ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22 ರಾಮ ದೇವರ ಮೂರ್ತಿಗೆ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಇದೀಗ ವಿಶ್ವವೇ ಎದುರು ನೋಡುತ್ತಿರುವ ಈ ಭವ್ಯ ಸಮಾರಂಭದಲ್ಲಿ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಶ್ರೀರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶದ ವಿವಿಧ ಕ್ಷೇತ್ರಗಳ ದಿಗ್ಗಜರಿಗೆ ಟ್ರಸ್ಟ್ ಆಹ್ವಾನ ನೀಡಿದೆ. ಸುಮಾರು 8,000 ಜನರು ಆಹ್ವಾನಿತರ ದೀರ್ಘ ಪಟ್ಟಿಯಲ್ಲಿದ್ದರೆ, ಆಯ್ದ ಪಟ್ಟಿಯಲ್ಲಿ ಪ್ರಮುಖ ರಾಜಕಾರಣಿಗಳು, ಪ್ರಮುಖ ಕೈಗಾರಿಕೋದ್ಯಮಿಗಳು, ಉನ್ನತ ಚಲನಚಿತ್ರ ತಾರೆಯರು, ಕ್ರೀಡಾಪಟುಗಳು, ಅಧಿಕಾರಿಗಳು ಮತ್ತು ರಾಜತಾಂತ್ರಿಕರು ಸೇರಿದಂತೆ ಕೆಲವೇ ನೂರು ಜನರಿದ್ದಾರೆ.
ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ರಾಮ ಮಂದಿರದ ಪ್ರತಿಷ್ಠಾಪನೆಗೆ ಆಹ್ವಾನಿತರ ಆಯ್ದ ಅತಿಥಿಗಳ ಪಟ್ಟಿಯಲ್ಲಿದ್ದಾರೆ. ಅಮಿತಾಭ್ ಬಚ್ಚನ್ ಅವರ ಕುಟುಂಬವು ಅಯೋಧ್ಯೆಗೆ ಖಾಸಗಿ ವಿಮಾನದಲ್ಲಿ ತೆರಳಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ ಎಂದು ಪಿಟಿಐ ವರದಿ ತಿಳಿಸಿದೆ. ಉದ್ಯಮಿ ಮುಖೇಶ್ ಅಂಬಾನಿ, ತಾಯಿ ಕೋಜಿಲಾಬೆನ್, ಪತ್ನಿ ನೀತಾ, ಮಕ್ಕಳಾದ ಆಕಾಶ್ ಮತ್ತು ಅನಂತ್, ಸೊಸೆ ಶ್ಲೋಕಾ ಮತ್ತು ಭಾವಿ ಸೊಸೆ ರಾಧಿಕಾ ಮರ್ಚಂಟ್ ಅವರು ಭಾಗಿಯಾಗಲಿದ್ದಾರೆ. ಸಿನಿಮಾ ರಂಗದಿಂದ ಅಜಯ್ ದೇವಗನ್, ಅಕ್ಷಯ್ ಕುಮಾರ್, ಅಲ್ಲು ಅರ್ಜುನ್, ಮೋಹನ್ ಲಾಲ್, ಅನುಪಮ್ ಖೇರ್, ಚಿರಂಜೀವಿ ಅವರಿಗೆ ಆಹ್ವಾನ ನೀಡಲಾಗಿದೆ. ಸರೋದ್ ಮಾಂತ್ರಿಕ ಅಮ್ಜದ್ ಅಲಿ, ಸಾಹಿತಿ ಮನೋಜ್ ಮುಂತಶಿರ್ ಮತ್ತು ಪತ್ನಿ, ಸಾಹಿತಿ ಪ್ರಸೂನ್ ಜೋಶಿ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಚಂದ್ರಪ್ರಕಾಶ್ ದ್ವಿವೇದಿ ಅವರನ್ನು ಆಹ್ವಾನಿಸಲಾಗಿದೆ. ಆದಿತ್ಯ ಬಿರ್ಲಾ ಗ್ರೂಪ್ ಮುಖ್ಯಸ್ಥ ಕುಮಾರ್ ಮಂಗಲಂ ಬಿರ್ಲಾ ಮತ್ತು ಪತ್ನಿ ನಿರಜಾ, ಪಿರಮಲ್ ಗ್ರೂಪ್ ಮುಖ್ಯಸ್ಥ ಅಜಯ್ ಪಿರಮಲ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯ ಆನಂದ್ ಮಹೀಂದ್ರಾ, ಟಿಸಿಎಸ್ ಸಿಇಒ ಕೆ.ಕೃತಿವಾಸನ್ ಅವರಿಗೆ ಆಹ್ವಾನ ನೀಡಲಾಗಿದೆ. ಡಾ ರೆಡ್ಡೀಸ್ ಫಾರ್ಮಾಸ್ಯುಟಿಕಲ್ಸ್ ನ ಕೆ ಸತೀಶ್ ರೆಡ್ಡಿ, ಝೀ ಎಂಟರ್ಟೈನ್‌ಮೆಂಟ್ ಎಂಟರ್ ಪ್ರೈಸಸ್ ಸಿಇಒ ಪುನಿತ್ ಗೋಯೆಂಕಾ, ಎಲ್ ಆಂಡ್ ಟಿ ಸಿಇಒ ಎಸ್ ಎನ್ ಸುಬ್ರಹ್ಮಣ್ಯನ್ ಮತ್ತು ಅವರ ಪತ್ನಿ, ಡಿವಿಸ್ ಲ್ಯಾಬೋರೇಟರೀಸ್‌ನ ದುರಳಿ ದಿವಿ, ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ, ಜಿಂದಾಲ್ ಸ್ಟೀಲ್ ಮತ್ತು ಪವರ್ ಮುಖ್ಯಸ್ಥ ನವೀನ್ ಜಿಂದಾಲ್ ಮತ್ತು ಮೇದಾಂತ ಗ್ರೂಪ್ ನ ನರೇಶ್ ಟ್ರೆಹಾನ್ ಇದ್ದಾರೆ. ಲೋಕಸಭೆ ಮಾಜಿ ಸ್ಪೀಕರ್ ಮೀರಾ ಕುಮಾರ್, ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಕೂಡಾ ಆಯ್ದ ಅತಿಥಿಗಳ ಪಟ್ಟಿಯಲ್ಲಿದ್ದಾರೆ. ಜಿ20 ಶೆರ್ಪಾ ಅಮಿತಾಭ್ ಕಾಂತ್, ಮಾಜಿ ರಾಜತಾಂತ್ರಿಕ ಅಮರ್ ಸಿನ್ಹಾ, ಮಾಜಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮತ್ತು ಮುಕುಲ್ ರೋಹಟಗಿ ಮತ್ತು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಪಟ್ಟಿಯಲ್ಲಿರುವ ಇತರ ಹೆಸರುಗಳಾಗಿವೆಯಾಗಿದೆ.