ಬೆಂಗಳೂರು : ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಹಾಗೂ ಆಯುಧ ಪೂಜೆಯ ಅಂಗವಾಗಿ ಇಂದು ನಾಡಿನಲ್ಲೇ ಆಯುಧ ಪೂಜೆಯ ಸಂಭ್ರಮದ ಮನೆ ಮಾಡಿದೆ. ನಾಡಿನ ಆದ್ಯಂತ ಇಂದು ಆಯುಧ ಪೂಜೆಯನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಇದೀಗ ಬೆಂಗಳೂರಿನಲ್ಲಿ ಕೆ ಆರ್ ಮಾರ್ಕೆಟ್ ನಲ್ಲಿ ಆಯುಧ ಪೂಜೆಗೆ ಬೇಕಾದಂತ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ಹೌದು ನಾಡಿನೆಲ್ಲೆಡೆ ಆಯುಧ ಪೂಜೆ ಹಾಗೂ ದಸರಾ ಸಂಭ್ರಮ ಕಳೆಗಟ್ಟಿದ್ದು, ಬೆಂಗಳೂರಿನ ಕೆ.ಆರ್ ಮಾರ್ಕೆಟ್ ನಲ್ಲಿ ಹೂವು, ಹಣ್ಣು ಬಾಳೆಕಂದು ಸೇರಿದಂತೆ ಪೂಜೆಗೆ ಬೇಕಾದಂತ ಎಲ್ಲ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ. ಬೆಂಗಳೂರಿನ ಕೆಆರ್ ಮಾರ್ಕೆಟ್ ನಲ್ಲಿ ಜನರು ಖರೀದಿಗೆ ಮುಗಿ ಬಿದ್ದಿದ್ದು, ಕೆಆರ್ ಮಾರ್ಕೆಟ್ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.ಹೂವು ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೂ ಸಹ ನಮ್ಮ ಜನ ಸಂಪ್ರದಾಯ ಸಂಸ್ಕೃತಿಯನ್ನು ಬಿಡಲ್ಲ.
ಹೂವು ಹಣ್ಣು ಬಾಳೆಕಂದು ಸೇರಿದಂತೆ ಅಗತ್ಯ ವಸ್ತು ಖರೀದಿಗೆ ಜನ ಮುಗಿ ಬಿದ್ದಿದ್ದಾರೆ. ಬೆಂಗಳೂರಿನ ಕೆಆರ್ ಮಾರ್ಕೆಟ್ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟೌನ್ ಹಾಲ್ ಕಡೆಯಿಂದ ಮಾರ್ಕೆಟ್ ಹೋಗುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಫ್ಲೈ ಓವರ್ ಮೇಲು ಸಹ ಸವಾರರು ವಾಹನಗಳನ್ನು ಪಾರ್ಕಿಂಗ್ ಮಾಡಿದ್ದಾರೆ. ಖರೀದಿಗೆ ಬಂದವರಿಂದ ವಾಹನಗಳ ಪಾರ್ಕಿಂಗ್ ಮಾಡಲಾಗಿದೆ.