ಬೆಂಗಳೂರು : ಶಿಕಾರಿಪುರ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವುದಿಲ್ಲ. ನನ್ನ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಣೆ ವಿಚಾರ ವಾಗಿ ಮಾಧ್ಯಮಗಳಿಗೆ ವಿಧಾನ ಪರಿಷತ್ನ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ
ಯಡಿಯೂರಪ್ಪ ಸ್ಪರ್ಧೆ ಮಾಡೋದಿಲ್ಲ ಅನ್ನೋದು ಸತ್ಯ . 80 ವರ್ಷ ಆಗಿದೆ ಟಿಕೆಟ್ ಸಿಗಲ್ಲ ಅನ್ನೋದು ಕೂಡಾ ಸತ್ಯ. ಟಿಕೆಟ್ ಸಿಗಲ್ಲ ಅಂತಾ ಯಾವಾಗ ಗೊತ್ತಾಯ್ತೋ ಆಗ ಮಗನಿಗೆ ಬಿಟ್ಟು ಕೊಟ್ಟಿದ್ದಾರೆ. ನಿಂತುಕೊಳ್ಳಲಿ ಬಿಡಿ, ಯಂಗಸ್ಟರ್ ಬರಲಿ. ಬಿ.ವೈ.ವಿಜಯೇಂದ್ರ ಯುವ ನಾಯಕ, ಚುನಾವಣೆಯಲ್ಲಿ ಸ್ಪರ್ಧಿಸಲಿ.
75 ವರ್ಷ ಆದ ಮೇಲೆ ಬಿಜೆಪಿಯಲ್ಲಿ ಟಿಕೆಟ್ ಕೊಡಲ್ಲ. BSYಗೆ ಒಂದು ವಿನಾಯಿತಿ ಕೊಟ್ಟಿದ್ರು, ಇದು ಅವರಿಗೂ ಗೊತ್ತಿದೆ. ಯಾವ ನಿರ್ಧಾರ ಕೈಗೊಳ್ಳಬೇಕೆಂದು ಯಡಿಯೂರಪ್ಪಗೆ ಗೊತ್ತಿದೆ. ಯಡಿಯೂರಪ್ಪ ಇಲ್ಲದೆ ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲ, ಅವರ ವೈಯಕ್ತಿಕ ನಿರ್ಧಾರದ ಬಗ್ಗೆ ಕಾಮೆಂಟ್ ಮಾಡಲ್ಲ. ಯಡಿಯೂರಪ್ಪನಂತಹವರ ಅನುಭವ ಆಡಳಿತ, ಸರ್ಕಾರಕ್ಕೆ ಬೇಕು ಎಂದು ವ್ಯಾಖ್ಯಾನಿಸಿದ್ದಾರೆ.