ಕೆಎನ್ಎನ್ಡಿಜಿಟಲ್ ಡೆಸ್ಕ್ : ತಂತ್ರಜ್ಞಾನ ಹೆಚ್ಚುತ್ತಿರುವಂತೆಯೇ ಆನ್ಲೈನ್ ವಂಚನೆಗಳು ಕೂಡ ಹೆಚ್ಚುತ್ತಿವೆ. ಸುಲಭವಾಗಿ ಹಣ ಗಳಿಸುವ ನೆಪದಲ್ಲಿ ಕೆಲ ವಂಚಕರು ಅಮಾಯಕರನ್ನ ವಂಚಿಸುತ್ತಿದ್ದು, ಮಕ್ಕಳಂತೆ ನಟಿಸಿ ಕೋಟಿಗಟ್ಟಲೆ ಹಣ ದೋಚುತ್ತಿದ್ದಾರೆ.
ಈ ಕ್ರಮದಲ್ಲಿ ಅಪರಿಚಿತ ನಂಬರ್ಗಳಿಂದ ಫೋನ್ ಕರೆಗಳು ಹೆಚ್ಚಾಗಿವೆ. ಅನೇಕರು ಆ ಫೋನ್ಗಳನ್ನ ಗೊತ್ತಿಲ್ಲದೇ ಎತ್ತುತ್ತಿದ್ದಾರೆ. ಫೋನ್ ಎತ್ತಿದರೇ ಫೋನ್ ಎತ್ತುವವರ ಖಾತೆಯಿಂದ ಹಣ ಮಾಯವಾಗುತ್ತದೆ. ಇಲ್ಲದಿದ್ದರೇ ಅವ್ರ ಎಲ್ಲಾ ಮಾಹಿತಿ ಹ್ಯಾಕ್ ಆಗುತ್ತದೆ.
ಸೈಬರ್ ಅಪರಾಧಿಗಳು ಈ ಕರೆಗಳನ್ನ ಮಾಡಲು ಮತ್ತು ಹೆಚ್ಚಿನ ದರೋಡೆಗಳನ್ನ ಮಾಡಲು ತಂತ್ರಜ್ಞಾನವನ್ನ ಬಳಸುತ್ತಿದ್ದಾರೆ .
ಈ ಹಿನ್ನಲೆಯಲ್ಲಿ ಟೆಲಿಕಾಂ ಇಲಾಖೆ ಅಲರ್ಟ್ ಘೋಷಣೆ ಮಾಡಿದ್ದು, ಬಳಕೆದಾರರು ಅಲರ್ಟ್ ಆಗಿರಬೇಕು. ಅದ್ರಂತೆ, +1, +92, +968, +44, +473, +809 ಮತ್ತು +900 ನಿಂದ ಪ್ರಾರಂಭವಾಗುವ ಸಂಖ್ಯೆಗಳಿಂದ ಪ್ರಾರಂಭವಾಗುವ ದೂರವಾಣಿ ಕರೆಗಳು ಅಥವಾ ವಾಟ್ಸಾಪ್ ಕರೆಗಳನ್ನ ಸ್ವೀಕರಿಸಬಾರದು ಎಂದು ಬಳಕೆದಾರರನ್ನ ಎಚ್ಚರಿದೆ.
ಒಂದ್ವೇಳೆ ಕರೆ ಸ್ವೀಕರಿಸಿದ್ದೇ ಆದಲ್ಲಿ ಅವ್ರು ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ. ಇನ್ನು ಪ್ರಶ್ನಿಸಿದ್ದು ಮಹಿಳೆಯಾಗಿದ್ರೆ, ಬ್ಲಾಕ್ ಮೇಲ್ ಮಾಡಿ ದೌರ್ಜನ್ಯ ಎಸಗುತ್ತಿದ್ದಾರೆ. ಅಲ್ಲದೇ ಅವ್ರ ಖಾತೆಯಿಂದ ನೇರವಾಗಿ ಹಣ ಕಟ್ ಆಗುತ್ತಿದೆ. ಇತ್ತೀಚಿನ ಸಮೀಕ್ಷೆಯಲ್ಲಿ ಇಂತಹ ಹಲವು ಘಟನೆಗಳು ನಡೆದಿರುವುದು ಕಂಡು ಬಂದಿದೆ.
ಹಾಗಾಗಿಯೇ ಈ ನಂಬರ್ʼಗಳಿಂದ ಕರೆಗಳು ಬಂದ್ರೆ ಯಾವುದೇ ಸಂದರ್ಭದಲ್ಲೂ ಫೋನ್ ತೆಗೆಯಬೇಡಿ ಎಂದು ಟೆಲಿಕಾಂ ಇಲಾಖೆ ಎಚ್ಚರಿಕೆ ನೀಡುತ್ತಿದ್ದು ಈ ಸಂಖ್ಯೆಗಳ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಿದೆ.