ನವದೆಹಲಿ:ಯೋಗಕ್ಕಾಗಿ ರಾಮ್‌ದೇವ್ ಕೊಡುಗೆ ಒಳ್ಳೆಯದು, ಆದರೆ ಪತಂಜಲಿ ಉತ್ಪನ್ನಗಳು ಬೇರೆ ವಿಷಯ ಎಂದು ಪತಂಜಲಿಯ ದಾರಿತಪ್ಪಿಸುವ ಜಾಹೀರಾತಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಬಾಬಾ ರಾಮದೇವ್ ಮೇಲೆ ಜನರಿಗೆ ನಂಬಿಕೆ ಇದೆ. ಜನರು ಅವರತ್ತ ನೋಡುತ್ತಾರೆ. ಸಾರ್ವಜನಿಕರಿಗೆ ಉತ್ತಮ ಮಾಹಿತಿ ನೀಡಬೇಕು ಎಂಬುದು ಏಕೈಕ ಕಾಳಜಿಯಾಗಿತ್ತು. ಈ ಪ್ರಕರಣದ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ. ರಾಮದೇವ್ ಬಾಬಾ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವುದರಿಂದ ನ್ಯಾಯಾಲಯ ವಿನಾಯಿತಿ ನೀಡಿದೆ.
ಭಾರತೀಯ ವೈದ್ಯಕೀಯ ಸಂಘದ ಮುಖ್ಯಸ್ಥ ಡಾ.ಆರ್.ವಿ.ಅಶೋಕನ್ ಅವರು ನ್ಯಾಯಾಲಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಆದರೆ ಅದನ್ನು ಸ್ವೀಕರಿಸಲಾಗಲಿಲ್ಲ. “ನಿಮಗೆ (ಡಾ.ಅಶೋಕನ್) ಆಕ್ಷೇಪಣೆ ಇದ್ದರೆ,ಮಾಧ್ಯಮಗಳ ಮುಂದೆ ಹೋಗುವ ಬದಲು ಕಾಮೆಂಟ್ ಅನ್ನು ತೆಗೆದುಹಾಕಲು ನೀವು ನಮಗೆ ವಿನಂತಿಸಬೇಕಿತ್ತು. ಆದ್ದರಿಂದ, ಕ್ಷಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ” ಎಂದಿದೆ.