ಕೇರಳ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI ) ಕಚೇರಿ ಮೇಲೆ ಎನ್‌ಐಎ ದಾಳಿ ಬೆನ್ನಲ್ಲೇ ಕೇರಳ ಬಂದ್‌ಗೆ ಪಿಎಫ್‌ಐ ಕರೆ ನೀಡಿದೆ. ಪಿಎಫ್‌ಐ ಕಾರ್ಯಕರ್ತರು ಆಲುವಾದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ (KSRTC  bus )ಗಳಿಗೆ ಕಲ್ಲು ತೂರಾಟ ಮಾಡಲಾಗಿದ್ದು, ಬಸ್ಸಿನ ಕನ್ನಡಿಗಳು ಒಡೆದು ಹಾನಿ ಮಾಡಿದ್ದಾರೆ.

ಗ್ರಾಹಕರೇ ಎಚ್ಚರ ! ʻವಿದ್ಯುತ್‌ ಬಿಲ್‌ ಕುರಿತು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದುʼ : ಬೆಸ್ಕಾಂ ಎಂ.ಡಿ ಮಹಾಂತೇಶ ಬೀಳಗಿ ಮನವಿ

ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಾರೆಂದು ಆರೋಪಿಸಿ 15 ರಾಜ್ಯಗಳಲ್ಲಿ ಪಿಎಫ್‌ಐ ಮುಖಂಡರ ಕಚೇರಿಗಳು ಮತ್ತು ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಎನ್‌ಐಎ ನೇತೃತ್ವದ ಬಹು ಏಜೆನ್ಸಿ ತನಿಖಾ ತಂಡಗಳು ನಡೆಸಿದ ದಾಳಿಗಳು, 106 ನಾಯಕರು ಮತ್ತು ಕಾರ್ಯಕರ್ತರ ಬಂಧನವನ್ನು ವಿರೋಧಿಸಿ ಪಿಎಫ್‌ಐ ಬಂದ್ ಗೆ ಕರೆ ನೀಡಿದೆ.

ಗ್ರಾಹಕರೇ ಎಚ್ಚರ ! ʻವಿದ್ಯುತ್‌ ಬಿಲ್‌ ಕುರಿತು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದುʼ : ಬೆಸ್ಕಾಂ ಎಂ.ಡಿ ಮಹಾಂತೇಶ ಬೀಳಗಿ ಮನವಿ

ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇರಳ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹರತಾಳದ ನಡುವೆಯೇ ಸರ್ಕಾರಿ ಸ್ವಾಮ್ಯದ ಕೆಎಸ್‌ಆರ್‌ಟಿಸಿ ತನ್ನ ಬಸ್ ಸೇವೆಗಳನ್ನು ಎಂದಿನಂತೆ ಮುಂದುವರಿಸುವುದಾಗಿ ಹೇಳಿದೆ.

ಗ್ರಾಹಕರೇ ಎಚ್ಚರ ! ʻವಿದ್ಯುತ್‌ ಬಿಲ್‌ ಕುರಿತು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದುʼ : ಬೆಸ್ಕಾಂ ಎಂ.ಡಿ ಮಹಾಂತೇಶ ಬೀಳಗಿ ಮನವಿ

ಪಿಎಫ್‌ಐ ಕಾರ್ಯಕರ್ತರು ಅಲುವಾ ಪ್ರದೇಶದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ಕಲ್ಲು ತೂರಾಟ ನಡೆಸಿ ಕಿಟಕಿ ಗಾಜುಗಳನ್ನು ಒಡೆದಿದ್ದಾರೆ. ಆಲುವಾದ ಕಂಬನಿಪಾಡಿ ಬಸ್ ಡಿಪೋದಲ್ಲಿ ಈ ಘಟನೆ ನಡೆದಿದೆ. ಕೋಝಿಕ್ಕೋಡ್‌ನಲ್ಲಿ ಕಳ್ಳತನದ ಘಟನೆಗಳು ವರದಿಯಾಗಿವೆ.

Share.
Exit mobile version