಿವಮೊಗ್ಗ ಕುಡಿಯುವ ನೀರಿನ ಸ್ಥಾವರ, ಹಾಲಲಕ್ಕವಳ್ಳಿ, ಕಡೆಕಲ್, ಯರಗನಾಳ್, ಕುಸ್ಕೂರು, ಸಿದ್ಧರಹಳ್ಳಿ, ಮಂಡೇನಕೊಪ್ಪ, ಶ್ರೀಕಂಠಪುರ, ವೀರಾಪುರ, ತಟ್ಟಿಕೆರೆ, ಹೊಸಕೊಪ್ಪ, ಇಂದಿರಾನಗರ ಹೊಸಹಳ್ಳಿ, ಮುಳ್ಕೆರೆ, ಆನೆಬಿಡಾರ, ತಿಮ್ಮಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿನಾಂಕ 24.09.2022 ರಂದು ಬೆಳಗ್ಗೆ 9.00 ಘಂಟೆಯಿಂದ ಸಂಜೆ 6.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೇಳಿದೆ.

ಗ್ರಾಹಕರೇ ಎಚ್ಚರ ! ʻವಿದ್ಯುತ್‌ ಬಿಲ್‌ ಕುರಿತು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದುʼ : ಬೆಸ್ಕಾಂ ಎಂ.ಡಿ ಮಹಾಂತೇಶ ಬೀಳಗಿ ಮನವಿ

Karnataka Weather Report : ರಾಜ್ಯದಲ್ಲಿ ಇನ್ನೆರಡು ದಿನ ‘ಮಳೆ’ ಸಾಧ್ಯತೆ : ‘ಹವಾಮಾನ ಇಲಾಖೆ’ ಮುನ್ಸೂಚನೆ

Share.
Exit mobile version