ಬೆಂಗಳೂರು: ಬುದ್ದಿಮಾಂದ್ಯತೆ ಹೊಂದಿರುವ ಶೇ. 60ರಷ್ಟು ಜನರು ತಮ್ಮ ಇಳಿವಯಸ್ಸಿನಲ್ಲಿ ಅಲ್ಜೈಮರ್ ಕಾಯಿಲೆಗೆ ಒಳಗಾಗುತ್ತಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆ ನರವಿಜ್ಞಾನ ಎಪಿಲೆಪ್ಟಾಲಜಿ ಮತ್ತು ಸ್ಲೀಪ್ ಮೆಡಿಸಿನ್‌ನ ಮುಖ್ಯಸ್ಥ ಮತ್ತು ಸಲಹೆಗಾರ ಡಾ. ಪ್ರಮೋದ್ ಕೃಷ್ಣನ್ ಹೇಳಿದ್ದಾರೆ.
“ವಿಶ್ವ ಅಲ್ಜೈಮರ್ ದಿನ”ದ ಪ್ರಯುಕ್ತ ಮಣಿಪಾಲ್ ಆಸ್ಪತ್ರೆ ಹಾಗೂ ರೋಚೆ ಡಯಾಗ್ನೋಸ್ಟಿಕ್ಸ್ ಇಂಡಿಯಾ ಸಹಯೋಗದೊಂದಿಗೆ ಆಯೋಜಿಸಿದ್ದ #MemoryVault ಅಭಿಯಾನದ ಭಾಗವಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ನಾವು ನೋಡಿದ ಎಲ್ಲಾ ಬುದ್ಧಿಮಾಂದ್ಯತೆಯ ರೋಗಿಗಳಲ್ಲಿ ಶೇ.60 ರಷ್ಟು ಜನರು ಆಲ್ಝೈಮರ್ ಕಾಯಿಲೆಗೆ ತುತ್ತಾಗಿದ್ದಾರೆ, ಇದರಲ್ಲಿ ಶೇ.70 ಕ್ಕಿಂತ ಹೆಚ್ಚು ಜನರು 2-3 ವರ್ಷಗಳ ರೋಗಲಕ್ಷಣದ ಕಂಡು ಬಂದ ಬಳಿಕ ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ಹೇಳಿದರು.
“ಅಲ್ಜೈಮರ್ ರೋಗಲಕ್ಷಣಗಳನ್ನು ಮೊದಲೇ ಗುರುತಿಸುವುದರಿಂದ ಅದನ್ನು ಚಿಕಿತ್ಸೆಮಾಡಲು ಅವಕಾಶ ದೊರೆಯಲಿದೆ. CSF ಬಯೋಮಾರ್ಕರ್‌ಗಳಂತಹ ನಿಖರ ಪರೀಕ್ಷೆ ನಡೆಸಿ, ಸೂಕ್ತ ಚಿಕಿತ್ಸೆ ನೀಡುವ ಮೂಲಕ ರೋಗವನ್ನು ನಿಧಾನಗೊಳಿಸುವ ಜೊತೆಗೆ ರೋಗಿಯ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು.
ARDSI ಅಧ್ಯಕ್ಷೆ ರೇಣು ವೋಹ್ರಾ ಮಾತನಾಡಿ, ಅಲ್ಜೈಮರ್ ಕಾಯಿಲೆಯ ಬಗ್ಗೆ ಸಮಗ್ರ ಜಾಗೃತಿ ಮೂಡಿಸುವುದು ಅತ್ಯವಶ್ಯಕ. ಆರಂಭಿಕ ಲಕ್ಷಣಗಳುಕಂಡು ಬಂದ ಕೂಡಲೇ ಚಿಕಿತ್ಸೆಗೆ ಒಳಗಾದರೆ ಮುಂದಾಗುವ ಅನಾಹುತವನ್ನು ತಡೆಯಲು ಸಾಧ್ಯವಾಗಲಿದೆ. ಇದಕ್ಕಾಗಿ ನಾವು ಮೆಮೊರಿ ಹೆಲ್ತ್ ಡೇ ಕಾರ್ಯಾಗಾರವನ್ನು ವಿನ್ಯಾಸಗೊಳಿಸಿದ್ದು, ಪ್ರತಿಯೊಬ್ಬರು ಈ ಬಗ್ಗೆ ಜಾಗೃತರಾಗುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು.
ಇನ್ನು, ಅಲ್ಜೈಮರ್ ಕಾಯಿಲೆ ಇರುವವರಿಗೆ ಕಲೆ, ಸಂಗೀತ ಮತ್ತು ಓದುವಂತಹ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದರೆ, ಅವರ ಮಾನಸಿಕ ಸಮತೋಲನ ಕಾಪಾಡಿಕೊಳ್ಳುವ ಮೂಲಕ ನೆನಪಿನ ಶಕ್ತಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಆಯೋಗದ ರಿಮೋಟ್ ಕಂಟ್ರೋಲ್ ಬೇರೆಲ್ಲೋ ಇದೆ: ಛಲವಾದಿ ನಾರಾಯಣಸ್ವಾಮಿ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ – ರಾಜ್ಯದಲ್ಲಿ ಸೆ.29ರವರೆಗೆ ಭಾರಿ ಮಳೆ